ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12ನೇ ತರಗತಿಯ ಟರ್ಮ್ 1ರ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿ ಟರ್ಮ್ 1ರ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ cbse.gov.in, cbseresults.nic.in ಗಳಲ್ಲಿ ಪರಿಶೀಲಿಸಬಹುದು. ಅದಲ್ಲದೆಯೇ ಎಸ್‌ಎಂಎಸ್ ಮೂಲಕ ಹಾಗೂ ಡಿಜಿಲಾಕರ್ ಮತ್ತು ಉಮಂಗ್‌ನಂತಹ ಅಧಿಕೃತ ಅಪ್ಲಿಕೇಶನ್‌ಗಳಲ್ಲಿ ಕೂಡ ಫಲಿತಾಂಶವನ್ನು ಪಡೆಯಬಹುದು.
ನವೆಂಬರ್-ಡಿಸೆಂಬರ್‌ನಲ್ಲಿ ನಡೆದ 10ನೇ ಮತ್ತು 12ನೇ ತರಗತಿ ಟರ್ಮ್ 1ರ ಪರೀಕ್ಷೆಗಳಿಗೆ 36 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಸಿಬಿಎಸ್ಇ 10 ಮತ್ತು 12 ನೇ ತರಗತಿಗಳಿಗೆ ಟರ್ಮ್ II ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗುತ್ತದೆ ಎಂದು ಸಿಬಿಎಸ್ಇ ಘೋಷಿಸಿದೆ. ಬೋರ್ಡ್ ಪರೀಕ್ಷೆಗಳು ಅನುಮೋದಿತ ಪರೀಕ್ಷಾ ಕೇಂದ್ರಗಳಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ. ಮಂಡಳಿಯು ಶೀಘ್ರದಲ್ಲಿ ತನ್ನ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಿದೆ. ಪರೀಕ್ಷೆಗಳು ದೀರ್ಘ ಮತ್ತು ಕಿರು ರೂಪದ ಪ್ರಶ್ನೆಗಳೊಂದಿಗೆ ವಿವರಣಾತ್ಮಕ ಸ್ವರೂಪವನ್ನು ಅನುಸರಿಸಲಿದೆ.
ಫಲಿತಾಂಶ ಪ್ರಕಟವಾದ ಬಳಿಕ ಟರ್ಮ್ 1ರ ಫಲಿತಾಂಶವನ್ನು ಮಾತ್ರ ಮಂಡಳಿಯು ಪ್ರಕಟಿಸಲಿದೆ. ಇಲ್ಲಿ ಫೇಲ್ ಅಥವಾ ಪಾಸ್ ಅಥವಾ ಪುನರಾವರ್ತಿತ ಅಭ್ಯರ್ಥಿ ಎಂಬ ಯಾವುದೇ ರೀತಿಯ ಫಲಿತಾಂಶವನ್ನು ಹೊರಹಾಕುವುದಿಲ್ಲ. ಬದಲಿಗೆ ಟರ್ಮ್ 2ರ ಪರೀಕ್ಷೆಗಳು ಮುಗಿದ ಬಳಿಕ ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಸಿಬಿಎಸ್ಇ 12ನೇ ತರಗತಿ ಟರ್ಮ್ 1ರ ಫಲಿತಾಂಶ ವೀಕ್ಷಿಸುವುದು ಹೇಗೆ ? :
ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ cbseresults.nic.in ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಲಭ್ಯವಿರುವ ಸಿಬಿಎಸ್ಇ ಟರ್ಮ್ 1ರ ಫಲಿತಾಂಶಗಳ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
ಸ್ಟೆಪ್ 4 : ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ


Click it and Unblock the Notifications











