
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದೆ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟ ಸೋನು ಸೂದ್ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಬೋರ್ಡ್ ಪರೀಕ್ಷಾ ಕೇಂದ್ರಗಳು ಕೊರೋನಾ ಹಾಟ್ ಸ್ಪಾಟ್ ಗಳಾಗುವುದು ಬೇಡ ಹಾಗಾಗಿ ಪರೀಕ್ಷೆ ರದ್ದು ಮಾಡುವಂತೆ ಸಾಮಾಜಿಕ ಜಾಲ ತಾಣದಲ್ಲಿ ನಟ ಸೋನು ಸೂದ್ ಪೋಸ್ಟ್ ಹಾಕಿದ್ದರು. ವಿದ್ಯಾರ್ಥಿಗಳಿಗೆ ಎಲ್ಲದಕ್ಕಿಂತ ಮುಖ್ಯ ನಮ್ಮ ಜೀವನ. ಸಾಧನೆಗೆ ಹಲವಾರು ದಾರಿಗಳಿವೆ ಎಂದಿದ್ದರು.
ಇದೀಗ ಸಿಬಿಎಸ್ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ನಟ ಸೋನು ಸೂದ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
For Quick Alerts
For Daily Alerts
English summary
CBSE class 10 exams cancelled and class 12 exams postponed. Sonu sood congratulated students in social media.
Story first published: Friday, April 16, 2021, 0:12 [IST]


Click it and Unblock the Notifications











