ಸಿಇಟಿ ಫಲಿತಾಂಶ ಇಂದು ಪ್ರಕಟ: ಫಲಿತಾಂಶ ವೀಕ್ಷಿಸಲು ಈ ಸ್ಟೆಪ್ಸ್ ಫಾಲೋ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2019ರ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರಕಟಿಸಿದರು.ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಸಂಬಂಧಪಟ್ಟ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ.ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ವೃತ್ತಿಪರ ಕೋರ್ಸುಗಳ ಆಯ್ಕೆಗಾಗಿ ನಡೆಯುವ ಸಿಇ ಟಿ ಪರೀಕ್ಷೆ ಈ ಬಾರಿ 29 ಹಾಗೂ 30ರಂದು ನಡೆದಿತ್ತು. ಒಟ್ಟು 1,94,311 ಮಂದಿ ಪರೀಕ್ಷೆ ಬರೆದಿದ್ದರು.ರಾಜ್ಯಾದ್ಯಂತ 431 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು, ಬೆಂಗಳೂರಿನ 84 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

ಸಿಇಟಿ ಫಲಿತಾಂಶ ಇಂದು ಪ್ರಕಟ

ಇಂಜಿನಿಯರಿಂಗ್‌ ವಿಭಾಗದಲ್ಲಿ ಜಫಿನ್‌ ಬಿಜು ಮೊದಲ ಸ್ಥಾನ ಪಡೆದಿದ್ದಾರೆ. ಇವರು ಬೆಂಗಳೂರಿನ ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ವಿದ್ಯಾರ್ಥಿ. ಮೊದಲ 10 ಸ್ಥಾನಗಳಲ್ಲಿ 7 ಸ್ಥಾನ ಬೆಂಗಳೂರಿಗೆ, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಸಿಕ್ಕಿದೆ.

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಪಿ ಮಹೇಶ ಆನಂದ್‌ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಬೆಂಗಳೂರಿನ ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಈ ವಿಭಾಗದಲ್ಲಿ ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 6, ಮಂಗಳೂರಿಗೆ 1, ಮೈಸೂರು ಮತ್ತು ದಾವಾಣಗೆರೆ ತಲಾ 1 ಸ್ಥಾನ ಲಭಿಸಿದೆ.

ಬಿಎಸ್ಸಿ ಕೃಷಿ ವಿಭಾಗದಲ್ಲಿ ಕೀರ್ತನ ಎಂ ಅರುಣ್‌ ಮೊದಲ ಸ್ಥಾನ ಗಳಿಸಿದ್ದಾರೆ. ಇವರು ಬೆಂಗಳೂರಿನ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿನಿ. ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 3, ಮಂಗಳೂರಿಗೆ 4, ಮೈಸೂರಿಗೆ 1, ಹಾಸನಕ್ಕೆ 1 ಮತ್ತು ಶಿವಮೊಗ್ಗಕ್ಕೆ 1 ಸ್ಥಾನ ಲಭ್ಯವಾಗಿದೆ.

<strong>ಸಿಇಟಿ ಫಲಿತಾಂಶ ನಾಳೆ ಪ್ರಕಟವಾಗಲಿದೆ: ಫಲಿತಾಂಶ ವೀಕ್ಷಿಸಲು ಈ ಸ್ಟೆಪ್ಸ್ ಫಾಲೋ ಮಾಡಿ</strong>ಸಿಇಟಿ ಫಲಿತಾಂಶ ನಾಳೆ ಪ್ರಕಟವಾಗಲಿದೆ: ಫಲಿತಾಂಶ ವೀಕ್ಷಿಸಲು ಈ ಸ್ಟೆಪ್ಸ್ ಫಾಲೋ ಮಾಡಿ

ಪಶು ವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜಿನ ವಿದ್ಯಾರ್ಥಿ ಪಿ ಮಹೇಶ್‌ ಆನಂದ್‌ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ವಿಭಾಗದಲ್ಲಿ ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 8, ದಾವಣಗೆರೆಗೆ 1 ಮತ್ತು ಮೈಸೂರಿಗೆ 1 ಸ್ಥಾನ ಲಭ್ಯವಾಗಿದೆ.

ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಕು. ಸಾಯಿ ಸಾಕೇತಿಕ ಚಕುರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ಬೆಂಗಳೂರಿನ ಮಾರತ್ತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ. ಈ ವಿಭಾಗದಲ್ಲಿ ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 7, ಮಂಗಳೂರಿಗೆ 1, ಮೈಸೂರಿಗೆ 1, ಬಳ್ಳಾರಿಗೆ 1 ಸ್ಥಾನ ಬಂದಿವೆ.

ಫಲಿತಾಂಶ ವೀಕ್ಷಿಸಲು ಈ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಅಥವಾ http://karresults.nic.in/ ಗೆ ಹೋಗಿ
ಸ್ಟೆಪ್ 2: ನಂತರ "ಸಿಇಟಿ ಫಲಿತಾಂಶ 2019" ರ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಿಮ್ಮ ರಿಜಿಸ್ಟರ್ ನಂಬರ್ ಅನ್ನು ನೀಡಿ ಲಾಗಿನ್
ಸ್ಟೆಪ್ 4: ಫಲಿತಾಂಶವು ಸ್ಕ್ರೀನ್ ಮೇಲೆ ಲಭ್ಯವಾಗುವುದು
ಸ್ಟೆಪ್ 5: ಅಭ್ಯರ್ಥಿಗಳು ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್‌ಅನ್ನು ತೆಗೆದಿಟ್ಟುಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
CET 2019 results declared today on official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X