ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) 12ನೇ ತರಗತಿ ಫಲಿತಾಂಶವನ್ನು ಇಂದು ಪ್ರಕಟ ಮಾಡಿದೆ. ಇದೀಗ ವಿದ್ಯಾರ್ಥಿಗಳು ಫಲಿತಾಂಶವನ್ನು ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ ನಲ್ಲಿ ವೀಕ್ಷಿಸಬಹುದು.

2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿಯಲ್ಲಿ ಶೇ.99.37 ಫಲಿತಾಂಶದೊಂದಿಗೆ 12.96 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೆ.99.67%ರಷ್ಟು ಫಲಿತಾಂಶದೊಂದಿಗೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿಗಳು ಶೆ.99.13%ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ದೆಹಲಿ ವಿದ್ಯಾರ್ಥಿಗಳು ಶೇ.99.84ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಸುಮಾರು 1,50,152 ಮಂದಿ ವಿದ್ಯಾರ್ಥಿಗಳು ಶೇ.90ರಷ್ಟು ಅಂಗಳನ್ನು ಗಳಿಸಿದ್ದಾರೆ, 70,004 ವಿದ್ಯಾರ್ಥಿಗಳು ಶೇ.95ರಷ್ಟು ಫಲಿತಾಂಶ ಗಳಿಸಿದ್ದಾರೆ.
ಫಲಿತಾಂಶ ಸ್ವಲ್ಪ ನಿಧಾನವಾಗಿದ್ದು, ಇನ್ನೂ 65184 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಅವರ ಫಲಿತಾಂಶ ಆಗಸ್ಟ್ 5ರಂದು ಪ್ರಕಟಿಸಲಾಗುತ್ತದೆ. ಎಲ್ಲಾ ಕೇಂದ್ರೀಯ ವಿದ್ಯಾಲಯಗಳು ಶೇ.100ರಷ್ಟು ಫಲಿತಾಂಶವನ್ನು ಪಡೆದಿವೆ.
ಈ ಭಾರಿ ಕೊರೊನಾ ಕಾರಣದಿಂದಾಗಿ ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ವಿದ್ಯಾರ್ಥಿಗಳ ಫಲಿತಾಂಶವನ್ನು 10 ಹಾಗೂ 11ನೇ ತರಗತಿಯ ಅಂತಿಮ ಫಲಿತಾಂಶ ಹಾಗೂ 12ನೇ ತರಗತಿಯ ಪ್ರೀ ಬೋರ್ಡ್ ಎಕ್ಸಾಂ ಅಂಕಗಳನ್ನಾಧರಿಸಿ ನೀಡಲಾಗುತ್ತಿದೆ.
ಸಿಬಿಎಸ್‌ಇ ವಿದ್ಯಾರ್ಥಿಗಳ ಫಲಿತಾಂಶದೊಂದಿಗೆ ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲಿ ಪ್ರಕಟ ಮಾಡಲಿದೆ. ಇದನ್ನು ಚೆಕ್ ಮಾಡಲು ಸಿಬಿಎಸ್‌ಇ ರೋಲ್ ನಂಬರ್ ಅಗತ್ಯವಿರುವುದಿಲ್ಲ ಬದಲಾಗಿ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಮತ್ತು ಸಿಬಿಎಸ್‌ಇ'ಯೊಂದಿಗೆ ರಿಜಿಸ್ಟರ್ ಆದ ಮೊಬೈಲ್ ನಂಬರ್ ಬಳಸಿ ಫಲಿತಾಂಶವನ್ನು ಪಡೆಯಬಹುದು.
ಈ ಭಾರಿ ಸಿಬಿಎಸ್ಇ ಫಲಿತಾಂಶವನ್ನು ಮೂರು ಮಾದರಿಯಲ್ಲಿ ಚೆಕ್ ಮಾಡಬಹುದು. ಸಿಬಿಎಸ್‌ಇ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳು ಒಂದು ವೇಳೆ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ನೀಡಿದರೆ ಇದರ ಮೂಲಕ ರಿಸಲ್ಟ್ ವೀಕ್ಷಿಸಬಹುದು ಅಥವಾ ಡಿಜಿಲಾಕರ್ ಮೂಲಕ ಚೆಕ್ ಮಾಡಬಹುದು ಅಥವಾ ಸಿಬಿಎಸ್‌ಇ'ಯು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೆ ನೇರವಾಗಿ ಫಲಿತಾಂಶ ಕಳುಹಿಸುವ ಅವಕಾಶವೂ ಇದೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶ ವೀಕ್ಷಿಸುವುದು ಹೇಗೆ ?:
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://cbseit.in/cbse/2021/rfinder/RollDetails.aspx ಗೆ ಭೇಟಿ ನೀಟಿ ರೋಲ್ ನಂಬರ್ ಪಡೆದುಕೊಳ್ಳಿ.
ಸ್ಟೆಪ್ 2: ವಿದ್ಯಾರ್ಥಿಗಳು https://cbseresults.nic.in/ ಅಥವಾ https://www.cbse.gov.in/ ಗೆ ಭೇಟಿ ನೀಡಿ.
ಸ್ಟೆಪ್ 3: ನಂತರ ಫಲಿತಾಂಶ 2021ರ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 5: ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ


Click it and Unblock the Notifications











