ದಿನೇ ದಿನೇ ಕೊರೋನಾ ಸೋಂಕು ದೇಶ ವಿದೇಶಗಳಲ್ಲಿ ಹೆಚ್ಚುತ್ತಿದ್ದು, ಈಗಾಗಲೇ ವಿವಿಧ ಐಟಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅನೇಕ ಕಂಪೆನಿಗಳು ವರ್ಕ್ ಫ್ರಂ ಹೋಂ ಅವಧಿಯನ್ನು ವಿಸ್ತರಿಸಿವೆ.

ಅದೇ ರೀತಿಯಾಗಿ ಫೇಸ್‌ಬುಕ್ ಕೂಡ ತನ್ನ ಉದ್ಯೋಗಿಗಳಿಗೆ 2021ರ ಜುಲೈ ವರೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಅದಲ್ಲದೆಯೇ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಅಗತ್ಯ ಸಲಕರಣೆ ಖರೀದಿಸಲು 1,000 ಡಾಲರ್ ಅಂದರೆ ಸುಮಾರು 75,000/-ರೂ ಧನಸಹಾಯ ಕೂಡ ನೀಡುತ್ತಿದೆ. ಉಳಿದಂತೆ ಇತರೆ ಭತ್ಯೆಗಳನ್ನು ಕೂಡ ಫೇಸ್‌ಬುಕ್ ನೀಡುತ್ತಿದೆ.
ಇತ್ತೀಚೆಗಷ್ಟೇ ಗೂಗಲ್ ಸಂಸ್ಥೆಯು ತನ್ನ ಉದ್ಯೊಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಜುಲೈ 2021ರ ವರೆಗೆ ವರ್ಕ್ ಫ್ರಂ ಹೋಂ ಅವಧಿಯನ್ನು ವಿಸ್ತರಿಸಿತ್ತು. 8 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್ ಕಂಪನಿ ಕೂಡ ತನ್ನ ಉದ್ಯೋಗಿಗಳಿಗೆ ಜನವರಿ 2021ರ ವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿತ್ತು.


Click it and Unblock the Notifications











