ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೆ ಇಪಿಎಫ್ಒ ಸೌಲಭ್ಯ

Posted By:

ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೆ ಇಪಿಎಫ್ ಸೌಲಭ್ಯ ಕಲ್ಪಿಸುವುದಾಗಿ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ವಿ.ಪಿ.ಜಾಯ್ ತಿಳಿಸಿದ್ದಾರೆ.

ಇಪಿಎಫ್ಒ ಅನ್ನು ಆನ್ಲೈನ್ ಸೌಲಭ್ಯದ ಮೂಲಕ ವಿಸ್ತರಿಸಿ ವಿದೇಶದಲ್ಲಿರುವ ಭಾರತೀಯರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾವು ಕೆಲಸ ಮಾಡುವ ವಿದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಗೆ ಭಾರತೀಯ ಪ್ರಜೆ ಸೇರಿಕೊಳ್ಳದೇ ಇದ್ದರೆ, ಇಪಿಎಫ್ಒ ಅನ್ನು ಸೇರಲು ಅವಕಾಶ ನೀಡಲಾಗಿದೆ.

ವಿದೇಶದಲ್ಲಿರುವ ಭಾರತೀಯರಿಗೆ ಇಪಿಎಫ್ಒ

ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆ ನೌಕರರ ಪ್ರಾವಿಡೆಂಟ್ ನಿಧಿ ಖಾತೆಗಳಲ್ಲಿ ಹಣವನ್ನು ನಿರ್ವಹಿಸುವ 18 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಜಾಯ್ ವಿವರಿಸಿದರು.

ಈ ಯೋಜನೆಯು ಎಲ್ಲರಿಗು ಸುಲಭವಾಗಿ ಸಿಗುವವಂತಾಗಿದ್,ದು ಇದರಿಂದ ವಿದೇಶಗಳಲ್ಲಿ ಕೆಲಸಕ್ಕೆ ಸೇರುವ ಭಾರತೀಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಅತ್ಯಂತ ಸರಳವಾದ ವಿಧಾನವನ್ನು ಇದು ಹೊಂದಿದ್ದು. ಕೇವಲ ಒಂದು ಪುಟದ ಅರ್ಜಿಯನ್ನು ಒಳಗೊಂಡಿದೆ. ಇದರಿಂದ ಸುಲಭವಾಗಿ ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಅವರು ತಿಳಿಸಿದರು.

ನೌಕರಿಗೆ ವಿದೇಶಕ್ಕೆ ತೆರೆಳುವವರು ಸರ್ಟಿಫಿಕೇಟ್ ಆಫ್ ಕವರೇಜ್ (ಸಿಒಸಿ) ಪಡೆಯಬೇಕಾಗುತ್ತದೆ. ಸಿಒಸಿ ಸೆರ್ಟಿಫಿಕೇಟ್ ಗಳನ್ನೂ ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಬೆಲ್ಜಿಯಂ, ಜರ್ಮನಿ, ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಡೆನ್ಮಾರ್ಕ್, ರಿಪಬ್ಲಿಕ್ ಆಫ್ ಕೊರಿಯಾ, ನೆದರ್ಲ್ಯಾಂಡ್ಸ್, ಹಂಗೇರಿ, ಫಿನ್ಲಂಡ್, ಸ್ವೀಡನ್, ನಾರ್ವೆ, ಆಸ್ಟ್ರೇಲಿಯ, ಕೆನಡಾ, ಜಪಾನ್, ಪೋರ್ಚುಗಲ್ ಸೇರಿದಂತೆ 18 ದೇಶಗಳಲ್ಲಿನ ಭಾರತೀಯ ಉದ್ಯೋಗಿಗಳಿಗೆ ಯೋಜನೆ ಅನ್ವಯವಾಗುತ್ತದೆ ಎಂದು ಅವರು ಹೇಳಿದರು.

English summary
Indians working abroad can now exempt themselves from their host country's social security scheme and get covered by retirement fund body EPFO, Central Provident Fund Commissioner (CPFC) V P Joy said.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia