ಎಜುಸ್ಯಾಟ್‌ ಯೋಜನೆಯಡಿ ಯು-ಟ್ಯೂಬ್ ಮೂಲಕ ಶಿಕ್ಷಣ

ಯು-ಟ್ಯೂಬ್ ಮೂಲಕ ಮಕ್ಕಳಿಗೆ ಓದಲು ಅನುಕೂಲವಾಗುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್‌ಇಆರ್‌ಟಿ) ಎಜುಸ್ಯಾಟ್‌ ಯೋಜನೆಯಡಿ ವಿಡಿಯೋ ಕಲಿಕಾ ಸಾಮಗ್ರಿಗಳನ್ನು ಅಪ್ಲೋಡ್ ಮಾಡಿದೆ.

ಶಾಲಾ ಮಕ್ಕಳ ಕಲಿಕೆಗೆ ಸಹಾಯವಾಗಲೆಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್‌ಇಆರ್‌ಟಿ) ಯು-ಟ್ಯೂಬ್ ನತ್ತ ಮುಖ ಮಾಡಿದೆ.

ದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭಿಸಲು ಚಿತ್ರ ಕಲಾ ಪರಿಷತ್ತು ಚಿಂತನೆದೇಶದ ಮೊದಲ ದೃಶ್ಯಕಲೆ ಸಂಜೆ ಕಾಲೇಜು ಆರಂಭಿಸಲು ಚಿತ್ರ ಕಲಾ ಪರಿಷತ್ತು ಚಿಂತನೆ

ಯು-ಟ್ಯೂಬ್ ಮೂಲಕ ಮಕ್ಕಳಿಗೆ ಓದಲು ಅನುಕೂಲವಾಗುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್‌ಇಆರ್‌ಟಿ) ಎಜುಸ್ಯಾಟ್‌ ಯೋಜನೆಯಡಿ ವಿಡಿಯೋ ಕಲಿಕಾ ಸಾಮಗ್ರಿಗಳನ್ನು ಅಪ್ಲೋಡ್ ಮಾಡಿದೆ.

ಎಚ್-1ಬಿ ವೀಸಾ ಗೊಂದಲ: ಐದು ಲಕ್ಷ ಭಾರತೀಯರಿಗೆ ಸಂಕಷ್ಟ ಎಚ್-1ಬಿ ವೀಸಾ ಗೊಂದಲ: ಐದು ಲಕ್ಷ ಭಾರತೀಯರಿಗೆ ಸಂಕಷ್ಟ

ಯು-ಟ್ಯೂಬ್ ಶಿಕ್ಷಣ

ಈಗಾಗಲೇ 3ನೇ ತರಗತಿಯಿಂದ 10ನೇ ತರಗತಿವರೆಗಿನ ಕನ್ನಡ, ಇಂಗ್ಲಿಷ್‌, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನಕ್ಕೆ ಸಂಬಂಸಿದ ನೂರಕ್ಕೂ ಹೆಚ್ಚು ವಿಡಿಯೊ ಕಲಿಕಾ ಸಾಮಗ್ರಿಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

ಇಲಾಖೆಯ ವೆಬ್‌ಸೈಟ್‌ನಲ್ಲಿಯೂ ಕಲಿಕಾ ಸಾಮಗ್ರಿಗಳ ವಿಡಿಯೋಗಳನ್ನು ಲಿಂಕ್‌ ಮಾಡಲಾಗಿದೆ. ಇಂಟರ್ನೆಟ್‌ ಸೌಲಭ್ಯ ಹೊಂದಿರುವ ಪೋಷಕರು ಕಂಪ್ಯೂಟರ್‌ ಮುಂದೆ ಕುಳಿತು ತಮ್ಮ ಮಕ್ಕಳಿಗೆ ಈ ವಿಡಿಯೊಗಳನ್ನು ತೋರಿಸಬಹುದು.

ಇದರಿಂದ ಶಿಕ್ಷಕರು ತರಗತಿಗಳಲ್ಲಿ ಮಕ್ಕಳಿಗೆ ಪಾಠ- ಪ್ರವಚನಗಳನ್ನು ಮಾಡಿದ ನಂತರ ಆಯಾ ವಿಷಯಕ್ಕೆ ಸಂಬಂಸಿದ ವಿಡಿಯೊಗಳನ್ನು ಮಕ್ಕಳಿಗೆ ತೋರಿಸಿ ಸುಲಭವಾಗಿ ಅರ್ಥ ಮಾಡಿಸಲು ಸಹಕಾರಿಯಾಗಲಿದೆ.

ವಿಡಿಯೊ ಕಲಿಕಾ ಸಾಮಗ್ರಿಗಾಗಿ ಸಂಪರ್ಕಿಸಬಹುದಾದ ವೆಬ್‌ಸೈಟ್‌ ವಿಳಾಸ: www.dsert.kar.nic.in

ಮೊಬೈಲ್ ನಲ್ಲೂ ನೋಡಬಹುದು

ಇಂಟರ್ನೆಟ್ ಇರುವ ಮೊಬೈಲ್‌ಗಳಲ್ಲೂ ಯು-ಟ್ಯೂಬ್‌ನಿಂದ ಮಕ್ಕಳಿಗೆ ವಿಡಿಯೊ ಕಲಿಕಾ ಸಾಮಗ್ರಿಗಳನ್ನು ತೋರಿಸಬಹುದು. ಪ್ರಮುಖವಾಗಿ ಗಣಿತದಲ್ಲಿ ಮಕ್ಕಳು ಲೆಕ್ಕ ಕಲಿಯಲು, ವಿಜ್ಞಾನ ವಿಭಾಗದಲ್ಲಿ ಪ್ರಾಯೋಗಿಕ ತರಬೇತಿಗೆ ಪ್ರಾತ್ಯಕ್ಷಿಕೆ ನೀಡಲು ಈ ವಿಡಿಯೊ ಕಲಿಕಾ ಸಾಮಗ್ರಿಯಿಂದ ಹೆಚ್ಚಿನ ಸಹಕಾರಿಯಾಗಲಿದೆ.

''ಪ್ರಸ್ತುತ 3ರಿಂದ 10ನೇ ತರಗತಿವರೆಗಿನ ಕನ್ನಡ, ಇಂಗ್ಲಿಷ್‌, ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನಕ್ಕೆ ಸಂಬಂಸಿದ ನೂರಕ್ಕೂ ಹೆಚ್ಚು ವಿಡಿಯೊ ಕಲಿಕಾ ಸಾಮಗ್ರಿಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರಿಂದ ಶಿಕ್ಷಕರು ಹಾಗೂ ಮಕ್ಕಳಿಬ್ಬರಿಗೂ ಅನುಕೂಲವಾಗಲಿದೆ. ಯಾವುದೇ ವಿಷಯಗಳ ಶಿಕ್ಷಕರು ತರಗತಿಗಳಲ್ಲಿ ಪಾಠ ಮಾಡಿದ ನಂತರ ಕಂಪ್ಯೂಟರ್‌ ಅಥವಾ ಮೊಬೈಲ್‌ಗಳಲ್ಲಿ ಮಕ್ಕಳಿಗೆ ವಿಡಿಯೊ ಚಿತ್ರಣ ತೋರಿಸುವುದರಿಂದ ಸುಲಭವಾಗಿ ವಿಷಯ ಗ್ರಹಿಸಲು ಸಹಕಾರಿಯಾಗಲಿದೆ,'' ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
The Department of State Education Research and Training (DSERT) has uploaded video learning materials under the edusat program to facilitate children to read through You tube.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X