ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಕೇಂದ್ರ ಪ್ರೌಢಶಿಕ್ಷಣ ಮಂಡಳಿಗೆ (ಸಿಬಿಎಸ್ಇ) 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಮುಂದಿನ ತರಗತಿಗೆ ಅರ್ಹತೆ ನೀಡಿ ಎಂದು ನಿರ್ದೇಶನ ನೀಡಿದೆ.

ನಾವೆಲ್ ಕೊರೋನಾ ವೈರಸ್ ಸೋಂಕು ಸಮಸ್ಯೆ ಹಿನ್ನೆಲೆಯಲ್ಲಿ ಸಿಬಿಎಸ್ಇ 1 ರಿಂದ 8ನೇ ತರಗತಿಯ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದರೆ 1 ರಿಂದ 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಮುಂದಿನ ತರಗತಿಗೆ ಪ್ರಮೋಟ್ ಮಾಡಿ ಎಂದು ಕೇಂದ್ರ ಹೆಚ್‌ಆರ್ ಡಿ ಮಿನಿಸ್ಟರ್ ರಮೇಶ್ ಪೋಖ್ರಿಯಾಲ್ ನಿಶಾಂಕ್ ರವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
9 ನೇ ತರಗತಿ ಮತ್ತು 11 ನೇ ತರಗತಿ ವಿದ್ಯಾರ್ಥಿಗಳನ್ನು ಅವರ ಶಾಲಾ ಮೌಲ್ಯಮಾಪನಗಳ ಮೂಲಕ ಮುಂದಿನ ತರಗತಿಗೆ ಹೋಗಲು ಪ್ರಮೋಟ್ ಮಾಡಲಾಗುತ್ತದೆ. ಯಾರನ್ನು ಮುಂದಿನ ತರಗತಿಗೆ ಪಾಸ್ ಮಾಡುವುದಿಲ್ಲವೋ ಅವರು ಶಾಲಾ ಆನ್ಲೈನ್ ಮತ್ತು ಆಫ್ಲೈನ್ ಪರೀಕ್ಷೆಗಳಿಗೆ ಪಾಲ್ಗೊಳ್ಳಬೇಕಾಗುತ್ತದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಅಧಿಕೃತ ವೆಬ್‌ಸೈಟ್: http://cbse.nic.in/newsite/index.html


Click it and Unblock the Notifications