ಕೆಸಿಇಟಿ ಪಾಸ್... ಸರ್ಕಾರಿ ಸೀಟು ಬೇಕಾ ಹಾಗಿದ್ರೆ ಈ ಅರ್ಹತೆ ನಿಮ್ಮಲ್ಲಿರಬೇಕು!

ಶೈಕ್ಷಣಿಕ ಜೀವನದಲ್ಲಿ ಪಿಯುಸಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಘಟ್ಟಗಳು.

ಶೈಕ್ಷಣಿಕ ಜೀವನದಲ್ಲಿ ಪಿಯುಸಿ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಘಟ್ಟಗಳು. ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ವಿದ್ಯಾರ್ಥಿಗಳು ಸಿ ಇ ಟಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದರಲ್ಲಿ ನಿರತರಾಗುತ್ತಾರೆ. ವೃತ್ತಿಪರ ಶಿಕ್ಷಣಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯು ಅತ್ಯಂತ ಮಹತ್ವದಾಗಿದ್ದು ಅದಕ್ಕಾಗಿ ವಿಶೇಷ ತಯಾರಿ ನಡೆಸಬೇಕಾಗುತ್ತದೆ. ಪಿಯುಸಿ ಪರೀಕ್ಷೆಗಿಂತ ಹೆಚ್ಚಿನ ಶ್ರಮವನ್ನು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ವ್ಯಯಿಸಬೇಕಾಗುತ್ತದೆ.

ಕೆಸಿಇಟಿ ಪಾಸ್... ಸರ್ಕಾರಿ ಸೀಟು ಬೇಕಾ ಹಾಗಿದ್ರೆ ಈ ಅರ್ಹತೆ ನಿಮ್ಮಲ್ಲಿರಬೇಕು!

ಪಿ ಯು ಸಿ ನಂತರದ ವೃತ್ತಿಪರ ಕೋರ್ಸ್ ಗೆ ಸೇರುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯೇ ಕೆಸಿಇಟಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಏನೆಲ್ಲಾ ಅರ್ಹತೆ, ಮಾನದಂಡ ಹಾಗೂ ಪ್ರವೇಶಾತಿ ವೇಳೆ ಏನೆಲ್ಲಾ ದಾಖಲೆಗಳನ್ನ ಪ್ರಸ್ತುತಿ ಪಡಿಸಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಇದೀಗ ಸಲಹೆ ನೀಡುತ್ತಿದೆ

ಸರ್ಕಾರಿ ಸೀಟಿಗೆ ಏನೆಲ್ಲಾ ಅರ್ಹತೆಗಳಿರಬೇಕು:

  • ಅವರು ಭಾರತದ ನಾಗರಿಕರನಾಗಿರಬೇಕು ಸೇರಿದಂತೆ ಈ ಕೆಳಗಿನ ಯಾವುದೇ ಶರತ್ತು ಹೊಂದಿರದೇ ಇದ್ದರೆ ಅವರಿಗೆ ಸೀಟು ಪಡೆಯಲು ಅರ್ಹತೆ ಪಡೆದಿರುವುದಿಲ್ಲ
  • ಪ್ರವೇಶಾತಿ ವೇಳೆ ಯಾರು ಮೂಲ ದಾಖಲೆಗಳನ್ನ ಪ್ರಸ್ತುತ ಪಡಿಸುವುದಿಲ್ಲವೋ ಅವರು ಅರ್ಹತೆ ಪಡೆಯುದಿಲ್ಲ
  • ಹೈದ್ರಾಬಾದ್ - ಕರ್ನಾಟಕ ಮೀಸಲಾತಿ ಅಡಿಯಲ್ಲಿ ಬರುವುದಾದ್ರೆ ವಿದ್ಯಾರ್ಥಿಗಳು ವಾಸ ಸ್ಥಳದ ಮೂಲ ದಾಖಲೆಗಳನ್ನ ಪ್ರಸ್ತುಪಡಿಸಿಬೇಕು
  • ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ ಸರ್ಕಾರದಿಂದ ಅಧೀಕೃತ ಗೊಂಡ ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಅಂದ್ರೂ ೭ ವರ್ಷ ವ್ಯಾಸಂಗ ಮಾಡಿರಬೇಕು
  • ಸರ್ಕಾರದಿಂದ ಅಧೀಕೃತ ಗೊಂಡ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಪಿಯುಸಿ ಇಲ್ಲ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರಬೇಕು ಜತೆಗೆ ಅಭ್ಯರ್ಥಿಗಳ ಪೋಷಕರು ೭ ವರ್ಷ ಕರ್ನಾಟಕದಲ್ಲಿ ವ್ಯಾಸಾಂಗ ಮಾಡಿರಬೇಕು.
  • ಅಭ್ಯರ್ಥಿಗಳ ಹಾಗೂ ಪೋಷಕರ ಮೂಲ ಭಾಷೆ ಕನ್ನಡ, ತುಳು ಹಾಗೂ ಕೊಡವ ಆಗಿರಬೇಕು. ಒಂದು ವೇಳೆ ನೀವು ಕರ್ನಾಟಕದವರಾಗಿದ್ದು, ಕರ್ನಾಟಕದಿಂದ ಹೊರಗಡೆ ನೆಲಸಿದ್ದರೆ, ಇಲ್ಲ ಬೇರೆ ರಾಜ್ಯಗಳಲ್ಲಿ ಕಲಿತಿದ್ದರೆ ನೀವು ಶಿಕ್ಷಣ ಸಂಸ್ಥೆಯು ನಡೆಸುವ ಕನ್ನಡ ಭಾಷೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು
  • ಮಹಾರಾಷ್ಟ್ರ ದಕ್ಷಿಣ ಸೋಲಾಪುರ್, ಅಕ್ಕಾಲ್ಕೋಟ್, ಗಾದಿಂಗ್ಲಾಜ್ ಹಾಗೂ ಕೇರಳದ ಕಾಸರಗೋಡು, ಹೊಸದುರ್ಗಾ ಹಾಗೂ ಮಂಜೇಶ್ವರ ತಾಲೂಕಿನ ವಿದ್ಯಾರ್ಥಿಗಳು ಕೂಡಾ ಕಡ್ಡಾಯವಾಗಿ ಕೆಇಟಿ ನಡೆಸುವ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಪ್ರವೇಶಾತಿ ವೇಳೆ ಏನೆಲ್ಲಾ ದಾಖಲೆಗಳನ್ನ ಕಡ್ಡಾಯವಾಗಿ ಪ್ರಸ್ತುತಪಡಿಸಬೇಕು:

  • ಎಸ್‌ಎಸ್‌ಎಲ್‌ಸಿ/10ನೇ ಅಂಕ ಪಟ್ಟಿ
  • ದ್ವಿತೀಯ ಪಿಯುಸಿ/12ನೇ ತರಗತಿ ಅಂಕ ಪಟ್ಟಿ
  • ಸ್ಟಡಿ ಸರ್ಟಿಫಿಕೇಟ್
  • ಗ್ರಾಮೀಣ ವಿದ್ಯಾರ್ಥಿಯಾಗಿದ್ದಲ್ಲಿ ಸರ್ಟಿಫಿಕೇಟ್ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
  • ಕನ್ನಡ ಮೀಡಿಯಂ ಮೀಸಲಾತಿ ಬಯಸಿದ್ದಲ್ಲಿ ಕನ್ನಡ ಮೀಡಿಯಂ ವ್ಯಾಸಂಗ ಪ್ರಮಾಣ ಪತ್ರ
  • ಜಾತಿ ಮೀಸಲಾತಿ ಬೇಕಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ
  • 7 ವರ್ಷ ಕರ್ನಾಟಕದಲ್ಲಿ ಕಲಿತಿರುವ ಪ್ರಮಾಣ ಪತ್ರ
  • ಪೋಷಕರ ಸ್ಟಡಿ ಸರ್ಟಿಫಿಕೇಟ್
  • ಅಭ್ಯರ್ಥಿಯ ಸ್ಟಡಿ ಸರ್ಟೀಫಿಕೇಟ್ ಜತೆಗೆ ಟ್ರಾನ್ಸರ್ ಫರ್ ಸರ್ಟಿಫಿಕೇಟ್
  • ಮೂಲ ಭಾಷೆಗೆ ಸಂಬಂಧಪಟ್ಟ ಪ್ರಮಾಣಪತ್ರ
  • ಕೆಇಟಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸರ್ಟಿಫಿಕೇಟ್
  • ಹಾಗೂ ಇನ್ನೂ ಕೆಲವೊಂದು ಪ್ರಮುಖ ಸರ್ಟಿಫಿಕೇಟ್ ಗಳನ್ನ ಪ್ರಸ್ತುತ ಪಡಿಸಬೇಕು

ಈ ಕುರಿತು ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

Read in English: What is KCET Exam?
English summary
Karnataka Common Entrance Test is a state level common entrance test, conducted by the Karnataka Examination Authority (KEA). The entrance test is conducted to offer admission in various undergraduate courses in the colleges of Karnataka.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+