ಸಿಇಇಡಿ ಪರೀಕ್ಷೆ 2019: ಅಕ್ಟೋಬರ್ 9 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಕಾಮನ್ ಎಂಟ್ರೇಸ್ ಎಕ್ಸಾಮಿನೇಶನ್ ಫಾರ್ ಡಿಸೈನ್ (ಸಿಇಇಡಿ) ಪರೀಕ್ಷೆಯು ಜನವರಿ 19, 2019 ರಂದು ನಡೆಯಲಿದ್ದು, ಅಕ್ಟೋಬರ್ 9, 2018 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಲಿದೆ.

By Nishmitha Bekal

ಕಾಮನ್ ಎಂಟ್ರೇಸ್ ಎಕ್ಸಾಮಿನೇಶನ್ ಫಾರ್ ಡಿಸೈನ್ (ಸಿಇಇಡಿ) ಪರೀಕ್ಷೆಯು ಜನವರಿ 19, 2019 ರಂದು ನಡೆಯಲಿದ್ದು, ಅಕ್ಟೋಬರ್ 9, 2018 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಲಿದೆ. ಈ ರಾಷ್ಟ್ರೀಯ ಮಟ್ಟದ ಪರೀಕ್ಷೆಯನ್ನ ಐಐಟಿ ಮುಂಬಯಿ ಆಯೋಜಿಸಲಿದೆ. ಐಐಟಿ ಕಾನ್ಪುರ್, ಐಐಐಟಿಡಿಎಂ ಜೊಬಲ್ಪುರ್, ಐಐಟಿ ಗುವಾಹಟಿ, ಐಐಟಿ ಮುಂಬಯಿ, ಐಐಟಿ ಹೈದ್ರಾಬಾದ್, ಐಐಟಿ ದೆಹಲಿ ಮತ್ತು ಐಐಎಸ್ಸಿ ಬೆಂಗಳೂರು ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಬೇಕಾದ್ರೆ ಈ ಪರೀಕ್ಷೆಯಲ್ಲಿ ನೀವು ಹೆಚ್ಚು ಅಂಕ ಗಳಿಸಿ ಪಾಸಾಗಲೇ ಬೇಕು.

ಸಿಇಇಡಿ ಪರೀಕ್ಷೆ 2019: ಅಕ್ಟೋಬರ್ 9 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಸಿಇಇಡ್ 2019 ವೆಬ್‌ಸೈಟ್ ಸೆಪ್ಟಂಬರ್ 25 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಕ್ಟೋಬರ್ 9 ರಿಂದ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಐಐಟಿ ಮುಂಬಯಿ, ಐಐಟಿ ಹೈದ್ರಾಬಾದ್, ಐಐಟಿ ಕಾನ್ಪುರ, ಮತ್ತು ಐಐಎಸ್ಸಿ ಬೆಂಗಳೂರು ಶಿಕ್ಷಣ ಸಂಸ್ಥೆಗಳಲ್ಲಿ ಡಿಸೈನ್ ವಿಷಯಕ್ಕೆ ಸಂಬಂಧಪಟ್ಟಂತೆ ಪಿಹೆಚ್ ಡಿ ಕೋರ್ಸ್ ಮಾಡಬೇಕೆಂದಿದ್ದರೂ ಕೂಡಾ ಈ ಪ್ರವೇಶ ಪರೀಕ್ಷೆ ಪಾಸು ಮಾಡಲೇ ಬೇಕು.

<strong>Also Read: ಎರಡೇ ತಿಂಗಳಿನಲ್ಲಿ ಕ್ಯಾಟ್ ಪರೀಕ್ಷೆ 2018 ತಯಾರಿ ಹೇಗೆ? ಇಲ್ಲಿದೆ ಟಿಪ್ಸ್ </strong>Also Read: ಎರಡೇ ತಿಂಗಳಿನಲ್ಲಿ ಕ್ಯಾಟ್ ಪರೀಕ್ಷೆ 2018 ತಯಾರಿ ಹೇಗೆ? ಇಲ್ಲಿದೆ ಟಿಪ್ಸ್

ಆಫೀಶಿಯಲ್ ವೆಬ್‌ಸೈಟ್ ಲಾಂಚ್ ಆದ ಬಳಿಕ ಅಭ್ಯರ್ಥಿಗಳಿಗೆ ಬೇಕಾಗಿರುವ ಸಿಇಇಡಿ 2019 ಪರೀಕ್ಷೆಯ ಕಂಪ್ಲೀಟ್ ಮಾಹಿತಿ ಲಭ್ಯವಾಗಲಿದೆ. ಇನ್ನು ಈ ಪರೀಕ್ಷೆಯು ಪಾರ್ಟ್ ಎ ಹಾಗೂ ಪಾರ್ಟ್ ಬಿ ಎಂದು ಎರಡು ಭಾಗಗಳಾಗಿ ನಡೆಯಲಿದೆ. ಪಾರ್ಟ್ ಎ ಪರೀಕ್ಷೆಯಲ್ಲಿ ಯಾರು ಪಾಸಾಗುತ್ತಾರೋ ಅವರು ಪಾರ್ಟ್ ಬಿ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ. ಪಾರ್ಟ್ ಬಿ ಉತ್ತರ ಪತ್ರಿಕೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಫೈನಲ್ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ.

ಸಿಇಇಡಿ 2019 ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆಯು ಅಕ್ಟೋಬರ್ 9 ರಿಂದ ನವಂಬರ್ 9, 2018 ರ ಮಧ್ಯೆ ನಡೆಯಲಿದೆ. ಸಿಇಇಡಿ 2019 ಪರೀಕ್ಷೆಯು ಜನವರಿ 19 ರಂದು ನಡೆಯಲಿದೆ ಹಾಗೂ ಸಿಇಇಡಿ 2019 ಡ್ರಾಫ್ಟ್ ಉತ್ತರದ ಕೀ ಯು ಜನವರಿ 24, 2019 ರಂದು ಪ್ರಕಟವಾಗಲಿದೆ ಎಂದು ಆಫೀಶಿಯಲ್ ಮೂಲದಿಂದ ತಿಳಿದುಬಂದಿದೆ. ಹಾಗೂ ಈ ಪರೀಕ್ಷೆಯ ಫಲಿತಾಂಶವು ಮಾರ್ಚ್ ತಿಂಗಳ ಮೊದಲ ವಾರದಂದು ಹೊರಬೀಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

<strong>Also Read: ಫೆಶರ್ಸ್ ನೀವಾಗಿದ್ರೆ ಕಾರ್ಪೋರೇಟಿವ್ ಆಫೀಸ್‌ನಲ್ಲಿ ಹೇಗೆ ದುಡಿದ್ರೆ ನಿಮ್ಮ ಸೀಟು ಉಳಿಯುತ್ತೆ</strong>Also Read: ಫೆಶರ್ಸ್ ನೀವಾಗಿದ್ರೆ ಕಾರ್ಪೋರೇಟಿವ್ ಆಫೀಸ್‌ನಲ್ಲಿ ಹೇಗೆ ದುಡಿದ್ರೆ ನಿಮ್ಮ ಸೀಟು ಉಳಿಯುತ್ತೆ

For Quick Alerts
ALLOW NOTIFICATIONS  
For Daily Alerts

English summary
Common Entrance Examination for Design (CEED) is all set to take place on January 19, 2019 and the online registration for the same begins from October 9th, 2018. This national-level exam is conducted by IIT Bombay for admissions to Masters of Design (M.Des) programme being offered by IIT Kanpur, IIITDM Jabalpur, IIT Guwahati, IIT Bombay, IIT Hyderabad, IIT Delhi and IISc Bangalore
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X