CLAT Registration 2021: ಅರ್ಜಿ ಸಲ್ಲಿಕೆಗೆ ಮೇ 15ರ ವರೆಗೆ ಅವಧಿ ವಿಸ್ತರಣೆ

ಕ್ಲಾಟ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ಮೇ 15ರ ವರೆಗೆ ವಿಸ್ತರಣೆ

ಕಾನೂನು ಅಧ್ಯಯನಕ್ಕಾಗಿ ನಡೆಯುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 202೧ (ಕ್ಲಾಟ್)ಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಮೇ 15ರ ವರೆಗೆ ವಿಸ್ತರಿಸಲಾಗಿದೆ. ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ವಿಫಲರಾದ ಅಭ್ಯರ್ಥಿಗಳಿಗಾಗಿ ಮತ್ತೊಮ್ಮೆ ಈ ಅವಕಾಶ ನೀಡಲಾಗಿದೆ.

ದೇಶದ ಪ್ರತಿಷ್ಠಿತ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್ಎಲ್ಯು) 5 ವರ್ಷದ ಇಂಟಿಗ್ರೇಟೆಡ್ ಕಾನೂನು ಪದವಿ ಮತ್ತು ಸ್ನಾತಕೋತ್ತರ ಪದವಿ (ಎಲ್ಎಲ್ಎಂ) ಕೋರ್ಸ್ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 15,2021 ಕೊನೆಯ ದಿನವಾಗಿರುತ್ತದೆ. ಕ್ಲಾಟ್ 2021ರ ಪರೀಕ್ಷೆಯ ದಿನಾಂಕವನ್ನು ಅತೀ ಶೀಘ್ರದಲ್ಲಿ ಪ್ರಕಟ ಮಾಡಲಿದೆ.

ವಿದ್ಯಾರ್ಹತೆ:

ಯು ಜಿ ಕೋರ್ಸ್ ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಹನ್ನೆರಡನೇ ತರಗತಿ ಉತ್ತೀರ್ಣರಾಗಿರಬೇಕು. ಪಿ ಜಿ ಕೋರ್ಸಿಗೆ ಅಭ್ಯರ್ಥಿಗಳು ಎಲ್ ಎಲ್ ಬಿ/ಐದು ವರ್ಷದ ಇಂಟಿಗ್ರೇಟೆಡ್ ಎಲ್ ಎಲ್ ಬಿ (ಹಾನರ್ಸ್) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕ್ಲಾಟ್ ಪರೀಕ್ಷೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ.

ಸೀಟು ಹಂಚಿಕೆ:

ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಸೀಟು ಹಂಚಿಕೆ ನಡೆಯುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ತಮ್ಮದೇ ಆದ ಕಾನೂನು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://consortiumofnlus.ac.in/

For Quick Alerts
ALLOW NOTIFICATIONS  
For Daily Alerts

English summary
CLAT exam 2021 application date extended till may 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X