ಚೀನಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಇನ್ನು ಇಲ್ಲಿನ ಟೆಕ್ನಾಲಜಿ ಅಭಿವೃದ್ದಿ ಬಗ್ಗೆ ವಿಶೇಷವಾಗಿ ಹೇಳಬೇಕೆಂದಿಲ್ಲ, ಸದಾ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಇರುತ್ತದೆ ಚೀನಾ. ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಗಮನಕೊಡುತ್ತಿರುವ ಚೀನಾ ಇದೀಗ ಮತ್ತೆ ಸುದ್ದಿಯಲ್ಲಿದೆ.

ಸದಾ ಏನಾದ್ರೂ ಹೊಸ ಹೊಸ ಪ್ರಯೋಗ ಮಾಡುವ ಚೀನಾ ಇದೀಗ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದೆ ಚೀನಾ. ಭಾವನೆಗಳ ಗುರುತಿಸುವಿಕೆ ತಂತ್ರಜ್ಞಾನದಿಂದ (facial recognition technology ) ಇದೀಗ ಚೀನಾ ಮತ್ತೆ ಎಲ್ಲೆಡೆ ಸುದ್ದಿಯಾಗಿದೆ.
ಪಾಠ ಮಾಡುವ ವೇಳೆ ಮಕ್ಕಳ ಗಮನ ಎಲ್ಲಿರುತ್ತೆ. ಅವರು ಸರಿಯಾಗಿ ಪಾಠ ಕೇಳುತ್ತಿದ್ದಾರೆಯೇ, ಅವರಿಗೆ ಬೋರ್ ಆಗಿದೆಯೇ, ಹಸಿವಾಗಿದೆಯೇ, ನಿದ್ರೆ ಬರುತ್ತಿದೆಯೇ ವಿದ್ಯಾರ್ಥಿಗಳ ಮುಂತಾದ ಭಾವನೆಗಳನ್ನ ಈ ತಂತ್ರಜ್ಞಾನ ಸುಲಭವಾಗಿ ಸೆರೆಹಿಡಿಯಲಿದೆ. ಈಗಾಗಲೇ ಚೀನಾದ ಶಾಲೆಯೊಂದರಲ್ಲಿ ಇದರ ಪ್ರಯೋಗ ಕೂಡಾ ಮಾಡಲಾಗಿದೆ. ವಿದ್ಯಾರ್ಥಿಗಳು ಯಾವ ಮೂಡ್ ನಲ್ಲಿದ್ದಾರೆ ಎಂದು ಪ್ರತೀ 30 ಸೆಕಂಡಿಗೆ ಈ ತಂತ್ರಜ್ಞಾನ ಕ್ಯಾಪ್ಚರ್ ಮಾಡುತ್ತದೆ ಎಂದು ತಿಳಿಸಲಾಗಿದೆ
ಈ ಸಿಸ್ಟಮ್‌ನಿಂದ ವಿದ್ಯಾರ್ಥಿಗಳ ಪ್ರತಿಯೊಂದು ಮೂಡನ್ನ ಕೂಡಾ ಕ್ಯಾಪ್ಚರ್ ಮಾಡಬಹುದು. ಈ ಡಾಟಾ ಬೇಸ್ ನಿಂದ ಇಡೀ ಕ್ಲಾಸ್ ವಿದ್ಯಾರ್ಥಿಗಳ ವರ್ತನೆ ಬಗ್ಗೆ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಹಾಜರಾತಿಯನ್ನ ಕೂಡಾ ಸುಲಭವಾಗಿ ಚೆಕ್ ಮಾಡಬಹುದು. ಹಾಜರಾತಿ ಬಗ್ಗೆ ಡೌಟ್ ಬಂದಾಗ ಈ ಡೇಟಾಬೇಸ್ ಮೂಲಕ ಸುಲಭವಾಗಿ ಕ್ರಾಸ್ ಚೆಕ್ ಮಾಡಬಹುದು ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸುತ್ತಾರೆ.


Click it and Unblock the Notifications











