ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಎಂಜಿನಿಯರಿಂಗ್ ಸೇರಿ ಇತರೆ ಕೋರ್ಸ್ ಗಳಿಗೆ ನಡೆಸಿದ್ದ ಕ್ಯಾಶುಯಲ್ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.
ಸೀಟು ಪಡೆದಿರುವ ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಿ ಆಗಸ್ಟ್ 10ರೊಳಗೆ ಕಾಲೇಜುಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ.

ಎಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್, ಕೃಷಿ, ವಿಜ್ಞಾನ, ತೋಟಗಾರಿಕೆ, ಪಶು ಸಂಗೋಪನೆ, ಬಿ-ಫಾರ್ಮ, ಆಯುಷ್ ಮತ್ತು ಇನ್ನು ಹಲವು ವೃತ್ತಿಪರ ಕೋರ್ಸ್ ಗಳಿಗೆ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗಿತ್ತು.
ಬಿ-ಫಾರ್ಮ ಆಪ್ಷನ್ ಎಂಟ್ರಿ
ಬಿ-ಫಾರ್ಮ ಕೋರ್ಸ್ ಪ್ರವೇಶಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಹೊಸದಾಗಿ ಆಯ್ಕೆ ದಾಖಲಿಸಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಆಗಸ್ಟ್ 8 ರಂದು ರಾತ್ರಿ 8 ರಿಂದ ಆಗಸ್ಟ್ 10 ರ ಬೆಳಗ್ಗೆ 11 ಗಂಟೆವರೆಗೆ ಆಯ್ಕೆ ದಾಖಲಿಸಬಹುದಾಗಿದೆ. ಆಗಸ್ಟ್ 10 ರಂದು ಸಂಜೆ 4 ಗಂಟೆ ನಂತರ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು.
ಪ್ರವೇಶ ಪತ್ರ ಪಡೆಯಲು, ಶುಲ್ಕ ಪಾವತಿಸಲು ಆಗಸ್ಟ್ 11 ರಿಂದ ಆಗಸ್ಟ್ 14 ರವರೆಗೆ ಅವಕಾಶ ನೀಡಲಾಗಿದೆ.


Click it and Unblock the Notifications











