CUET PG 2022: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಬಹುನಿರೀಕ್ಷಿತ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ ಪಿಜಿ 2022 (CUET PG 2022) ಫಲಿತಾಂಶಗಳನ್ನು ಶೀಘ್ರದಲ್ಲೇ ಘೋಷಿಸುತ್ತದೆ. ಒಮ್ಮೆ ಫಲಿತಾಂಶ ಪ್ರಕಟವಾದ ಬಳಿಕ, ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಬಹುದು.

ಸಿಯುಇಟಿ ಪಿಜಿ ಪರೀಕ್ಷೆಯನ್ನು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 12 ರವರೆಗೆ ನಡೆಸಲಾಯಿತು. ಸೆಪ್ಟೆಂಬರ್ 8 ರಂದು ಯಾವುದೇ ಪರೀಕ್ಷೆಗಳು ನಡೆದಿರುವುದಿಲ್ಲ. ನಂತರ ಸೆಪ್ಟೆಂಬರ್ 16 ರಂದು, NTA ತಾತ್ಕಾಲಿಕ ಉತ್ತರದ ಕೀಲಿಯನ್ನು ಬಿಡುಗಡೆ ಮಾಡಿತು. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಸೆಪ್ಟೆಂಬರ್ 18 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಇದೀಗ ಸಿಯುಇಟಿ ಪಿಜಿ 2022 ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ.
ಸಿಯುಇಟಿ ಪಿಜಿ ಫಲಿತಾಂಶ 2022 ವೀಕ್ಷಿಸುವುದು ಹೇಗೆ ? :
ಸ್ಟೆಪ್ 1 : ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cuet.nta.nic.in/ ಗೆ ಭೇಟಿ ನೀಡಿ.
ಸ್ಟೆಪ್ 2 : ಹೋಂ ಪೇಜ್ ನಲ್ಲಿ CUET PG 2022 ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ರುಜುವಾತುಗಳನ್ನು ಬಳಸಿಕೊಂಡು ಲಾಗ್ ಇನ್ ಮಾಡಿ
ಸ್ಟೆಪ್ 4 : ಸಿಯುಇಟಿ ಪಿಜಿ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ
ಸ್ಟೆಪ್ 5 : ಹೆಚ್ಚುವರಿ ಮಾಹಿತಿಗಾಗಿ ಅಭ್ಯರ್ಥಿಗಳು CUET ಸ್ಕೋರ್‌ಕಾರ್ಡ್ PDF ನ ಮುದ್ರಣವನ್ನು ತೆಗೆದುಕೊಳ್ಳಿ.


Click it and Unblock the Notifications











