CUET UG Result 2022 : ಸಿಯುಇಟಿ ಯುಜಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ

CUET UG ಫಲಿತಾಂಶ 2022: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಯುಜಿ (CUET UG) 2022 ಫಲಿತಾಂಶವನ್ನು ಇಂದು ಸೆಪ್ಟೆಂಬರ್ 15 ರಂದು ಪ್ರಕಟ ಮಾಡಲಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

 
ಸಿಯುಇಟಿ ಯುಜಿ ಫಲಿತಾಂಶ ಇಂದು ಪ್ರಕಟ

ಅಭ್ಯರ್ಥಿಗಳು CUET UG ಸ್ಕೋರ್‌ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್- cuet.samarth ನಿಂದ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. CUET UG 2022 ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಎನ್‌ಟಿಎ ಜುಲೈ 15 ಮತ್ತು ಆಗಸ್ಟ್ 30,2022ರ ನಡುವೆ ಯುಜಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ CUET ಪರೀಕ್ಷೆಯನ್ನು ನಡೆಸಿದೆ.

CUET UG 2022 ಪ್ರವೇಶ ಪರೀಕ್ಷೆಯ ಚೊಚ್ಚಲ ಆವೃತ್ತಿಯನ್ನು ಆರು ಹಂತಗಳಲ್ಲಿ 489 ಕೇಂದ್ರಗಳಲ್ಲಿ ಭಾರತದ 259 ನಗರಗಳಲ್ಲಿ ಮತ್ತು ಭಾರತದ ಹೊರಗಿನ 10 ನಗರಗಳಲ್ಲಿ ನಡೆಸಲಾಯಿತು.
ಒಟ್ಟಾರೆ 14.9 ಲಕ್ಷ ನೋಂದಣಿಗಳೊಂದಿಗೆ CUET ಪರೀಕ್ಷೆಯು ಈಗ ದೇಶದ ಎರಡನೇ ಅತಿದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ಆಕಾಂಕ್ಷಿಗಳು 44 ಕೇಂದ್ರ, 12 ರಾಜ್ಯ, 11 ಡೀಮ್ಡ್ ಮತ್ತು 19 ಖಾಸಗಿ ವಿಶ್ವವಿದ್ಯಾಲಯಗಳು
ಸೇರಿದಂತೆ 90 ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ 54,555 ವಿಶಿಷ್ಟ ಸಂಯೋಜನೆಯ ವಿಷಯಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಶ್ವವಿದ್ಯಾನಿಲಯಗಳು 2022-23ರ ಶೈಕ್ಷಣಿಕ ಅವಧಿಗೆ ವಿವಿಧ ಪದವಿಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಒದಗಿಸಲು ಅಭ್ಯರ್ಥಿಗಳ CUET ಅಂಕಗಳನ್ನು ಬಳಸುತ್ತವೆ.

CUET UG ಫಲಿತಾಂಶ 2022: ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ? :

ಸ್ಟೆಪ್ 1 : ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ cuet.samarth.ac.in ಗೆ ಭೇಟಿ ನೀಡಿ.

ಸ್ಟೆಪ್ 2 : ಹೋಂ ಪೇಜ್ ನಲ್ಲಿ CUET UG 2022 ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ

 

ಸ್ಟೆಪ್ 3 : ಅಭ್ಯರ್ಥಿಗಳು ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ರುಜುವಾತುಗಳನ್ನು ಬಳಸಿಕೊಂಡು ಲಾಗ್ ಇನ್ ಮಾಡಿ

ಸ್ಟೆಪ್ 4 : ಸಿಯುಇಟಿ ಯುಜಿ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ

ಸ್ಟೆಪ್ 5 : ಹೆಚ್ಚುವರಿ ಮಾಹಿತಿಗಾಗಿ ಅಭ್ಯರ್ಥಿಗಳು CUET ಸ್ಕೋರ್‌ಕಾರ್ಡ್ PDF ನ ಮುದ್ರಣವನ್ನು ತೆಗೆದುಕೊಳ್ಳಿ.

CUET ಮಾಹಿತಿ ಕರಪತ್ರದ ಪ್ರಕಾರ CUET UG 2022ರ ದಾಖಲೆಯನ್ನು ಫಲಿತಾಂಶದ ಘೋಷಣೆಯ ದಿನಾಂಕದಿಂದ 90 ದಿನಗಳವರೆಗೆ ಸುರಕ್ಷಿತವಾಗಿರಿಸಲಾಗುತ್ತದೆ.

ಅಭ್ಯರ್ಥಿಯು ಪಡೆದ CUET UG ಅಂಕಗಳ ಆಧಾರದ ಮೇಲೆ ಕೇಂದ್ರೀಯ ವಿಶ್ವವಿದ್ಯಾಲಯಗಳು (CUs) ಪ್ರತ್ಯೇಕ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ.

CUET ಫಲಿತಾಂಶದ ಘೋಷಣೆಯ ನಂತರ CU ಗಳು ಪದವಿಪೂರ್ವ ಕಾರ್ಯಕ್ರಮಕ್ಕಾಗಿ ಕೌನ್ಸೆಲಿಂಗ್ ಮತ್ತು ಪ್ರವೇಶ ವೇಳಾಪಟ್ಟಿಯನ್ನು ಪ್ರಕಟಿಸುತ್ತವೆ.

For Quick Alerts
ALLOW NOTIFICATIONS  
For Daily Alerts

English summary
NTA will release cuet ug 2022 result today. Here is how to download it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X