
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಆನ್‌ಲೈನ್ ಪರೀಕ್ಷೆಯೇ ಪರಿಹಾರವೆಂಬ ನಿಟ್ಟಿನಲ್ಲಿ ವಿಎಚ್ ಸಾಫ್ಟ್‌ವೇರ್ ಕಂಪೆನಿಯು ಅಭಿವೃದ್ಧಿಪಡಿಸಿರುವ ಆಪ್ ಅನ್ನು ಬಳಸಿ ಸಿಬಿಎಸ್ಇ ಆನ್‌ಲೈನ್ ಪರೀಕ್ಷೆ ನಡೆಸಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೆ ಆನ್‌ಲೈನ್ ಪರೀಕ್ಷೆ ಹಾಗೂ ಆಪ್ ಖರೀದಿ ಸಂದೇಶವು ದಾರಿ ತಪ್ಪಿಸುವಂತದ್ದು. ಈ ರೀತಿಯಾಗಿ ಆಪ್ ಖರೀದಿಸಲು ಸಿಬಿಎಸ್ಇ ಶಿಫಾರಸ್ಸು ಮಾಡಿಲ್ಲ ಮತ್ತು ಈ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ರೀತಿಯ ಸಂದೇಶಗಳಿಗೆ ಆತಂಕಪಡದಿರುವುದು ಒಳಿತು ಎಂದು ತಿಳಿಸಿದೆ.
For Quick Alerts
For Daily Alerts
English summary
Fact Check: CBSE has not recommended to buy app for online exams.
Story first published: Tuesday, June 2, 2020, 21:53 [IST]


Click it and Unblock the Notifications











