CBSE Class 10 Term 2 Science Exam : ಸಿಬಿಎಸ್‌ಇ ವಿಜ್ಞಾನ ಪರೀಕ್ಷಾ ಮಾದರಿ ಮತ್ತು ಮಾರ್ಗಸೂಚಿ ಇಲ್ಲಿದೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಟರ್ಮ್ 2 ಪರೀಕ್ಷೆಗಳು ಈಗಾಗಲೆ ಆರಂಭಗೊಂಡಿದ್ದು, ವಿಜ್ಞಾನ ವಿಷಯ ಪರೀಕ್ಷೆಯು ನಾಳೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಪರೀಕ್ಷಾ ಮಾದರಿ ಜೊತೆಗೆ ಮಾರ್ಗಸೂಚಿಗಳನ್ನು ಓದಿಕೊಳ್ಳಿ.

ಸಿಬಿಎಸ್ಇ 10ನೇ ತರಗತಿ ಟರ್ಮ್ 2 ವಿಜ್ಞಾನ ಪರೀಕ್ಷಾ ಮಾದರಿ ಮತ್ತು ಮಾರ್ಗಸೂಚಿ

ಸಿಬಿಎಸ್ಇ ಮಾದರಿ ಪತ್ರಿಕೆ ಪ್ರಕಾರ ವಿಜ್ಞಾನ ಪರೀಕ್ಷೆಯು ಎರಡು ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿದೆ. ಪ್ರವೇಶ ಪತ್ರದಲ್ಲಿ ವಿವರಿಸಿರುವಂತೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಅರ್ಧ ಘಂಟೆ ಮುಂಚಿತವಾಗಿ ತಲುಪಬೇಕಿರುತ್ತದೆ.

ಸಿಬಿಎಸ್ಇ ಟರ್ಮ್ 2 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ, ಪಾರದರ್ಶಕ ನೀರಿನ ಬಾಟಲಿ, ಸ್ಯಾನಿಟೈಸರ್ ಅನ್ನು ತೆಗೆದುಕೊಂಡು ಹೋಗಬೇಕಿರುತ್ತದೆ.

ಪರೀಕ್ಷೆಯ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

ಸಿಬಿಎಸ್ಇ 10ನೇ ತರಗತಿ ಟರ್ಮ್ 2 ವಿಜ್ಞಾನ ಪರೀಕ್ಷಾ ಮಾದರಿ ಮತ್ತು ಮಾರ್ಗಸೂಚಿ

ಸಿಬಿಎಸ್ಇ ಟರ್ಮ್ 2 ವಿಜ್ಞಾನ ಪರೀಕ್ಷೆಯ ಮಾದರಿ :

* ಸಿಬಿಎಸ್ಇ ಟರ್ಮ್ 2 ವಿಜ್ಞಾನ ಪ್ರಶ್ನೆ ಪತ್ರಿಕೆಯು ಮೂರು ವಿಭಾಗಗಳು ಮತ್ತು 15 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

* ವಿಭಾಗ ಎ ನಲ್ಲಿ ತಲಾ ಎರಡು ಅಂಕಗಳ ಏಳು ಪ್ರಶ್ನೆಗಳಿರುತ್ತವೆ.

* ವಿಭಾಗ ಬಿ ನಲ್ಲಿ ತಲಾ ಮೂರು ಅಂಕಗಳ ಆರು ಪ್ರಶ್ನೆಗಳಿರುತ್ತವೆ.

* ವಿಭಾಗ ಸಿ ನಲ್ಲಿ ತಲಾ ನಾಲ್ಕು ಅಂಕಗಳ ಎರಡು ಕೇಸ್ ಆಧಾರಿತ ಪ್ರಶ್ನೆಗಳಿರುತ್ತವೆ.

* ಎಲ್ಲಾ ಪ್ರಶ್ನೆಗಳನ್ನು ಕಡ್ಡಾಯವಾಗಿ ಉತ್ತರಿಸಬೇಕಿರುತ್ತದೆ.

* ಆಂತರಿಕ ಆಯ್ಕೆಗಳನ್ನು ಸಹ ಒದಗಿಸಲಾಗಿದೆ ಮತ್ತು ವಿದ್ಯಾರ್ಥಿಗಳು ಅಂತಹ ಪ್ರಶ್ನೆಗಳಿಗೆ ಪರ್ಯಾಯ ಪ್ರಶ್ನೆಗಳಲ್ಲಿ ಒಂದನ್ನು ಮಾತ್ರ ಉತ್ತರಿಸಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
CBSE class 10 term 2 science exam scheduled on may 10. Here is the exam pattern and guidelines for students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+