ನಗುಮೊಗದಿಂದ ಚಿಯರ್ ಮಾಡುವ ಈ ಚೆಲುವೆಯರ ಕೆಲಸ ಎಷ್ಟು ಕಷ್ಟ ಇದೆ ಗೊತ್ತಾ?

ಯಾವುದೇ ಪಂದ್ಯದ ವೇಳೆ ಗ್ರೌಂಡ್ ನಲ್ಲಿ ಆಟಗಾರರು ಮಾತ್ರವಲ್ಲದೇ ಕಣ್ಣಿಗೆ ಅಟ್ರ್ಯಾಕ್ಟ್ ಆಗುವುದು ಬೇರೆ ಯಾರು ಎಂದ್ರೆ ಚಿಯರ್ ಲೀಡರ್ಸ್. ಇವರು ಮೈದಾನದಲ್ಲಿ ಪಂದ್ಯದ ಜತೆ ಜತೆ ನೋಡುಗರಿಗೆ ಇನ್ನೂ ರಸದೌತಣ ನೀಡುತ್ತದೆ.

ಯಾವುದೇ ಪಂದ್ಯದ ವೇಳೆ ಗ್ರೌಂಡ್ ನಲ್ಲಿ ಆಟಗಾರರು ಮಾತ್ರವಲ್ಲದೇ ಕಣ್ಣಿಗೆ ಅಟ್ರ್ಯಾಕ್ಟ್ ಆಗುವುದು ಬೇರೆ ಯಾರು ಎಂದ್ರೆ ಚಿಯರ್ ಲೀಡರ್ಸ್. ಇವರು ಮೈದಾನದಲ್ಲಿ ಪಂದ್ಯದ ಜತೆ ಜತೆ ನೋಡುಗರಿಗೆ ಇನ್ನೂ ರಸದೌತಣ ನೀಡುತ್ತದೆ. ಇವರು ಇಲ್ಲದ ಮೈದಾನ ನೋಡುವುದು ಬರೀ ಬೋರ್. ಪ್ರತೀ ಮ್ಯಾಚ್ ವೇಳೆ ಆಕರ್ಷಕ ತುಂಡು ಉಡುಗೆ ಧರಿಸಿ ಇವರು ಕುಣಿದು ಕುಪ್ಪಳಿಸುತ್ತಾರೆ. ಇನ್ನು ಇವರ ಕೆಲಸವೇನೆಂದರೆ ಪಂದ್ಯದ ಮಧ್ಯೆ ಅಲ್ಲಿ ನೆರೆದಿದ್ದವರಿಗೆ ತಮ್ಮ ಡ್ಯಾನ್ಸ್ ಮೂಲಕ ಮನರಂಜನೆ ನೀಡುವುದು ಹಾಗೂ ಪಂದ್ಯದಲ್ಲಿ ಇನ್ನೂ ಹೆಚ್ಚು ಇಂಟ್ರಸ್ಟಿಂಗ್ ಬರುವಂತೆ ಮಾಡುವುದು.

ನಗುಮೊಗದಿಂದ ಚಿಯರ್ ಮಾಡುವ ಈ ಚೆಲುವೆಯರ ಕೆಲಸ ಎಷ್ಟು ಕಷ್ಟ ಇದೆ ಗೊತ್ತಾ?

ಆದ್ರೆ ಸದಾ ನಗುಮೊಗದಿಂದ ಕುಣಿದು ಕುಪ್ಪಳಿಸುವ ಈ ಚಿಯರ್ ಲೀಡರ್ಸ್ ಜೀವನದ ಮತ್ತೊಂದು ಮುಖ ನಿಮಗೊತ್ತ. ಸದಾ ನಗುತ್ತಾ ಎಲ್ಲರನ್ನ ಖುಷಿ ಪಡಿಸುವ ಈ ಚಿಯರ್ ಲೀಡರ್ಸ್ ತಮ್ಮ ಅಂತರಾಳದಲ್ಲಿ ಅಳುತ್ತಾ ಇರುತ್ತಾರೆ. ಎಲ್ಲರಿಗೂ ಬಲು ಸುಲಭ ಎಂದೆನಿಸುವ ಇವರ ಕೆರಿಯರ್ ಎಷ್ಟು ನಿಜವಾಗಿಯೂ ಎಷ್ಟು ಕಷ್ಟಕರ ಎಂದು ಈ ಆರ್ಟಿಕಲ್ ನಿಮಗೆ ತಿಳಿಸುತ್ತದೆ.

ಬನ್ನಿ ಚಿಯರ್ ಲೀಡರ್ಸ್ ಎದುರಿಸುವ ಆ ಸಮಸ್ಯೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ

1) ಕೆಲಸ ಮಾತ್ರವಲ್ಲದೇ ತುಂಬಾ ಕಡಿಮೆ ಸಂಬಳ:

ಫುಟ್ಬಾಲ್ ಲೀಗ್ ವೇಳೆಯೂ ನೀವು ಚಿಯರ್ ಲೀಡರ್ಸ್ ನೋಡಿರುತ್ತೀರಿ. ಪ್ರತಿ ಔಟ್, ಇಲ್ಲ ರನ್ ಗಳಿಸಿದಾಗ ಈ ಚಿಯರ್ ಲೀಡರ್ಸ್ ಕುಣಿಯುತ್ತಾರೆ. ಹಾಗೂ ವೀಕ್ಷಕರಿಗೆ ಬೋರ್ ಆಗದಂತೆ ನೋಡಿಕೊಳ್ಳುವುದು ಇವರ ಕರ್ತವ್ಯವಾಗಿದೆ. ಒಂದು ಮ್ಯಾಚ್ ಗೆ ಕೇಔಲ ೧೦೦ ಡಾಲರ್ ಮಾತ್ರ ಸಿಗುವುದು ಎಂದು ಚಿಯರ್ ಲೀಡರೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಈಚಿಯರ್ ಲೀಡರ್ಸ್ ಗೆ ಹೆಚ್ಚುವರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕರೂ ಕೂಡಾ ಅದಕ್ಕೆ ಪ್ರತ್ಯೇಕ ಹಣ ಸಿಗುವುದಿಲ್ಲವಂತೆ

2) ಕೆಲವು ಟೀಂನಿಂದ ಹಣ ದೊರೆಯುವುದಿಲ್ಲ:

ಫುಟ್‌ಬಾಲ್ ಲೀಗ್‌ನಲ್ಲಿ ಆಡುವ ಕೆಲವು ಟೀಂ ಚಿಯರ್ ಲೀಡರ್ಸ್ ಗೆ ಯಾವುದೇ ಹಣ ನೀಡುವುದಿಲ್ಲ. ವಾರದಲ್ಲಿ ೬ ರಿಂದ ೧೫ ಗಂಟೆವರೆಗೆ ಚಿಯರ್ ಲೀಡರ್ಸ್ ಪ್ರ್ಯಾಕ್ಟೀಸ್ ಮಾಡಬೇಕಾಗುತ್ತದೆ. ಈ ಪ್ರ್ಯಾಕ್ಟೀಸ್ ವೇಳೆ ಯಾವುದೇ ರೀತಿಯ ಹಣ ಸಿಗುವುದಿಲ್ಲ

3) ಫುಲ್ ಟೈಂ ಜಾಬ್ ಗ್ಯಾರಂಟಿ ಇಲ್ಲ:

ಒಂದು ಚಿಯರ್ ಲೀಡರ್ ತಿಳಿಸಿರುವ ಪ್ರಕಾರ, ವಾರದಲ್ಲಿ ಮೂರುದಿನ ಪ್ರ್ಯಾಕ್ಟೀಸ್ ಇರುತ್ತದೆ. ಪಂದ್ಯದ ದಿನ ಇವರು ಪರ್ಫೋಮೆನ್ಸ್ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ ಚಾರಿಟಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳಲ್ಲೂ ಪರ್ಫೋಮೆನ್ಸ್ ನೀಡಬೇಕಾಗುತ್ತದೆ. ಇದರ ಬದಲಿಗೆ ಯಾವುದೇ ಹೆಚ್ಚುವರಿ ಹಣ ನೀಡುವುದಿಲ್ಲ

4) ದಂಡ ವಿಧಿಸುತ್ತಾರೆ:

ಚಿಯರ್ ಲೀಡರ್ಸ್ ವತಿಯಿಂದ ಏನಾದ್ರೂ ಚಿಕ್ಕಪುಟ್ಟ ತಪ್ಪುಗಳಾದ್ರೆ, ದಂಡ ಕೂಡಾ ವಿಧಿಸುತ್ತಾರಂತೆ. ಕೊಡುವ ಸಂಬಳಕ್ಕಿಂತ ಇವರು ವಿಧಿಸುವ ದಂಡ ಇನ್ನೂ ಹೆಚ್ಚೇ ಆಗಿರುತ್ತದೆ ಅಂತೆ.

5) ತೂಕ ಸಮತೋಲನ:

ಸ್ಪೋಟ್ಸ್ ವೇಳೆ ಆಟದ ಜತೆ ಜತೆ ಇಡೀ ಗ್ರೌಂಡ್ ನಲ್ಲಿ ಎಲ್ಲರ ಕಣ್ಣು ಚಿಯರ್ ಲೀಡರ್ಸ್ ಮೇಲಿರುತ್ತದೆ. ಹಾಗಾಗಿ ಇಡೀ ಮೈದಾನದ ಆಕರ್ಷಕ ಬಿಂದುವಾಗಿರುತ್ತಾರೆ ಚಿಯರ್ ಲೀಡರ್ಸ್. ಹಾಗಾಗಿ ಇವರು ಯಾವಾಗಲೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕೇರ್ ತೆಗೆದುಕೊಳ್ಳಬೇಕು. ಇನ್ನು ಸ್ಲಿಮ್ ಆಗಿರುವ ಇವರು ಒಂದು ಚೂರು ತೂಕ ಜಾಸ್ತಿಯಾದ್ರೆ ಸಾಕು, ಇವರನ್ನ ಬದಿಗಿಟ್ಟು ಬಿಡುತ್ತಾರಂತೆ. ಅತ್ತ ಹಣನೂ ಕೊಡಲ್ಲ, ಇತ್ತ ಕೆಲಸನೂ ಕೊಡಲ್ಲವಂತೆ.

For Quick Alerts
ALLOW NOTIFICATIONS  
For Daily Alerts

English summary
Chearleading is an activity where in participants cheer for their team as a form of encouragement. It can range from chanting slogans to intense physical activity. Some of the cheer leaders who are currently working or have worked in the past shared rtheir experience here. cheer leaders facing so many problems at working time. what that probles we will inform you read this article.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X