COMEDK UGET 2021: ಕಾಮೆಡ್‌ಕೆ ಯುಜಿಇಟಿ ಪರೀಕ್ಷೆ ಮುಂದೂಡಿಕೆ, ಜು.15ರೊಳಗೆ ಅರ್ಜಿ ಹಾಕಿ

ಕಾಮೆಡ್‌ಕೆ ಯುಜಿಇಟಿ 2021 ಪರೀಕ್ಷೆ ಮುಂದೂಡಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ನಡೆಸುವ ಕಾಮೆಡ್ ಕೆ ಯಜಿಇಟಿ 2021 ಪರೀಕ್ಷೆಯನ್ನು ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಕಾಮೆಡ್‌ಕೆ ಯುಜಿಇಟಿ 2021 ಪರೀಕ್ಷೆಯನ್ನು ಜೂನ್ 20 ರಂದು ನಡೆಸಲು ದಿನಾಂಕ ಮಾಡಲಾಗಿತ್ತು ಆದರೆ ಇದೀಗ ಪರೀಕ್ಷೆಯನ್ನು ಮುಂಡೂಡಲಾಗಿದ್ದು, ಮುಂದಿನ ಪ್ರಕಟಣೆಯಲ್ಲಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಿದೆ. ಅರ್ಜಿ ಸಲ್ಲಿಕೆಯ ಅವಧಿಯನ್ನು ಜುಲೈ 15,2021ರ ವರೆಗೆ ವಿಸ್ತರಿಸಲಾಗಿದೆ.

ಶನಿವಾರ ಪ್ರಕಟಣೆಯಲ್ಲಿ "ಇಂಜಿನಿಯರ್ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಸಲಾಗುವ ಕಾಮೆಡ್ ಕೆ ಯುಜಿಇಟಿ 2021 ಪರೀಕ್ಷೆ ಕುರಿತು ದಿನಾಂಕ 7,2021ರಂದು ಹೊರಡಿಸಿದ ಪ್ರಕಟಣೆಯಲ್ಲಿ ಜೂನ್ 20,2021ರಂದು ಪರೀಕ್ಷೆಯನ್ನು ನಿಗಧಿಪಡಿಸಲಾಗಿತ್ತು. ಈ ಕುರಿತು ಮಾರ್ಚ್ 17,2021ರಂದು ಬ್ರೋಚರ್ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಜೂನ್ 20,2021ರಂದು ನಿಗದಿಪಡಿಸಲಾಗಿರುವ ಕಾಮೆಡ್ ಕೆ ಯುಜಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಯ ದಿನಾಂಕವನ್ನು ನಂತರ ದಿನಗಳಲ್ಲಿ ತಿಳಿಸಲಾಗವುದು" ಎಂದು ತಿಳಿಸಿದೆ.

"ಅರ್ಜಿ ಸಲ್ಲಿಕೆಯ ಅವಧಿಯನ್ನು ಜುಲೈ 15,2021ರ ವರೆಗೆ ವಿಸ್ತರಿಸಲಾಗಿದೆ. ಅದನ್ನು ಹೊರತುಪಡಿಸಿ ಮಾರ್ಚ್ 19,2021ರಂದು ಪ್ರಕಟಿಸಲಾದ ಬ್ರೋಚರ್‌ ನಲ್ಲಿ ತಿಳಿಸಿರುವಂತೆಯೇ ಇರುತ್ತದೆ ಇನ್ನಾವುದೇ ರೀತಿಯಲ್ಲಿ ಬದಲಾವಣೆಗಳಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ".

ಕಾಮೆಡ್ ಕೆ ಅಂದರೆ:

ಕಾಮೆಡ್ ಕೆ ಎಂದರೆ ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರ್‌ ಕಾಲೇಜುಗಳ ಸಂಘ (ಕಾಮೆಡ್‌-ಕೆ), ರಾಜ್ಯದಲ್ಲಿರುವ 181 ಕ್ಕೂ ಹೆಚ್ಚಿನ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕರ್ನಾಟಕ ಖಾಸಗಿ ವೈದ್ಯಕೀಯ, ದಂತವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕಾಮೆಡ್-ಕೆ) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತದೆ.

ಈ ಹಿಂದೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೂ ಇದೇ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಆದರೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಕಡ್ಡಾಯ ಮಾಡಿರುವುದರಿಂದ ಕಾಮೆಡ್‌-ಕೆ ಪರೀಕ್ಷೆ ನಡೆಸುತ್ತಿಲ್ಲ. ಕಾಮೆಡ್‌-ಕೆ ಪರೀಕ್ಷೆ ಸಂಪೂರ್ಣ ಕಂಪ್ಯೂಟರೀಕೃತವಾಗಿ ನಡೆಯುತ್ತದೆ. ದೇಶದಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಆಯಾ ರಾಜ್ಯದ ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆ ಬರೆಯಬಹುದು.

ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. 181 ಕಾಲೇಜುಗಳ 20,000 ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ https://www.comedk.org/ ವೀಕ್ಷಿಸಿ

More News  

For Quick Alerts
ALLOW NOTIFICATIONS  
For Daily Alerts

English summary
COMED Karnataka has postponed COMEDK UGET 2021 for engineering programmes in the wake of rising COVID19 cases.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+