ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಇಂದು 10 ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cbse.gov.in, results.cbse.nic.in. ಗೆ ಭೇಟಿ ನೀಡಿ ಅಥವಾ ಡಿಜಿಲಾಕರ್ ಮೂಲಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

CBSE 10ನೇ ತರಗತಿ ಫಲಿತಾಂಶ 2022: ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ?
ಸ್ಟೆಪ್ 1 : ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ -- cbse.gov.in, cbseresults.nic.in
ಸ್ಟೆಪ್ 2 : CBSE ತರಗತಿ 10ರ ಫಲಿತಾಂಶ 2022 ಗೊತ್ತುಪಡಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ರೋಲ್ ಸಂಖ್ಯೆಯಂತಹ ಅಗತ್ಯವಿರುವ ರುಜುವಾತುಗಳನ್ನು ನಮೂದಿಸಿ
ಸ್ಟೆಪ್ 4 : ಫಲಿತಾಂಶವು ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿಸಿಬಿಎಸ್ಇ
2022ರ 10ನೇ ತರಗತಿ ಪ್ರದೇಶವಾರು ಫಲಿತಾಂಶ :
ತಿರುವನಂತಪುರದಲ್ಲಿ ಶೇ.99.68ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಬೆಂಗಳೂರು ಮತ್ತು ಚೆನ್ನೈ ಶೇ.99.22 ಮತ್ತು ಶೇ.98.97 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗುವಾಹಟಿಯಲ್ಲಿ ಅತಿ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ (ಶೇ 82.96).
CBSE 10ನೇ ತರಗತಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ ?:
ಸ್ಟೆಪ್ 1 : ಅಧಿಕೃತ ವೆಬ್‌ಸೈಟ್ cbseresults.nic.in ಗೆ ಭೇಟಿ ನೀಡಿ
ಸ್ಟೆಪ್ 2 : "ಮಾಧ್ಯಮಿಕ ಶಾಲಾ ಪರೀಕ್ಷೆ (Xನೇ ತರಗತಿ) ಫಲಿತಾಂಶಗಳು 2022" ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ರೋಲ್ ಸಂಖ್ಯೆ, ಶಾಲಾ ಸಂಖ್ಯೆ, ಜನ್ಮ ದಿನಾಂಕಗಳನ್ನು ನಮೂದಿಸಿ
ಸ್ಟೆಪ್ 4 : ಸಿಬಿಎಸ್ಇ 10ನೇ ತರಗತಿ ಮಾರ್ಕ್ ಶೀಟ್ 2022 ಪರದೆಯ ಮೇಲೆ ಕಾಣಿಸುತ್ತದೆ
ಸ್ಟೆಪ್ 5: ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಸಿಬಿಎಸ್ಇ 2022 ತರಗತಿ 10ರ ಫಲಿತಾಂಶ ಅಂಕಿಅಂಶಗಳು :
ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ: 21,09,208
ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ: 20,93,978
ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ: 19,76,668
ತೇರ್ಗಡೆ ಪ್ರಮಾಣ: ಶೇ.94.40
CBSE 10ನೇ ತರಗತಿ ಫಲಿತಾಂಶ 2022 : 19.76 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣ :
ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗೆ 21,09,208 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 20,93,978 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು 19,76,668 ವಿದ್ಯಾರ್ಥಿಗಳು ಸಿಬಿಎಸ್ಇ ಮಾಧ್ಯಮಿಕ ಶಾಲಾ ಪರೀಕ್ಷೆ (10 ನೇ ತರಗತಿ) 2022 ರಲ್ಲಿ ಉತ್ತೀರ್ಣರಾಗಿದ್ದಾರೆ.
CBSE 10ನೇ ಫಲಿತಾಂಶ 2022: 94.40 ಶೇಕಡಾ ಉತ್ತೀರ್ಣ :
ಸಿಬಿಎಸ್ಇ 10ನೇ ತರಗತಿ ಫಲಿತಾಂಶ 2022ರಲ್ಲಿ ಮಂಡಳಿಯು ಒಟ್ಟಾರೆ ಶೇಕಡಾ 94.40 ಶೇಕಡಾವನ್ನು ದಾಖಲಿಸಿದೆ. ಈ ವರ್ಷ ಬಾಲಕಿಯರೇ ಶೇ.1.41ರಷ್ಟು ಸಾಧನೆ ಮಾಡಿದ್ದಾರೆ
CBSE 10ನೇ ತರಗತಿ ಫಲಿತಾಂಶ :
ಸಿಬಿಎಸ್ಇ ೧೦ನೇ ತರಗತಿ ಫಲಿತಾಂಶ 2022: ಟರ್ಮ್ 1 ಸಿಬಿಎಸ್ಇ ಫಲಿತಾಂಶಕ್ಕೆ ಶೇಕಡಾ 30 ವೇಟೇಜ್ ನೀಡಲಾಗುವುದು, 70 ಶೇಕಡಾವನ್ನು ಟರ್ಮ್ 2 ಪರೀಕ್ಷೆಗಳಿಗೆ ನೀಡಲಾಗುವುದು ಎಂದು CBSE ಹೇಳಿಕೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











