ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯು ಇಂದು ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. 2019ರ ಡಿಸೆಂಬರ್ ನಲ್ಲಿ ನಡೆದ ಸಿಟಿಇಟಿ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳು ಸಿಟಿಇಟಿ ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ https://ctet.nic.in/CMS/public/home.aspx ಗೆ ಭೇಟಿ ನೀಡಿ ಕೀ ಉತ್ತರ ಚೆಕ್ ಮಾಡಬಹುದು ಮತ್ತು ಕೀ ಉತ್ತರಗಳ ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸ್ಕ್ಯಾನ್ ಮಾಡಿದ ಸಿಟಿಇಟಿ ಓಎಂಆರ್ ಶೀಟ್ ಅನ್ನು ಡಿಸೆಂಬರ್ 25, 2019 ರವರೆಗೆ ಮಾತ್ರ ವೀಕ್ಷಿಸಲು ಅಭ್ಯರ್ಥಿಗಳಿಗೆ ಕಾಲಾವಕಾಶ ನೀಡಲಾಗಿರುತ್ತದೆ ಎಂದು ಸಿಬಿಎಸ್‌ಇ'ಯ ಅಧಿಕೃತ ಪ್ರಕಟಣೆಯಲ್ಲಿತಿಳಿಸಲಾಗಿದೆ.
ಸಿಟಿಇಟಿ ಪರೀಕ್ಷೆಯನ್ನು ಡಿಸೆಂಬರ್ 8, 2019 ರಂದು ನಡೆಸಲಾಗಿದ್ದು, ಇದೀಗ ಪರೀಕ್ಷೆಯ ಕೀ-ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಕೀ ಉತ್ತರಗಳನ್ನು ಚೆಕ್ ಮಾಡಲು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡುವ ಮೂಲಕ ಲಾಗಿನ್ ಆಗಬೇಕಿರುತ್ತದೆ.
ಸಿಬಿಎಸ್‌ಇ ಸಿಟಿಇಟಿ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆ ಇದ್ದಂತಹ ಸಂದರ್ಭದಲ್ಲಿ, ಅಭ್ಯರ್ಥಿಗಳು ದಿನಾಂಕ 25-12-2019 ರೊಳಗೆ ಆನ್‌ಲೈನ್ ಮೂಲಕವೇ ಆಕ್ಷೇಪಣೆಯನ್ನು, ಪ್ರತಿ ಕೀ ಉತ್ತರಗಳಿಗೆ 1000/-ರೂ ಪಾವತಿಸುವ ಮೂಲಕ ಸಲ್ಲಿಸಬೇಕಾಗಿದೆ.
ಅಭ್ಯರ್ಥಿಗಳು ಕೀ ಉತ್ತರವನ್ನು ನೇರವಾಗಿ ವೀಕ್ಷಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











