CUET Score For UG Admission : ರಾಜ್ಯದಲ್ಲಿ ಇನ್ಮುಂದೆ ಬಿಎ, ಬಿ.ಕಾಂ ಕೋರ್ಸ್‌ ಪ್ರವೇಶಾತಿಗೂ ಪ್ರವೇಶ ಪರೀಕ್ಷೆ

ಪ್ರಸಕ್ತ ಸಾಲಿನಿಂದ ಭಾರತದ 45 ಕೇಂದ್ರೀಯ ವಿಶ್ವವಿದ್ಯಾಲಯಗಳು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಮುಂದಾಗಿವೆ. ಕರ್ನಾಟಕ ರಾಜ್ಯದ 25 ವಿಶ್ವವಿದ್ಯಾಲಯಗಳೂ ಕೂಡ ಈ ಪಟ್ಟಿಗೆ ಸೇರಿಕೊಂಡಿವೆ.

ರಾಜ್ಯದಲ್ಲಿ ಯುಜಿ ಪ್ರವೇಶಾತಿಗೆ ಸಿಯುಇಟಿ ಅಂಕ ಬಳಕೆಗೆ ಕರ್ನಾಟಕ ವಿವಿಗಳ ಒಪ್ಪಿಗೆ

ಕರ್ನಾಟಕದ ವಿಶ್ವವಿದ್ಯಾನಿಲಯಗಳು ಈಗ ಬಿಎ, ಬಿಎಸ್ಸಿ ಮತ್ತು ಬಿಕಾಂ ಸೇರಿದಂತೆ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಅಂಕಗಳನ್ನು ಬಳಸುತ್ತವೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾಮಾನ್ಯ ಪರೀಕ್ಷೆಯನ್ನು ಪರಿಚಯಿಸಲಾಗಿದ್ದರೂ, ಇತರ ಸಂಸ್ಥೆಗಳು ಸಹ ಪ್ರವೇಶ ಪರೀಕ್ಷೆ ನಡೆಸಲು ಆಸಕ್ತಿ ತೋರಿಸಿವೆ.

ಈ 25 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಬಿಎ, ಬಿಎಸ್ಸಿ, ಬಿಕಾಂ ಮತ್ತು ಇತರ ಕಾರ್ಯಕ್ರಮಗಳಲ್ಲಿ ಯುಜಿ ಪ್ರವೇಶಕ್ಕಾಗಿ ಸಿಯುಇಟಿಯನ್ನು ಬಳಸಲು ಒಪ್ಪಿಕೊಂಡಿದ್ದಾರೆ ಎಂದು ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರೊಫೆಸರ್ ಕುಮಾರ್ ಅವರ ಟ್ವಿಟರ್ ನಲ್ಲಿ, "ಇಂದು ನಾನು ಕರ್ನಾಟಕ ರಾಜ್ಯದ 25 ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಕುರಿತು ಚರ್ಚಿಸಲು ಸಭೆ ನಡೆಸಿದ್ದೇನೆ. ವಿಸಿಗಳು ಸಿಯುಇಟಿಯನ್ನು ಪರಿಚಯಿಸುವುದನ್ನು ಬೆಂಬಲಿಸಿದ್ದಾರೆ ಮತ್ತು ಬಿಎ, ಬಿಎಸ್ಸಿ, ಬಿಕಾಂ ಮತ್ತು ಅಂತಹುದೇ ಕಾರ್ಯಕ್ರಮಗಳಲ್ಲಿ ಪ್ರವೇಶಕ್ಕಾಗಿ ಸಿಯುಇಟಿಯನ್ನು ಬಳಸಲು ಒಪ್ಪಿಕೊಂಡಿದ್ದಾರೆ" ಎಂದು ಅವರು ಬರೆದಿದ್ದಾರೆ.

ರಾಜ್ಯದಲ್ಲಿ ಯುಜಿ ಪ್ರವೇಶಾತಿಗೆ ಸಿಯುಇಟಿ ಅಂಕ ಬಳಕೆಗೆ ಕರ್ನಾಟಕ ವಿವಿಗಳ ಒಪ್ಪಿಗೆ

CUET 2022ರ ಬಗ್ಗೆ :

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) UG ಕೋರ್ಸ್ ಗಳ ಪ್ರವೇಶಕ್ಕಾಗಿ CUET 2022 ಅನ್ನು ಆಯೋಜಿಸುತ್ತಿದೆ. ಯುಜಿಸಿಯ ಸೂಚನೆಯಂತೆ ಈ ಪ್ರವೇಶ ಪರೀಕ್ಷೆಯು ಕಡ್ಡಾಯವಾಗುವ ಮೊದಲು ಅನೇಕ ಕೇಂದ್ರೀಯ ವಿಶ್ವವಿದ್ಯಾಲಯಗಳು ವಿವಿಧ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ CUCET ಅನ್ನು ಬಳಸುತ್ತಿದ್ದವು. UGC ಪ್ರಕಾರ CUET 2022 ಪರೀಕ್ಷೆಯು 13 ಭಾಷೆಗಳಲ್ಲಿ ನಡೆಯಲಿದೆ. ಈ ಮೂಲಕ ಬೋರ್ಡ್ ಪರೀಕ್ಷೆಯ ಅಸಮಾನತೆಗಳನ್ನು ತೊಡೆದುಹಾಕಲು ಪ್ರಯತ್ನಿಸಲಾಗುತ್ತಿದೆ.

CUET ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 2, 2022 ರ ಮೂಲ ದಿನಾಂಕದಿಂದ ಮುಂದೂಡಲ್ಪಟ್ಟ ನಂತರ ಏಪ್ರಿಲ್ 6,2022 ರಿಂದ ಅಧಿಕೃತ ವೆಬ್‌ಸೈಟ್ https://cuet.samarth.ac.in, www.nta.ac.in ನಲ್ಲಿ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಮೇ 6,2022ರೊಳಗೆ ಅರ್ಜಿಯನ್ನು ಹಾಕಬಹುದು. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಕನ್ನಡದಲ್ಲಿ ಸಹ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕೇಂದ್ರೀಯ ವಿದ್ಯಾಲಯಗಳ ಪದವಿ ಕೋರ್ಸ್ ಪ್ರವೇಶ ಪಡೆಯಬೇಕಾದರೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ ಅಗುವುದು ಕಡ್ಡಾಯಗೊಳಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
25 karnataka state universities are agreed to use CUET scores for admissions to ba, bsc and bcom courses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X