ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2017'ರ ಸಿಟಿಟಿ ಫಲಿತಾಂಶವು ಮೇ.30ಕ್ಕೆ ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿನ್ನೆಯಷ್ಟೇ ಕಾಮೆಡ್ ಕೆ ಫಲಿತಾಂಶಗಳು ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ನಾಳಿನ ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಸಿಇಟಿ ಫಲಿತಾಂಶವನ್ನು ಮೇ 27ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಹಿಂದೆ ಪ್ರಕಟಿಸಿತ್ತು. ಆದರೆ ಸಿಬಿಎಸ್ಇ ಫಲಿತಾಂಶ ತಡವಾಗಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮೇ 30 ರಂದು ಪ್ರಕಟಗೊಳ್ಳುತ್ತಿದೆ.

ಇದೇ 30ರಂದು ಸಿಇಟಿ ಫಲಿತಾಂಶ ಪ್ರಕಟಗೊಂಡರೆ ಕೆಇಎ ಮತ್ತು ವಿದ್ಯಾರ್ಥಿಗಳಿಗೆ ದಾಖಲೆಗಳ ಪರಿಶೀಲನೆಗೆ ಕೇವಲ ಒಂದು ದಿನ ಸಿಗುತ್ತದೆ. ಕೆಇಎ ಪಟ್ಟಿ ಪ್ರಕಾರ, ದಾಖಲಾತಿಗಳ ಪರಿಶೀಲನೆ ಜೂನ್ 1ರಿಂದ ಆರಂಭವಾಗಲಿದೆ.
2017 ಮೇ 02 ಮತ್ತು 03 ರಂದು ಸಿಇಟಿ ಪರೀಕ್ಷೆಗಳು ನಡೆದಿದ್ದವು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಸಿಇಟಿ ಫಲಿತಾಂಶ ನೋಡುವ ವಿಧಾನ
- ಪ್ರಾಧಿಕಾರದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
- "ಸಿಇಟಿ 2017" ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ರಿಸಲ್ಟ್ ಪಡೆಯಿರಿ
ಹೆಚ್ಚಿನ ಮಾಹಿತಿಗಾಗಿ kea.kar.nic.in ಗಮನಿಸಿ


Click it and Unblock the Notifications











