ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್(ಐಸಿಎಸ್ಇ) 10 ಮತ್ತು 12 ನೇ ತರಗತಿಗಳ ಪರೀಕ್ಷಾ ಫಲಿತಾಂಶವನ್ನು ಇಂದು ಪ್ರಕಟ ಮಾಡಲಿದೆ.
೨೦೨೦ನೇ ಸಾಲಿನ 10 ನೇ ತರಗತಿ (ಐಸಿಎಸ್ಇ) ಮತ್ತು 12 ನೇ ತರಗತಿ (ಐಎಸ್ಸಿ) ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಮಂಡಳಿಯ ಕಾರ್ಯದರ್ಶಿ ಗ್ಯಾರಿ ಅರಾಥೂನ್ ತಿಳಿಸಿದ್ದಾರೆ. ಫಲಿತಾಂಶವು ಅಧಿಕೃತ ವೆಬ್ಸೈಟ್ ಮತ್ತು ಎಸ್ಎಂಎಸ್ ಮೂಲಕ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಕೊರೋನಾ ಸಮಸ್ಯೆಯ ಹಿನ್ನೆಲೆಯಲ್ಲಿ ಬಾಕಿ ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸಿ ಎರಡು ತರಗತಿಗಳಿಗೆ ಪರ್ಯಾಯ ಮೌಲ್ಯಮಾಪನ ಯೋಜನೆಯನ್ನು ಮಂಡಳಿಯು ಘೋಷಿಸಿತ್ತು. ಅದರ ಅನ್ವಯದಂತೆ ನಡೆಸಲಾದ ಪರೀಕ್ಷೆಗಳಲ್ಲಿ ಪಡೆದ ಅತ್ಯುತ್ತಮ ಶೇಕಡಾವಾರು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯ ಮೌಲ್ಯಮಾಪನ ಮಾಡಲಾಗುವುದು ಮತ್ತು ಅವರ ಆಂತರಿಕ ಮೌಲ್ಯಮಾಪನ ಅಂಕಗಳು ಮತ್ತು ಯೋಜನಾ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಂತರಿಕ ಮೌಲ್ಯಮಾಪನ ಸೂತ್ರವು 12 ನೇ ತರಗತಿಗೆ ಅನ್ವಯವಾಗಲಿದೆ, ಅದು ಭಾರತೀಯ ಶಾಲಾ ಪ್ರಮಾಣಪತ್ರ (ಐಎಸ್ಸಿ) ಪರೀಕ್ಷೆಯಾಗಿದ್ದು, 10 ನೇ ತರಗತಿಗೆ ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ (ಐಸಿಎಸ್ಇ), ಯೋಜನಾ ಕಾರ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.