ದೆಹಲಿ ವಿಶ್ವವಿದ್ಯಾಲಯವು (DU) ಸಿಎಸ್‌ಎಎಸ್ ಯುಜಿ ಸ್ಪಾಟ್ ರೌಂಡ್ 1 ಸೀಟು ಹಂಚಿಕೆ ಫಲಿತಾಂಶವನ್ನು ಇಂದು, ಅಂದರೆ ಆಗಸ್ಟ್ 25 ರಂದು ಪ್ರಕಟಿಸಲಿದೆ. ಒಟ್ಟು 67 ಕಾಲೇಜುಗಳಲ್ಲಿ 13,000ಕ್ಕೂ ಹೆಚ್ಚು ಸೀಟುಗಳು ಇನ್ನೂ ಖಾಲಿ ಇವೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆಗಸ್ಟ್ 27 ರ ರಾತ್ರಿ 11:59 ರೊಳಗೆ ತಮ್ಮ ಸೀಟನ್ನು ಕಡ್ಡಾಯವಾಗಿ ಕನ್ಫರ್ಮ್ ಮಾಡಿಕೊಳ್ಳಬೇಕಾಗುತ್ತದೆ. ಸಮಯ ಅತ್ಯಂತ ಕಡಿಮೆಯಿರುವುದರಿಂದ, ಪ್ರವೇಶಾತಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ತಕ್ಷಣವೇ ಅಧಿಕೃತ ವೇಳಾಪಟ್ಟಿಯಂತೆ ಮುಂದಿನ ಕ್ರಮ ಕೈಗೊಳ್ಳುವುದು ಒಳಿತು.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಸಿಎಸ್‌ಎಎಸ್ ಯುಜಿ 2026 ರಲ್ಲಿ ನೋಂದಾಯಿಸಿಕೊಂಡು, ಆಗಸ್ಟ್ 22 ರವರೆಗೆ ಯಾವುದೇ ಕಾಲೇಜಿನಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಈ ಸ್ಪಾಟ್ ರೌಂಡ್‌ಗೆ ಅರ್ಹರಾಗಿರುತ್ತಾರೆ. ಇದರ ಜೊತೆಗೆ, ಆಗಸ್ಟ್ 12 ರಂದು ಸಿಬಿಎಸ್‌ಇ 12ನೇ ತರಗತಿಯ ಕಂಪಾರ್ಟ್‌ಮೆಂಟ್ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗಾಗಿ ಡಿ ಯು ಸ್ಪಾಟ್ ರೌಂಡ್ 1 ರ ಸಮಯದಲ್ಲಿ ಹಂತ II ಅನ್ನು ಸಹ ತೆರೆದಿದೆ. ಆದರೆ, ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಿಯುಇಟಿ ಯುಜಿ (CUET UG) ವಿವರಗಳು ಮತ್ತು ಸಕ್ರಿಯ ಸಿಎಸ್‌ಎಎಸ್ ಪ್ರೊಫೈಲ್ ಇರುವುದು ಕಡ್ಡಾಯ.

ಡಿ ಯು ಸಿಎಸ್‌ಎಎಸ್ ಯುಜಿ ಸ್ಪಾಟ್ ರೌಂಡ್ 1: ಪ್ರಮುಖ ದಿನಾಂಕಗಳು ಮತ್ತು ಡೆಡ್‌ಲೈನ್‌ಗಳು
ಈ ಸ್ಪಾಟ್ ಅಡ್ಮಿಷನ್ ಪ್ರಕ್ರಿಯೆಯು ಬಹಳ ಕಟ್ಟುನಿಟ್ಟಾದ ವೇಳಾಪಟ್ಟಿಯಂತೆ ನಡೆಯಲಿದೆ. ಆಗಸ್ಟ್ 23 ರಂದು ಖಾಲಿ ಸೀಟುಗಳ ಪಟ್ಟಿ ಬಿಡುಗಡೆಯಾಗಿತ್ತು, ಆಗಸ್ಟ್ 24 ರ ರಾತ್ರಿ 11:59 ಕ್ಕೆ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡಿದ್ದು, ಇಂದು ಹಂಚಿಕೆ ಫಲಿತಾಂಶ ಹೊರಬೀಳಲಿದೆ. ಸೀಟು ಒಪ್ಪಿಕೊಳ್ಳಲು ಆಗಸ್ಟ್ 27 ಕೊನೆಯ ದಿನವಾಗಿದ್ದು, ಆಗಸ್ಟ್ 28 ರಂದು ಕಾಲೇಜುಗಳ ಪರಿಶೀಲನೆ ಹಾಗೂ ಆಗಸ್ಟ್ 29 ರಂದು ಫೀಸ್ ಪಾವತಿಗೆ ಅವಕಾಶವಿರುತ್ತದೆ. ಪೋರ್ಟಲ್‌ನಲ್ಲಿ ಕಡೆ ಗಳಿಗೆಯ ಗೊಂದಲ ತಪ್ಪಿಸಲು ಈ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ.
| ಪ್ರಕ್ರಿಯೆ | ದಿನಾಂಕ ಮತ್ತು ಸಮಯ |
|---|---|
| ಖಾಲಿ ಸೀಟುಗಳ ಪಟ್ಟಿ ಪ್ರಕಟಣೆ | ಆಗಸ್ಟ್ 23, 2026 |
| ಸ್ಪಾಟ್ ರೌಂಡ್ I ಗೆ ಅರ್ಜಿ ಸಲ್ಲಿಕೆ | ಆಗಸ್ಟ್ 23–24, 2026 (ರಾತ್ರಿ 11:59 ರವರೆಗೆ) |
| ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ | ಆಗಸ್ಟ್ 25, 2026 |
| ಸೀಟು ಕನ್ಫರ್ಮ್ ಮಾಡಲು ಅವಕಾಶ | ಆಗಸ್ಟ್ 25–27, 2026 (ರಾತ್ರಿ 11:59 ರವರೆಗೆ) |
| ಕಾಲೇಜುಗಳಿಂದ ದಾಖಲೆ ಪರಿಶೀಲನೆ | ಆಗಸ್ಟ್ 28, 2026 (ಸಂಜೆ 4:59 ರವರೆಗೆ) |
| ಶುಲ್ಕ ಪಾವತಿಸಲು ಕೊನೆಯ ದಿನಾಂಕ | ಆಗಸ್ಟ್ 29, 2026 (ರಾತ್ರಿ 11:59 ರವರೆಗೆ) |
ಕಾಲೇಜುವಾರು ಖಾಲಿ ಸೀಟು ಚೆಕ್ ಮಾಡುವುದು ಮತ್ತು CSAS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ugadmission.uod.ac.in ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗಿನ್ ಆಗಿ. ನಂತರ 'Vacant Seats for Spot Round-I' ಲಿಂಕ್ ಕ್ಲಿಕ್ ಮಾಡಿ, ನಿಮಗಿಷ್ಟವಾದ ಕೋರ್ಸ್ ಮತ್ತು ಕಾಲೇಜುಗಳ ಖಾಲಿ ಸೀಟುಗಳನ್ನು ಪರಿಶೀಲಿಸಿ. ಡ್ಯಾಶ್‌ಬೋರ್ಡ್‌ನಲ್ಲಿ 'Apply for Spot Round' ಆಯ್ಕೆ ಮಾಡಿ, ನಿಮ್ಮ ಆದ್ಯತೆಗಳನ್ನು ಮರುಹೊಂದಿಸಿ ಸಬ್ಮಿಟ್ ಮಾಡಿ. ಸೀಟು ಹಂಚಿಕೆಯಾದ ನಂತರ 'Accept' ಕ್ಲಿಕ್ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಕಾಲೇಜಿನ ಅನುಮೋದನೆಗೆ ಕಾಯಿರಿ. ಅನುಮೋದನೆ ಸಿಕ್ಕ ಮೇಲಷ್ಟೇ ಶುಲ್ಕ ಪಾವತಿಸಿ. ನೆನಪಿಡಿ, ಕೇವಲ ಅಧಿಕೃತ ಪೋರ್ಟಲ್ ಮಾತ್ರ ಬಳಸಿ, ಯಾವುದೇ ಅನಧಿಕೃತ ಫಾರ್ಮ್‌ಗಳನ್ನು ನಂಬಬೇಡಿ.
ಡಿ ಯು ಸಿಎಸ್‌ಎಎಸ್ ಯುಜಿ ಸ್ಪಾಟ್ ರೌಂಡ್ 1: ಆಪ್‌ಗ್ರೇಡ್, ಫ್ರೀಜ್ ಮತ್ತು ಹಿಂಪಡೆಯುವಿಕೆಯ ನಿಯಮಗಳು
ಸ್ಪಾಟ್ ರೌಂಡ್‌ನಲ್ಲಿ ಸೀಟು 'ಅಪ್‌ಗ್ರೇಡ್' ಮಾಡಲು ಅಥವಾ ಸೀಟನ್ನು ಹಿಂಪಡೆಯಲು (Withdrawal) ಅವಕಾಶವಿರುವುದಿಲ್ಲ. ಒಮ್ಮೆ ಸಿಕ್ಕ ಸೀಟೇ ಅಂತಿಮವಾಗಿರುತ್ತದೆ. ಸೀಟು ಸ್ವೀಕರಿಸಲು ತಡ ಮಾಡಿದರೆ ಅಥವಾ ಸೀಟನ್ನು ಕನ್ಫರ್ಮ್ ಮಾಡದಿದ್ದರೆ ಆ ಸೀಟಿನ ಮೇಲಿನ ನಿಮ್ಮ ಹಕ್ಕು ರದ್ದಾಗುತ್ತದೆ. ಆದ್ದರಿಂದ ಯೋಚಿಸಿ ನಿರ್ಧಾರ ತಗೆದುಕೊಳ್ಳಿ; ನೀವು ಸೀಟು ಸ್ವೀಕರಿಸಿದ ತಕ್ಷಣ, ದಾಖಲೆ ಪರಿಶೀಲನೆ ಮತ್ತು ಶುಲ್ಕ ಪಾವತಿಗಾಗಿ ಪೋರ್ಟಲ್ ಅದನ್ನು ಆಟೋ-ಫ್ರೀಜ್ (Auto-freeze) ಮಾಡುತ್ತದೆ.
ಸ್ಪಾಟ್ ರೌಂಡ್ 1: ಅಗತ್ಯ ದಾಖಲೆಗಳು, ಫೀಸ್ ಪಾವತಿ ಮತ್ತು ಸಹಾಯವಾಣಿ ಮಾಹಿತಿ
ನಿಮ್ಮ ಸಿಯುಇಟಿ ಅಂಕಪಟ್ಟಿ, 12ನೇ ತರಗತಿಯ ಮಾರ್ಕ್ಸ್ ಕಾರ್ಡ್, ಫೋಟೋ ಗುರುತಿನ ಚೀಟಿ ಮತ್ತು ಮೀಸಲಾತಿ ಪ್ರಮಾಣಪತ್ರಗಳನ್ನು ಪಿಡಿಎಫ್ (PDF) ರೂಪದಲ್ಲಿ ಸಿದ್ಧವಿಟ್ಟುಕೊಳ್ಳಿ. ಶುಲ್ಕ ಪಾವತಿಸಲು ಆಗಸ್ಟ್ 29 ರ ರಾತ್ರಿ 11:59 ರವರೆಗೆ ಸಮಯವಿದೆ. ಒಂದು ವೇಳೆ ಡ್ಯಾಶ್‌ಬೋರ್ಡ್‌ನಲ್ಲಿ ತಾಂತ್ರಿಕ ತೊಂದರೆ ಎದುರಾದರೆ, ಕ್ಯಾಶ್ (Cache) ಕ್ಲಿಯರ್ ಮಾಡಿ ಅಥವಾ ಡೆಸ್ಕ್‌ಟಾಪ್ ಬ್ರೌಸರ್ ಬಳಸಿ. ಅಗತ್ಯವಿದ್ದರೆ [email protected] ಗೆ ಇಮೇಲ್ ಕಳುಹಿಸಬಹುದು. ಸಹಾಯವಾಣಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.


Click it and Unblock the Notifications