ಕೊರೊನಾವೈರಸ್ (COVID-19): ಮೇ.3ರ ವರೆಗೆ ಲಾಕ್‌ಡೌನ್ ವಿಸ್ತರಿಸಿದ ಪ್ರಧಾನಿ ಮೋದಿ

ಕೊರೋನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮೇ.3ರ ವರೆಗೆ ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಮೇ.3ರ ವರೆಗೆ ಲಾಕ್‌ಡೌನ್: ನಂತರವೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ

ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರ್ಚ್ 24 ರಂದು ದೇಶದಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಅನ್ನು ಘೋಷಿಸಲಾಗಿತ್ತು. ಇಂದು ಮೊದಲನೇ ಹಂತದ ಲಾಕ್‌ಡೌನ್‌ ಅವಧಿಯು ಮುಕ್ತಾಯಗೊಂಡ ಬೆನ್ನಲ್ಲೆ ಎರಡನೇ ಹಂತದ ಲಾಕ್‌ಡೌನ್‌ ಅನ್ನು ಘೋಷಿಸಲಾಗಿದೆ. ಇಂದು ಮಾತನಾಡಿದ ಅವರು ಕೊರೋನಾ ವಿರುದ್ಧ ಯುದ್ಧವನ್ನು ಭಾರತ ಧೈರ್ಯದಿಂದ ಎದುರಿಸುತ್ತಿದೆ. ಕೊರೋನ ನಿಯಂತ್ರಿತ ಪ್ರದೇಶಗಳಲ್ಲಿ ಏಪ್ರಿಲ್ 20ರ ನಂತರ ಲಾಕ್‌ಡೌನ್ ಸಡಿಲಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಮೇ. 3ರ ವರೆಗೆ ಲಾಕ್‌ಡೌನ್‌ ವಿಧಿಸಲಾಗಿದ್ದು ಅಲ್ಲಿಯವರೆಗೂ ಯಾವುದೇ ಪರೀಕ್ಷೆಗಳು ನಡೆಯುವುದಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕವೇ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ. ಈ ಸಮಯವನ್ನು ಪರೀಕ್ಷಾ ಪೂರ್ವ ಸಿದ್ಧತಾ ರಜೆ ಎಂದು ಪರಿಗಣಿಸಲಾಗಿದ್ದು, ಮೇ.3ರ ವರೆಗೆ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಲಾಕ್‌ಡೌನ್‌ ವಿಸ್ತರಣೆಯ ಬಗೆಗಿನ ಪ್ರಧಾನಿ ಮೋದಿಯವರ ಭಾಷಣವನ್ನು ಕೇಳಲು ಇಲ್ಲಿ ನೋಡಿ.

https://m.facebook.com/story.php?story_fbid=560085087950076&id=177526890164

More News  

For Quick Alerts
ALLOW NOTIFICATIONS  
For Daily Alerts

English summary
PM modi extended lockdown to till 3rd may. After that only sslc and puc exams will conduct.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+