ICSE Class 10, ISC Class 12 Exams Postponed : ಐಸಿಎಸ್ಇ 10ನೇ ತರಗತಿ ಐಎಸ್ಸಿ 12ನೇ ತರಗತಿ ವಾರ್ಷಿಕ ಪರೀಕ್ಷೆ ಮುಂದೂಡಿಕೆ

ಐಸಿಎಸ್ಇ 10 ಮತ್ತು ಐಎಸ್ಸಿ 12ನೇ ತರಗತಿ ವಾರ್ಷಿಕ ಪರೀಕ್ಷೆ ಪೋಸ್ಟ್‌ಪೋನ್ಡ್

ದೇಶದಾದ್ಯಂತ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ಸಿ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದೆ.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಐಸಿಎಸ್ಇ ವಾರ್ಷಿಕ ಪರೀಕ್ಷೆಗಳು ಮೇ 4,2021ರಿಂದ ಜೂನ್ 7,2021ರ ವರೆಗೆ ಮತ್ತು ಐಎಸ್‌ಸಿ ಅಥವಾ 12ನೇ ತರಗತಿ ಪರೀಕ್ಷೆಯನ್ನು ಏಪ್ರಿಲ್ 8 ರಿಂದ ಆರಂಭಿಸಬೇಕಿತ್ತು ಆದರೆ ಕೊರೋನಾ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಜೂನ್ ಮೊದಲ ವಾರದಲ್ಲಿ ಪ್ರಕಟಿಸುವುದಾಗಿ ಐಸಿಎಸ್ಇ ತಿಳಿಸಿದೆ.

12ನೇ ತರಗತಿ ಪರೀಕ್ಷೆಯನ್ನು ತಡವಾಗಿ ನಡೆಸಲಾಗುತ್ತದೆ ಆದರೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಆಯ್ಕೆ ನೀಡಲಾಗುತ್ತದೆ. 12ನೇ ತರಗತಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಪರೀಕ್ಷೆ ಬರೆಯಲು ಇಚ್ಛಿಸದವರಿಗೆ ಶಾಲಾ ಹಂತದಲ್ಲೇ ಮೌಲ್ಯಾಂಕನ ನಡೆಸಿ ಫಲಿತಾಂಶ ನೀಡಲು ಸೂಕ್ತ ಮಾನದಂಡಗಳನ್ನು ರೂಪಿಸಲಾಗುತ್ತದೆ ಎಂದು ಐಸಿಎಸ್ಇ ಪ್ರಕಟಣೆಯಲ್ಲಿ ಹೇಳಿದೆ.

ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದೆ, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರವು 10ನೇ ತರಗತಿ ಪರೀಕ್ಷೆ ಜೂನ್ 21 ರಿಂದ ಪ್ರಾರಂಭವಾಗುವುದರಿಂದ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ತಿಳಿಸಿದೆ.

More News  

For Quick Alerts
ALLOW NOTIFICATIONS  
For Daily Alerts

English summary
CISCE has been postponed ICSE class 10 and ISC class 12 final exams.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+