CSIR UGC NET june 2021 Result : ಫಲಿತಾಂಶ ವೀಕ್ಷಿಸುವುದು ಹೇಗೆ ?

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಸಿಎಸ್ಐಆರ್ ಯುಜಿಸಿ ಎನ್‌ಇಟಿ ಜೂನ್ 2021ರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜೆಆರ್‌ಎಫ್ ಹುದ್ದೆಗಳ ನೇಮಕಾತಿ ನಡೆಸಲಾಗುವ ಪರೀಕ್ಷೆ ಇದಾಗಿದ್ದು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು.

ಸಿಎಸ್‌ಐಆರ್‌  ಯುಜಿಸಿ ಎನ್‌ಇಟಿ ಫಲಿತಾಂಶ ಪ್ರಕಟ

ಸಿಎಸ್‌ಐಆರ್‌ ಯುಜಿಸಿ ಎನ್ಇಟಿ ಪರೀಕ್ಷೆಗೆ ಡಿಸೆಂಬರ್ 3,2021 ರಿಂದ ಜನವರಿ 2,2022ರ ರಾತ್ರಿ 11:50ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಪರೀಕ್ಷೆಯು ಜನವರಿ 29, ಫೆಬ್ರವರಿ 15,16 ಮತ್ತು 17,2022ರಂದು 5 ವಿಷಯಗಳಿಗೆ 172 ನಗರಗಳಲ್ಲಿ ಒಟ್ಟು 339 ಕೇಂದ್ರಗಳಲ್ಲಿ ನಡೆಸಲಾಗಿದೆ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶ ವೀಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ನೋಡಿ.

ಸಿಎಸ್‌ಐಆರ್‌ ಯುಜಿಸಿ ಎನ್‌ಇಟಿ ಜೂನ್ 2021ರ ಫಲಿತಾಂಶವನ್ನು ವೀಕ್ಷಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ :

ಸ್ಟೆಪ್ 1: ಅಭ್ಯರ್ಥಿಗಳು ಸಿಎಸ್‌ಐಆರ್‌ನ ಅಧಿಕೃತ ವೆಬ್‌ಸೈಟ್‌ https://csirnet.nta.nic.in/ ಗೆ ಭೇಟಿ ನೀಡಿ

ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ "CSIR UGC NET ಜೂನ್ 2021 Result" ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
ಸ್ಟೆಪ್ 3: ಇನ್ನೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ
ಸ್ಟೆಪ್ 4: ಫಲಿತಾಂಶ ಸ್ಕ್ರೀನ್‌ ಮೇಲೆ ಲಭ್ಯವಾಗುತ್ತದೆ
ಸ್ಟೆಪ್ 5: ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಿ.

ವಯೋಮಿತಿ :

ಜೆಆರ್ ಎಫ್ ಬಯಸುವವರಿಗೆ ಗರಿಷ್ಠ ವಯೋಮಿತಿ 28 ವರ್ಷ ಎನ್ಇಟಿ (ಪ್ರಾಧ್ಯಾಪಕ) ಬಯಸುವವರಿಗೆ
ವಯೋಮಿತಿ ಇಲ್ಲ.

ಪರೀಕ್ಷೆಯ ವಿವರ:

ಕಂಪ್ಯೂಟರ್ ಆಧಾರಿತ ಪರೀಕ್ಷೆಯು 200 ಅಂಕಗಳಿಗೆ ನಡೆಯಲಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ ಉತ್ತರಿಸಲು ಮೂರು ಗಂಟೆಯ ಅವಧಿ ನೀಡಲಾಗಿರುತ್ತದೆ.

ಪರೀಕ್ಷಾ ವಿಷಯಗಳು :

ಲೈಫ್ ಸೈನ್ಸ್, ಅರ್ಥ್ ಸೈನ್ಸ್, ಅಟ್ಮಾಸ್ಪೆರಿಕ್, ಓಷನ್, ಪ್ಲಾನೆಟರಿ, ಮ್ಯಾಥಮೆಟಿಕಲ್ ಸೈನ್ಸ್, ಕೆಮಿಕಲ್ ಸೈನ್ಸ್, ಫಿಸಿಕಲ್ ಸೈನ್ಸ್.

ಸಿಎಸ್ಐಆರ್ ಯುಜಿಸಿ ಎನ್ಇಟಿ :

ಸಿ‌ಎಸ್‌ಐ‌ಆರ್-ದಿ ಕೌನ್ಸಿಲ್ ಆಫ್ ಸೈನ್‌ಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಹಾಗೂ ಯುಜಿಸಿ ಜಂಟಿಯಾಗಿ ಎನ್‌ಇಟಿ ಪರೀಕ್ಷೆಯನ್ನು ನಡೆಸುತ್ತದೆ. ಈ ಮೂಲಕ ಪ್ರಾಧ್ಯಾಪಕ ವೃತ್ತಿ ಸ್ವೀಕರಿಸುವವರಿಗೆ ಹಾಗೂ ಸಂಶೋಧನೆ ಮಾಡುವವರಿಗೆ ಅರ್ಹತಾ ಪತ್ರ ನೀಡಲಾಗುತ್ತದೆ.

ಅಭ್ಯರ್ಥಿಗಳು ನೇರವಾಗಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
CSIR UGC NET june 2021 Results released in official website. Candidates can check results now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+