Earth Day 2021 Google Doodle: ವಿಶ್ವ ಭೂಮಿ ದಿನದ ಅಂಗವಾಗಿ ಡೂಡಲ್ ರಚಿಸಿದ ಗೂಗಲ್

ವಿಶ್ವ ಭೂಮಿ ದಿನದ ವಿಶೇಷ ಗೂಗಲ್ ಡೂಡಲ್

ವಿಶ್ವ ಭೂ ದಿನದ ಅಂಗವಾಗಿ ವಿಶೇಷ ಡೂಡಲ್ ಅನ್ನು ರಚಿಸುವ ಮೂಲಕ ಗೂಗಲ್ ಆಚರಣೆ ಮಾಡಿದೆ. ಡೂಡಲ್ ನಲ್ಲಿ ಮಗುವೊಂದು ತನ್ನ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಗಿಡ ನೆಡುವ ಮಾದರಿ ಸಂದೇಶವನ್ನು ನೀಡಲಾಗಿದೆ.

ವಿಶ್ವದಾದ್ಯಂತ ಏಪ್ರಿಲ್ 22 ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಡೂಡಲ್ ನಲ್ಲಿ ಪ್ರಕೃತಿಯನ್ನು ಕಾಪಾಡಿಕೊಳ್ಳುವ ಹಾಗೂ ಅದಕಕ್ಅಗಿ ಮಗುವೊಂದು ಗಿಡಗಳನ್ನು ನೆಡುವ ಕೆಲಸ ಅಗತ್ಯವಾದುದು ಎಂದು ಉತ್ತೇಜಿಸಿದೆ.

ನೀವು ಆನ್‌ಲೈನ್ ನಲ್ಲಿ ಗೂಗಲ್ ಗೆ ಭೇಟಿ ನೀಡಿದ ಬಳಿಕ ಗೂಗಲ್ ವಿಶೇಷ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ವೀಡಿಯೋ ಪ್ಲೇ ಆಗುತ್ತದೆ. ಅದರಲ್ಲಿ ಮಗುವೊಂದು ಗಿಡ ನೆಡುತ್ತದೆ ಅದು ದೊಡ್ಡದಾಗಿ ಬೆಳೆದು ಮರವಾಗುತ್ತದೆ, ಹೀಗೆ ಮುಂದಿನ ತಲೆಮಾರುಗಳು ಈ ಪ್ರಕ್ರಿಯೆಯನ್ನು ಮುಂದುವರೆಸುತ್ತವೆ ಆಗ ಭೂಮಿ ತುಂಬೆಲ್ಲಾ ಹಚ್ಚ ಹಸಿರು ಮೂಡುತ್ತದೆ ಇದರಿಂದ ಭೂಮಂಡಲ, ಸಕಲ ಚರಾಚರಗಳು ಉತ್ತಮ ನಿಸರ್ಗದಲ್ಲಿ ಬದುಕಲು ಸಹಾಯವಾಗುತ್ತದೆ ಎಂದು ತೋರಿಸಲಾಗಿದೆ.

ಆರೋಗ್ಯಕರ ಮತ್ತು ಸುಸ್ಥಿರ ವಾತಾವರಣಕ್ಕಾಗಿ ಸುಮಾರು 20 ಮಿಲಿಯನ್ ಅಮೇರಿಕನ್ನರು ಧೇಶದಾದ್ಯಂತ ಬೀದಿಗಿಳಿದು ಆಂದೋಲನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಭೂ ದಿನಾಚರಣೆಯ ಕಲ್ಪನೆಯನ್ನು ವಿಸ್ಕಾನ್ಸಿನ್‌ನ ಯುಎಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಹುಟ್ಟು ಹಾಕಿದರು. ಭೂ ದಿನವನ್ನು ಮೊದಲು ಏಪ್ರಿಲ್ 22,1970ರಂದು ಆಚರಿಸಲಾಯಿತು.

For Quick Alerts
ALLOW NOTIFICATIONS  
For Daily Alerts

English summary
Google published doodle which highlights the girl plant trees which helpful for our bright future.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X