ಆರ್ ಟಿ ಇ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆಗೆ ಒತ್ತಾಯ

ಅರ್ಜಿ ಸಲ್ಲಿಕೆ ವಿಳಂಭವಾಗುತ್ತಿರುವುದರಿಂದ ಪೋಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ದಿನಾಂಕ ವಿಸ್ತರಿಸಲು ಒತ್ತಾಯಿಸಿದೆ. ಪೋಷಕರಿಂದ ಹೆಚ್ಚು ಒತ್ತಡ ಬರುತ್ತಿರುವುದರಿಂದ ದಿನಾಂಕ ವಿಸ್ತರಿಸುವ ಸಾಧ್ಯತೆ ಇದೆ.

ಶಿಕ್ಷಣ ಹಕ್ಕು ಕಾಯ್ಕೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕವನ್ನು ಏಪ್ರಿಲ್ 15 ರವರೆಗೆ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ.

ದಿನಾಂಕ ವಿಸ್ತರಣೆಗೆ ಒತ್ತಾಯ

ಆರ್ ಟಿ ಇ ಅರ್ಜಿ ಸಲ್ಲಿಕೆಗೆ ಮಾರ್ಚ್ 1 ರಿಂದ ಅವಕಾಶವನ್ನು ಕಲ್ಪಿಸಲಾಗಿತ್ತು. ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಆದರೆ ಇಂಟರ್ನೆಟ್ ಸರ್ವರ್ ಸಮಸ್ಯೆಯಿಂದಾಗಿ ಮೊದಲ ವಾರದಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಾಗಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳು ಇನ್ನು ಮುಂದುವರೆದಿದ್ದು ಈಗಲೂ ಸರಿಯಾಗಿ ಅರ್ಜಿ ಪ್ರಕ್ರಿಯೆ ವಿಳಂಭವಾಗುತ್ತಿದೆ.

ಅರ್ಜಿ ಸಲ್ಲಿಕೆ ವಿಳಂಭವಾಗುತ್ತಿರುವುದರಿಂದ ಪೋಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ದಿನಾಂಕ ವಿಸ್ತರಿಸಲು ಒತ್ತಾಯಿಸಿದೆ. ಪೋಷಕರಿಂದ ಹೆಚ್ಚು ಒತ್ತಡ ಬರುತ್ತಿರುವುದರಿಂದ ದಿನಾಂಕ ವಿಸ್ತರಿಸುವ ಸಾಧ್ಯತೆ ಇದೆ.

ದಿನಾಂಕ ವಿಸ್ತರಣೆಗೆ ಒತ್ತಾಯ

ಈ ವರ್ಷ ಸುಮಾರು 1 .30 ಲಕ್ಷ ಲಭ್ಯವಿದ್ದು , ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಪ್ರಾಯೋಗಿಕ ಹಂತದಲ್ಲಿ 1440 ಅರ್ಜಿ ಸಲ್ಲಿಕೆಯಾಗಿದ್ದು ಇವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅರ್ಜಿ ಸಲ್ಲಿಸುವ ವೇಳೆ ತಪ್ಪಾಗಿದ್ದಲ್ಲಿ ಅದನ್ನು ತಿದ್ದಿಕೊಳ್ಳುವ ಅವಕಾಶ ನೀಡಲಾಗಿದೆ.

ತಾಂತ್ರಿಕ ದೋಷದಿಂದ ಪ್ರಾಯೋಗಿಕ ಅರ್ಜಿ ಸಲ್ಲಿಕೆಯ ಪ್ರಾತ್ಯಕ್ಷಿಕೆ ತೋರಿಸುವಾಗ ಮೊದಲೆರೆಡು ಬಾರಿ ಅರ್ಜಿ ಸಲ್ಲಿಕೆ ಸಾಧ್ಯವಾಗಿರಲಿಲ್ಲ, submit ಬಟನ್ ಕ್ಲಿಕ್ ಮಡಿದ ಸಂದರ್ಭದಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಕೆ ಯಶಸ್ವಿಯಾಯಿತು.

ಅರ್ಜಿ ಸಲ್ಲಿಸುವಿಕೆ ಪಾಲಕರು ತಮ್ಮ ಕಂಪ್ಯೂಟರ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಉಚಿತವಾಗಿ ಆರ್ ಟಿಇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ ಮತ್ತು ಪಿನ್ಕೋಡ್ ಮುಖ್ಯವಾಗಿದ್ದು ಆಧಾರ್ ಕಾರ್ಡ್ ಇಲ್ಲವಾದಲ್ಲಿ ಆಧಾರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಸಂಖ್ಯೆ ಪಡೆದು ಸಲ್ಲಿಸಬಹುದು. ವಿಳಾಸ ಬದಲಾಗಿದ್ದರು ಅರ್ಜಿ ನೀಡಬಹುದಾಗಿದೆ. ದಾಖಲೆಗಳ ಪರಿಶೀಲನೆ ಪಾಲಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆ ಇರುವ ಬಡಾವಣೆ ಮತ್ತು ವಾಸದ ಬಡಾವಣೆ ಪರೀಕ್ಷಿಸಿಕೊಳ್ಳಬೇಕು.

ಕಂದಾಯ ಇಲಾಖೆ, ಆಧಾರ್ ನಂಬರ್ ಸೇರಿ ದಾಖಲೆಗಳು ಅಸಲಿಯಾಗಿದ್ದರೂ ಒಮ್ಮೊಮ್ಮೆ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿನ ಇನಿಷಿಯಲ್ ಹೊಂದಾಣಿಕೆಯಾಗದೆ ತಿರಸ್ಕಾರವಾಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆನ್ಲೈನ್ ಮೂಲಕ ದೂರು ಸಲ್ಲಿಸಿದರೆ 48 ಗಂಟೆಗಳ ಒಳಗೆ ಸರಿಪಡಿಸಲಾಗುವುದು. ಇದರ ಜೊತೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ಗಳಲ್ಲಿನ ಬಡಾವಣೆಗಳು ಆಧಾರ್ ನಿಂದ ಕೈಬಿಟ್ಟಿದ್ದರೆ ಅಂಥವುಗಳ ಮಾಹಿತಿಯನ್ನು ಶಿಕ್ಷಣ ಇಲಾಖೆಗೆ ಸೇರಿಸುವ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಅಟಲ್ ಜೀ ಕೇಂದ್ರಗಳಲ್ಲಿ 15 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು www.schooleducation.kar.nic.in ಭೇಟಿ ನೀಡಿ.

More News  

For Quick Alerts
ALLOW NOTIFICATIONS  
For Daily Alerts

English summary
parents' association has urged the Department of Public Instruction to extend the date of submission. There is a possibility of extending the date
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+