ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ಯುಜಿಸಿ ನೆಟ್ ಪರೀಕ್ಷೆಯ ಫೈನಲ್ ಉತ್ತರ ಕೀ ಹಾಗೂ ಫಲಿತಾಂಶ ಪ್ರಕಟಿಸಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ರಿಸಲ್ಟ್ ಚೆಕ್ ಮಾಡಿಕೊಳ್ಳ ಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳು cbseresults.nic.in ಹಾಗೂ cbsenet.nic.in ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದಾಗಿದೆ.
ಸಿಬಿಎಸ್ಇ ನೆಟ್ ಫಲಿತಾಂಶ ಚೆಕ್ ಮಾಡುವುದು ಹೇಗೆ:
- ಸ್ಟೆಪ್ 1: ಸಿಬಿಎಸ್ಇ ಆಫೀಶಿಯಲ್ ವೆಬ್ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: ಯುಜಿಸಿ ನೆಟ್ ಎಕ್ಸಾಮಿನೇಶನ್ ಜುಲೈ 2008 ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ಅರ್ಜಿ ನಂಬರ್, ರೋಲ್ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ
- ಸ್ಟೆಪ್ 4: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 5: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ
ಎಜ್ಯುಕೇಶನ್ ಬೋರ್ಡ್ ಯುಜಿಸಿ ನೆಟ್ 2018ಪರೀಕ್ಷೆಯನ್ನ ದೇಶದಾದ್ಯಂತ 91 ನಗರಗಳಲ್ಲಿ ಹಾಗೂ 2,082 ಕೇಂದ್ರಗಳಲ್ಲಿ ನಡೆಸಿತ್ತು. 84 ವಿವಿಧ ಸಬ್‌ಜೆಕ್ಟ್ ಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 11,48,235 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
For Quick Alerts
For Daily Alerts


Click it and Unblock the Notifications











