ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಶನ್ ಟೆಸ್ಟ್ ನ ಆನ್‌ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆ ನವಂಬರ್ 1, 2018 ರಿಂದ ಪ್ರಾರಂಭವಾಗಿ, ನವಂಬರ್ 30, 2018 ರಂದು ಕೊನೆಗೊಳ್ಳಲಿದೆ. ಈ ವರ್ಷ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜನವರಿ 28 ರಂದು ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಶನ್ ಪರೀಕ್ಷೆಯನ್ನ ಆಯೋಜಿಸಿದೆ. ಹಾಗೂ ಜನವರಿ 7, 2019 ರಂದು ಈ ಪರೀಕ್ಷೆಯ ಪ್ರವೇಶ ಪತ್ರ ಸಿಗಲಿದೆ ಹಾಗೂ ಫೆಬ್ರವರಿ 10 ರಂದು ಈ ಪರೀಕ್ಷೆಯ ಫಲಿತಾಂಶ ಹೊರಬೀಳಲಿದೆ ಎಂದು ಆಫೀಶಿಯಲ್ ಮೂಲಗಳಿಂದ ತಿಳಿದುಬಂದಿದೆ. ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ:
- ಆಸಕ್ತ ಅಭ್ಯರ್ಥಿಗಳು ಪದವಿ ಮುಗಿಸಿರಬೇಕು
- ಫಲಿತಾಂಶಕ್ಕೆ ಎದುರು ನೋಡುತ್ತಿರುವ ಪದವಿ ಕೊನೆಯ ವರ್ಷದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಕೆ ಹೇಗೆ?
- ಸ್ಟೆಪ್ 1: ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಮೊದಲಿಗೆ ಅರ್ಜಿಯಲ್ಲಿ ಕೇಳಿರುವ ಮೂಲಭೂತ ಮಾಹಿತಿಗಳನ್ನ ಭರ್ತಿ ಮಾಡಿ
- ಸ್ಟೆಪ್ 2: ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟ ಮಾಹಿತಿಗಳನ್ನ ಭರ್ತಿ ಮಾಡಿ, ದಾಖಲೆಗಳ ಸ್ಕ್ಯಾನ್ ಪ್ರತಿ ರೆಡಿಯಾಗಿಟ್ಟುಕೊಂಡಿರಿ
- ಸ್ಟೆಪ್ 3: ನೆಟ್ ಬ್ಯಾಂಕಿಂಗ್. ಕ್ರೆಡಿಟ್ ಕಾರ್ಡ್ ಹಾಗೂ ಎಸ್‌ಬಿಐ ಬ್ಯಾಂಕ್ ನಲ್ಲಿ ಹಣ ಡಿಪೋಸಿಟ್ ಮಾಡುವ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು
For Quick Alerts
For Daily Alerts
English summary
The online registration process has started for the Common Management Admission Test (CMAT), which is a national level entrance examination for entry into management programmes. Candidates can apply for this computer-based online test till November 30, 2018.
Story first published: Saturday, November 3, 2018, 13:14 [IST]


Click it and Unblock the Notifications











