CSIR UGC NET 2019: ಅರ್ಜಿ ತಿದ್ದುಪಡಿಗೆ ಅ.25 ಕೊನೆಯ ದಿನ

ಸಿಎಸ್‌ಐಆರ್ ಯುಜಿಸಿ ನೆಟ್ 2019ರ ಅರ್ಜಿಯ ತಿದ್ದುಪಡಿ ಮಾಡಬಹುದಾಗಿದ್ದು, ಈ ಬಾರಿ ಯಾರೆಲ್ಲಾ ಯುಜಿಸಿ ಪರೀಕ್ಷೆ ಬರೆಯಲಿದ್ದೀರೋ ಅವರೆಲ್ಲಾ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಅಕ್ಟೋಬರ್ 18 ರಿಂದ ಅಕ್ಟೋಬರ್ 25,2019ರವರೆಗೆ ತಿದ್ದುಪಡಿಗೆ ಅವಕಾಶವಿದೆ.

ಸಿಎಸ್‌ಐಆರ್ ಯುಜಿಸಿ ನೆಟ್ ಡಿಸೆಂಬರ್ 2019: ಅರ್ಜಿ ತಿದ್ದುಪಡಿಗೆ ಇಂದು ಕೊನೆಯ ದಿನ

ಸಿಎಸ್‌ಐಆರ್ ಯುಜಿಸಿ ನೆಟ್ ಪರೀಕ್ಷೆಗೆ ರಿಜಿಸ್ಟರ್ ಮಾಡಿಕೊಂಡಿರುವ ಅಭ್ಯರ್ಥಿಗಳು, ತಮ್ಮ ಅರ್ಜಿಯಲ್ಲಿ ಏನಾದ್ರೂ ತಿದ್ದುಪಡಿ ಮಾಡುವುದಿದ್ದಲ್ಲಿ, ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ. ಆಗ ಈಗಾಗಲೇ ನೀವು ಭರ್ತಿ ಮಾಡಿ ಸಲ್ಲಿಸಿರುವ ಅರ್ಜಿ ತೆರೆದುಕೊಳ್ಳುತ್ತದೆ. ಬೇಕಾದ ತಿದ್ದುಪಡಿ ಮಾಡಿಕೊಂಡು ಬಳಿಕ ಸಬ್‌ಮಿಟ್ ಮಾಡಿ.

ಸಿಎಸ್‌ಐಆರ್ ಯುಜಿಸಿ ನೆಟ್ ಪರೀಕ್ಷೆಯು ಡಿಸಂಬರ್ 15,2019ರಂದು ನಡೆಯಲಿದೆ. ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಅಧ್ಯಾಪಕ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆ ಇದಾಗಿದ್ದು, ನವೆಂಬರ್ 9,2019ರಂದು ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಬಹುದಾಗಿರುತ್ತದೆ. ಡಿಸೆಂಬರ್ 31,2019 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎಸ್‌ಐಆರ್ ಯುಜಿಸಿ ನೆಟ್ ಅಧಿಕೃತ ವೆಬ್‌ಸೈಟ್‌: http://www.csirhrdg.res.in/

ಅಭ್ಯರ್ಥಿಗಳು ಅರ್ಜಿ ತಿದ್ದುಪಡಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Council of scientific and industrial research has released Online window to make necessary changes in the the UGC NET. The Application Form Activated from today. The candidates can make change through the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X