ಸಿಎಸ್‌ಐಆರ್ ಯುಜಿಸಿ ಎನ್‌ಇಟಿ 2019 ಪರೀಕ್ಷೆಗೆ ಮಾರ್ಚ್ 18 , 2019 ರೊಳಗೆ ರಿಜಿಸ್ಟರ್ ಮಾಡಿ

ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಯುಜಿಸಿ ಎನ್‌ಇಟಿ ಜೂನ್ 2019 ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೆಆರ್‌ಎಫ್ ಹುದ್ದೆಗಳಿಗೆ ನಡೆಸುವ ಪರೀಕ್ಷೆಗೆ ಮಾರ್ಚ್ 18 , 2019ರೊಳಗೆ ರಿಜಿಸ್ಟರ್ ಮಾಡಿಕೊಳ್ಳಬಹುದು.

 ಸಿಎಸ್ಐಆರ್ ಯುಜಿಸಿ ಎನ್‌ಇಟಿ  2019 ಪರೀಕ್ಷೆಗೆ ಅರ್ಜಿ ಹಾಕಿ

ಎಂ.ಎಸ್ಸಿ , ಬಿ.ಇ / ಬಿ.ಟೆಕ್, ಬಿ.ಫಾರ್ಮ , ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿದ್ದು, ಜನವರಿ 1,2019 ರ ಅನ್ವಯ 28 ವರ್ಷ ವಯೋಮಿತಿ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 28,000/-ರೂ ವೇತನವನ್ನು ನೀಡಲಾಗುವುದು.

ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಸಾಮಾನ್ಯ /ಓಬಿಸಿ ಅಭ್ಯರ್ಥಿಗಳು 1000/- ರೂ, ಓಬಿಸಿ ( ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 250 /-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಸಿಎಸ್‌ಐಆರ್ ಎನ್‌ಇಟಿ ಪರೀಕ್ಷೆಗೆ ಫೆಬ್ರವರಿ 25 ರಿಂದ ಮಾರ್ಚ್18,2019 ರವರೆಗೆ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈ ಪರೀಕ್ಷೆಯು 200ಅಂಕಗಳನ್ನೊಳಗೊಂಡ3 ತಾಸಿನದಾಗಿದ್ದು ಅಭ್ಯರ್ಥಿಗಳು ಎರಡು ಶಿಫ್ಟ್ ಗಳಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಜೂನ್ ತಿಂಗಳಿನಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಪರೀಕ್ಷಾ ಫಲಿತಾಂಶವನ್ನು ಜುಲೈ ನಲ್ಲಿ ಪ್ರಕಟಿಸಲಾಗುವುದು.

ಸಿಎಸ್‌ಐಆರ್ ಯುಜಿಸಿ ಎನ್‌ಇಟಿ 2019 : ಅರ್ಜಿ ಸಲ್ಲಿಕೆ ಹೇಗೆ

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://www.csirhrdg.res.in/ ಗೆ ಹೋಗಿ.
ಸ್ಟೆಪ್ 2: ಅಭ್ಯರ್ಥಿಗಳು ಹೋಮ್ ಪೇಜ್ ಸ್ಕ್ರೋಲ್ ಮಾಡಿದಾಗ ಕೆಳಗಡೆ 'Apply Online' ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಈಗ ಹೊಸ ಪೇಜ್ ತೆರೆಯುತ್ತದೆ.
ಸ್ಟೆಪ್ 4: ಅಭ್ಯರ್ಥಿಗಳು ಈಗ Register ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಅಭ್ಯರ್ಥಿಗಳು ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ Submit ಮಾಡಿ
ಸ್ಟೆಪ್ 6: ಈಗ ಯೂಸರ್ ಐಡಿ ಬಳಸಿ ಲಾಗಿನ್ ಆಗಿ ನಿಮ್ಮ ಇತ್ತೀಚಿನ ಭಾವಚಿತ್ರ ,ದಾಖಲಾತಿ ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.

ಈ ಬಗೆಗಿನ ಅಧಿಕೃತ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಹಾಗೂ ಇಲ್ಲಿ ಕ್ಲಿಕ್ ಮಾಡಿ ಮತ್ತು ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Council of Scientific & Industrial Research (CSIR) recruiting candidates to fill their UGC National Eligibility Test NET job posts in Across India.Job Aspirants are requested to go through official website CSIR job notification 2019 before apply. CSIR recruitment board, applications are accepting in Online mode. The official website of Council of Scientific & Industrial Research is http://www.csirhrdg.res.in/
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X