ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳು ಮುಗಿದಿದ್ದು, ವಿದ್ಯಾರ್ಥಿಗಳು ಈಗ 2 ನೇ ಅವಧಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಸಿಬಿಎಸ್ಇ ಪರೀಕ್ಷೆಗಳು ಏಪ್ರಿಲ್ 25 ರಿಂದ ಪ್ರಾರಂಭವಾಗಿದ್ದವು. ಪರೀಕ್ಷಾ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cbseresults.nic.in ಗೆ ಭೇಟಿ ನೀಡಿ ವೀಕ್ಷಿಸಬಹುದು. CBSE 10 ಮತ್ತು 12ನೇ ತರಗತಿ ಫಲಿತಾಂಶ ದಿನಾಂಕ ಮತ್ತು ಸಮಯದ ಬಗ್ಗೆ ಮಂಡಳಿಯು ಇನ್ನೂ ಅಧಿಕೃತ ಪ್ರಕಟಣೆಯನ್ನು ಮಾಡಬೇಕಾಗಿದೆ.

2021-22ರ ಶೈಕ್ಷಣಿಕ ಅವಧಿಗೆ ಮಂಡಳಿಯು ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸಿತು. ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆದ CBSE ಟರ್ಮ್ 1 ಬೋರ್ಡ್ ಪರೀಕ್ಷೆಗಳನ್ನು ಬಹು-ಆಯ್ಕೆಯ ಪ್ರಶ್ನೆಗಳಿಗಾಗಿ ನಡೆಸಲಾಯಿತು ಆದರೆ ಏಪ್ರಿಲ್-ಮೇ 2022 ರಲ್ಲಿ ನಡೆದ ಟರ್ಮ್ 2 ಪರೀಕ್ಷೆಗಳು ವಿಶ್ಲೇಷಣಾತ್ಮಕ ಮತ್ತು ಕೇಸ್ ಆಧಾರಿತ ಪ್ರಶ್ನೆಗಳನ್ನು ಹೊಂದಿದ್ದವು. ಮಂಡಳಿಯು ಅವಧಿ 1ರ ಫಲಿತಾಂಶಗಳನ್ನು ಇನ್ನೂ ಪ್ರಕಟಿಸಲಿಲ್ಲ. CBSE 2022 ಅಂತಿಮ ಫಲಿತಾಂಶವನ್ನು ಟರ್ಮ್ 2 ಪರೀಕ್ಷೆಯ ಫಲಿತಾಂಶದೊಂದಿಗೆ ಪ್ರಕಟಿಸಲಾಗುತ್ತದೆ.
CBSE 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳು cbseresults.nic.in ನಲ್ಲಿ ಲಭ್ಯವಿರುತ್ತವೆ. ಅಧಿಕೃತ ಫಲಿತಾಂಶ CBSE ವೆಬ್‌ಸೈಟ್ cbseresults.nic.in ಜೊತೆಗೆ 10 ನೇ ತರಗತಿ ಮತ್ತು 12 ನೇ ತರಗತಿ ಸ್ಕೋರ್‌ಕಾರ್ಡ್‌ಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್, digilocker.gov.in ನಲ್ಲಿಯೂ ಲಭ್ಯವಿರುತ್ತವೆ. ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ವಿದ್ಯಾರ್ಥಿಗಳಿಗೆ ಅವರ ರೋಲ್ ಸಂಖ್ಯೆಗಳು ಮತ್ತು ಶಾಲೆಯ ಸಂಖ್ಯೆಗಳು ಬೇಕಾಗುತ್ತವೆ.
10ನೇ, 12ನೇ ತರಗತಿಯ ಫಲಿತಾಂಶವು ಶೈಕ್ಷಣಿಕ ವರ್ಷದಲ್ಲಿ ಪಡೆದ ಅಂಕಗಳ ವಿವರಗಳನ್ನು ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ವರ್ಕ್‌ಗಳು, ಪ್ರಾಯೋಗಿಕ ಪರೀಕ್ಷೆಗಳು ಮತ್ತು ಪೂರ್ವ-ಬೋರ್ಡ್ ಪರೀಕ್ಷೆಗಳ ವಿವರಗಳನ್ನು ಹೊಂದಿರುತ್ತದೆ. CBSE 10 ನೇ ತರಗತಿ ಮತ್ತು 12 ನೇ ತರಗತಿಯ ಫಲಿತಾಂಶಗಳು ಗ್ರೇಸ್ ಮಾರ್ಕ್‌ಗಳಾಗಿ ಪಡೆದ ಅಂಕಗಳನ್ನು ಸಹ ಉಲ್ಲೇಖಿಸಬಹುದು.

CBSE ಫಲಿತಾಂಶ 2022: ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ?:
ಸ್ಟೆಪ್ 1. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ cbse.gov.in, cbseresults.nic.in ಗೆ ಭೇಟಿ ನೀಡಿ
ಸ್ಟೆಪ್ 2. ಹೋಂ ಪೇಜ್ ನಲ್ಲಿ ಲಭ್ಯವಿರುವ CBSE ಫಲಿತಾಂಶ 2022 ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ನಮೂದಿಸಿ
ಸ್ಟೆಪ್ 4. CBSE 2022 ಫಲಿತಾಂಶ ಸ್ಕ್ರೀನ್ ಮೇಲೆ ಮೂಡುವುದು, ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ


Click it and Unblock the Notifications











