ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ ಒಕ್ಕೂಟವು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2022ರ ಅಂತಿಮ ಕೀ ಉತ್ತಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದೀಗ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಬಹುದು.

CLAT 2022 ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್ consortiumofnlus.ac.in ನಲ್ಲಿ ಬಿಡುಗಡೆ ಮಾಡಲಾಗಿದೆ. CLAT ಪರೀಕ್ಷೆ 2022 ಅನ್ನು ದೇಶದ ಹಲವಾರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ನೀಡುವ ಪದವಿಪೂರ್ವ (UG) ಮತ್ತು ಸ್ನಾತಕೋತ್ತರ (PG) ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಜೂನ್ 19 ರಂದು ನಡೆಸಲಾಯಿತು.
ಕಾನೂನು ಪ್ರವೇಶ ಪರೀಕ್ಷೆಯು 25 ರಾಜ್ಯಗಳಲ್ಲಿ 84 ಸ್ಥಳಗಳಲ್ಲಿ 131 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. CLAT ಯುಜಿ ನೋಂದಾಯಿತ ಅಭ್ಯರ್ಥಿಗಳಲ್ಲಿ ಶೇಕಡಾ 92 ರಷ್ಟು ಪರೀಕ್ಷೆಗೆ ಹಾಜರಾಗಿದ್ದರೆ, ಶೇಕಡಾ 87 ರಷ್ಟು ಅಭ್ಯರ್ಥಿಗಳು ಪಿಜಿ ಪರೀಕ್ಷೆಗೆ ಹಾಜರಾದರು.

CLAT 2022 ಅಂತಿಮ ಕೀ ಉತ್ತರವನ್ನು ಡೌನ್‌ಲೋಡ್ ಮಾಡುವುದು ಹೇಗೆ:
ಸ್ಟೆಪ್ 1: ಅಧಿಕೃತ ವೆಬ್‌ಸೈಟ್ consortiumofnlus.ac.in ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಅಂತಿಮ ಕೀ ಉತ್ತರದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಸ್ಕ್ರೀನ್ ಮೇಲೆ ಕೀ ಉತ್ತರಗಳು ಮೂಡುವುದು ಲೆಕ್ಕ ಹಾಕಿ ಮತ್ತು ಸ್ಕೋರ್ ಅನ್ನು ಪರಿಶೀಲಿಸಿ.
ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ (NLUs) ಪ್ರವೇಶವು CLAT ಪರೀಕ್ಷೆಯ ಆರಂಭಿಕ ಮತ್ತು ಮುಕ್ತಾಯದ ಶ್ರೇಣಿಗಳನ್ನು ಅವಲಂಬಿಸಿರುತ್ತದೆ. CLAT 2022 ಅಂಕಗಳನ್ನು ದೇಶದ ಕೆಲವು ಉನ್ನತ ಕಾನೂನು ಶಾಲೆಗಳು ಸೇರಿದಂತೆ 22 NLU ಗಳು ಗುರುತಿಸುತ್ತವೆ.


Click it and Unblock the Notifications











