ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಚಿತ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಹಾಕಲು ಎರಡೇ ದಿನ ಬಾಕಿ

2019-20ನೇ ಸಾಲಿಗೆ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪ್ರವರ್ಗ-1,2ಎ,3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳನ್ನು ಜಿಮ್ಯಾಟ್,ಜಿಆರ್‌ಇ ಮತ್ತು ಗೇಟ್‌ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‌-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 11,2019. ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್‌ಸೈಟ್‌ ಅನ್ನು ಚೆಕ್ ಮಾಡಿಕೊಳ್ಳಬಹುದು.

ಜಿಮ್ಯಾಟ್,ಜಿಆರ್‌ಇ ಮತ್ತು ಗೇಟ್‌ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಹಾಕಲು ಎರಡೇ ದಿನ ಬಾಕಿ

ಸದರಿ ತರಬೇತಿಯನ್ನು ಖಾಸಗಿ ಸಂಸ್ಥೆಯ ಮೂಲಕ ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ ನೀಡಲಾಗುವುದು, ತರಬೇತಿಯು ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಯಾವುದೇ ತರಬೇತಿ ಭತ್ಯೆ, ಪ್ರಯಾಣ ಭತ್ಯೆ ಹಾಗೂ ಇತರೆ ಭತ್ಯೆಯನ್ನು ನೀಡಲಾಗುವುದಿಲ್ಲ.

ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1. 2ಎ,3ಎ ಅಥವಾ 3ಬಿಗೆ ಸೇರಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಈ ಇಲಾಖೆಯಿಂದ ನೀಡುವ ತರಬೇತಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ವಿದ್ಯಾರ್ಹತೆ:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸದರಿ ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಸಂಬಂಧಪಟ್ಟ ಪದವಿ ಪೂರ್ಣಗೊಳಿಸಿರಬೇಕು. ತರಬೇತಿಗೆ ಆಯ್ಕೆ ಬಯಸುವ ವಿದ್ಯಾರ್ಥಿಯು ಪದವಿಯಲ್ಲಿ ಕನಿಷ್ಟ 50%ರಷ್ಟು ಅಂಕಗಳನ್ನು ಪಡೆದಿರಬೇಕು.

ವಯೋಮಿತಿ:

ಸೆಪ್ಟೆಂಬರ್ 11,2019ರ ಅನ್ವಯ 26 ವರ್ಷ ಮತ್ತು ಅದಕ್ಕೂ ಕಡಿಮೆ ವಯೋಮಿತಿಯನ್ನು ಹೊಂದಿರಬೇಕು.

ವಾರ್ಷಿಕ ಆದಾಯ:

ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ ರೂ.6 ಲಕ್ಷಗಳು ಇರಬೇಕು.

ಷರತ್ತುಗಳು :

• JEE/NEET/GATE/GRE ಕೋರ್ಸುಗಳಿಗೆ ಅರ್ಹತೆ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

• ಈ ತರಬೇತಿಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸತಕ್ಕದ್ದು.

• ಅಭ್ಯರ್ಥಿಗಳು ಸಂಬಂಧಪಟ್ಟ ತಹಸೀಲ್ದಾರ್ ಅವರಿಂದ ಪಡೆದ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸುವುದು.

• ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಅರ್ಜಿಯಲ್ಲಿ ಪೂರ್ಣ ಮಾಹಿತಿ ಇಲ್ಲದಿದ್ದ ಪಕ್ಷದಲ್ಲಿ ಅಥವಾ ಅರ್ಜಿ ಅಪೂರ್ಣವಾಗಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

• ಅಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ತರಬೇತಿಯ ಅಂದಾಜು ಅವಧಿ:

ಪಠ್ಯಕ್ರಮ ವಿವರತರಬೇತಿ ಅವಧಿ
GMAT-TOEFL ಪರೀಕ್ಷಾ ಪೂರ್ವ ತರಬೇತಿ : ಸಕ್ಷಮ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸುವ ಪೂರ್ಣ ಪಠ್ಯಕ್ರಮಕ್ಕೆ ತರಬೇತಿ ನೀಡುವುದು.100 ಗಂಟೆಗಳು (2 ರಿಂದ 3 ತಿಂಗಳ ತರಬೇತಿ)
GRE-TOEFL ಪರೀಕ್ಷಾ ಪೂರ್ವ ತರಬೇತಿ : ಸಕ್ಷಮ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸುವ ಪೂರ್ಣ ಪಠ್ಯಕ್ರಮಕ್ಕೆ ತರಬೇತಿ ನೀಡುವುದು.100 ಗಂಟೆಗಳು ( 2 ರಿಂದ 3 ತಿಂಗಳ ತರಬೇತಿ)
GATE ಪರೀಕ್ಷಾ ಪೂರ್ವ ತರಬೇತಿ:
ಅ) ಈ ಕೆಳಕಂಡ ವಿಷಯಗಳಿಗೆ ಪೂರ್ಣ ತರಬೇತಿಯನ್ನು ನೀಡುವುದು.
* ಸಿವಿಲ್
* ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್
* ಎಲೆಕ್ಟ್ರಿಕಲ್
* ಮೆಕ್ಯಾನಿಕಲ್
* ಕಂಪ್ಯುಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿ
250 ಗಂಟೆಗಳು ( 6 ತಿಂಗಳ ಒಳಗೆ ತರಬೇತಿ ಪೂರ್ಣಗೊಳಿಸುವುದು)
ಆ) ಮೇಲ್ಕಂಡ 5 ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಿಗೆ ಇಂಜಿನಿಯರಿಂಗ್ ಮ್ಯಾಥಮೆಟಿಕ್ಸ್ ಮತ್ತು ಆಪ್ಟಿಟ್ಯೂಡ್, ಆನ್‌ಲೈನ್ ಟೆಸ್ಟ್ ಹಾಗೂ ಒಂದು ಸೆಟ್ ಕೋರ್ಸ್ ಮೆಟೀರಿಯಲ್ ಅನ್ನು ಒದಗಿಸುವುದು.100 ರಿಂದ 125 ಗಂಟೆಗಳು (4 ತಿಂಗಳ ಒಳಗೆ ತರಬೇತಿ ಪೂರ್ಣಗೊಳಿಸುವುದು)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11,9,2019 ರ ಸಂಜೆ 5 ಗಂಟೆ

ಅಧಿಕೃತ ವೆಬ್‌ಸೈಟ್‌: http://www.backwardclasses.kar.nic.in/

ಸಹಾಯ ವಾಣಿ: 080-8050770004

ಕಚೇರಿಯ ವಿಳಾಸ:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
ಆಯುಕ್ತರ ಕಛೇರಿ,
ನಂ.16-ಡಿ, 3ನೇ ಮಹಡಿ,
ಡಿ. ದೇವರಾಜ ಅರಸು ಭವನ,
ಮಿಲ್ಲರ್ಸ್ ಕೆರೆ ಅಂಗಳ,
ವಸಂತ ನಗರ,ಬೆಂಗಳೂರು -52.

ಅಭ್ಯರ್ಥಿಗಳು ಪ್ರಕಟಣೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
Backward classes welfare department 2019 invited applications for pre-examination training. Interested candidates can apply.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+