ಸಿಇಟಿ ಮುಂದುವರಿದ ಸೀಟು ಹಂಚಿಕೆ ಮುಕ್ತಾಯ

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಪಶು ಸಂಗೋಪನೆ, ತೋಟಗಾರಿಕೆ, ಬಿ -ಫಾರ್ಮ, ಆಯುಷ್ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.ಸೀಟು ಪಡೆದ ಅಭ್ಯರ್ಥಿಗಳು ಶುಲ್ಕ ಪಾವತಿಸಿ ಕಾಲೇಜು ಪ್ರವೇಶ ಪಡೆಯಬಹುದಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೃತ್ತಿಪರ ಕೋರ್ಸುಗಳ ಎರಡನೇ ಮುಂದುವರೆದ ಸುತ್ತಿನ ಸೀಟು ಹಂಚಿಕೆಯ ಕಾರ್ಯ ಜುಲೈ 30ಕ್ಕೆ ಪೂರ್ಣಗೊಂಡಿದೆ. ಸೀಟು ಪಡೆದ ಅಭ್ಯರ್ಥಿಗಳು ಶುಲ್ಕ ಪಾವತಿಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಪಶು ಸಂಗೋಪನೆ, ತೋಟಗಾರಿಕೆ, ಬಿ -ಫಾರ್ಮ, ಆಯುಷ್ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

ಸಿಇಟಿ ಸೀಟು ಹಂಚಿಕೆ ಮುಕ್ತಾಯ

ಈ ಸುತ್ತಿನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಆಗಸ್ಟ್ 3 ರೊಳಗೆ ಶುಲ್ಕ ಪಾವತಿಸಬೇಕು. ಆಗಸ್ಟ್ 4 ರಂದು ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಈ ಸುತ್ತಿನಲ್ಲಿ ಉಳಿದಿರವ ಸೀಟುಗಳನ್ನು ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ. ಉಳಿಕೆ ಸೀಟುಗಳ ಮಾಹಿತಿಯನ್ನು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಗಮನಿಸಬಹುದಾಗಿದೆ.

ಪೂರಕ ಪರೀಕ್ಷೆ ಉತ್ತೀರ್ಣರಾದವರಿಗೆ ಅಪ್ಷನ್ ಎಂಟ್ರಿ

ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಸೀಟು ಹಂಚಿಕೆ ಆಯ್ಕೆ ದಾಖಲು ಭಾನುವಾರದಿಂದ ಆರಂಭವಾಗಿದೆ. ಆಯ್ಕೆಗಳನ್ನು ದಾಖಲಿಸಲು ಆಗಸ್ಟ್ 1 ರ ಬೆಳಿಗ್ಗೆ 10 ರವರೆಗೆ ಅವಕಾಶವಿದೆ.
ಶುಲ್ಕ ಪಾವತಿಸಲು ಮತ್ತು ಪ್ರವೇಶ ಆಜ್ಞಾ ಪತ್ರ ಪಡೆಯಲು ಆಗಸ್ಟ್ 03 ಕೊನೆಯ ದಿನವಾಗಿದೆ

ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಆಗಸ್ಟ್ 10 ರಂದು ಸಂಜೆ ನಾಲ್ಕು ಗಂಟೆಯ ನಂತರ ಸೀಟು ಹಂಚಿಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ kea.kar.nic.in

For Quick Alerts
ALLOW NOTIFICATIONS  
For Daily Alerts

English summary
Karnataka examination authority second round cet allotment completed on Monday, students who passed in supplementary now can apply for option entry
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X