ಭಾರತೀಯ ಆಹಾರ ನಿಗಮ ನೇಮಕಾತಿ 2019: ಜೆಇ ಮತ್ತು ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ

ಎಫ್‌ಸಿಐ 2019 ಜೆಇ ಮತ್ತು ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತೀಯ ಆಹಾರ ನಿಗಮ 4103 ಜ್ಯೂನಿಯರ್ ಇಂಜಿನಿಯರ್ (JE) (ಸಿವಿಲ್ ಇಂಜಿನಿಯರಿಂಗ್/ಇಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್), ಮತ್ತು ಅಸಿಸ್ಟೆಂಟ್ ಗ್ರೇಡ್ -|| (ಎಜಿ||) (ಹಿಂದಿ), ಸ್ಟೆನೋ ಗ್ರೇಡ್-||, ಟೈಪಿಸ್ಟ್ (ಹಿಂದಿ) ಮತ್ತು ಅಸಿಸ್ಟೆಂಟ್ ಗ್ರೇಡ್ -||| (ಎಜಿ |||) (ಜನರಲ್ / ಅಕೌಂಟ್ಸ್ /ಟೆಕ್ನಿಕಲ್ /ಡಿಪೋಟ್ ) ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಚ್ 25,2019 ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.

ಎಫ್‌ಸಿಐ: ಜೆಇ ಮತ್ತು ಅಸಿಸ್ಟೆಂಟ್ ಗ್ರೇಡ್  ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ಬಿಡುಗಡೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಿದ್ದು,ಇದೇ ಮೇ 31,ಜೂನ್ 1 ,ಜೂನ್ 2 ಮತ್ತು ಜೂನ್ 3 ರಂದು ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪರೀಕ್ಷೆಯನ್ನು ಎದುರಿಸಲು ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್‌ನಿಂದ ತಮ್ಮ ಪ್ರವೇಶ ಪತ್ರವನ್ನು ಜೂನ್ 3,2019 ರೊಳಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.

ಭಾರತೀಯ ಆಹಾರ ನಿಗಮ ಜೆಇ ಮತ್ತು ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳ ನೇಮಕಾತಿಯ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್ ಸೈಟ್ http://fci.gov.in/ ಗೆ ಭೇಟಿ ಕೊಡಿ
ಸ್ಟೆಪ್ 2: ನಂತರ ಹೋಮ್ ಪೇಜ್‌ನಲ್ಲಿ ಕಾಣಿಸುವ " Current Recruitment " ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಮತ್ತೊಂದು ಪುಟಕ್ಕೆ ಹೋಗುವಿರಿ ಪುಟದ ಕೆಳಭಾಗದಲ್ಲಿ ಇರುವ "To Download Call Letter, Click On Zone" ನ ಕೆಳಗಿರುವ ನಿಮ್ಮ Zone ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ನಿಮ್ಮ ರಿಜಿಸ್ಟ್ರೇಶನ್ ನಂ / ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕ / ಪಾಸ್‌ ವರ್ಡ್‌ ನೀಡಿ, ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಕಾಣುತ್ತದೆ.
ಸ್ಟೆಪ್ 5: ಅಭ್ಯರ್ಥಿಗಳು ಸ್ಕ್ರೀನ್ ಮೇಲೆ ಕಾಣುವ ಪ್ರವೇಶ ಪತ್ರವನ್ನು ಡೌನಲೋಡ್ ಮಾಡಿಕೊಂಡು ಒಂದು ಪ್ರಿಂಟೌಟ್‌ ತೆಗೆದಿಟ್ಟುಕೊಳ್ಳಿ.

ಒಮ್ಮೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿದ ನಂತರ ಅರ್ಜಿದಾರರು ಒಂದು ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ ಮತ್ತು ಅದನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಿರುತ್ತದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನೀಡಿರುವ ತಮ್ಮ ಗುರುತಿನ ಚೀಟಿಯನ್ನು ಒಯ್ಯತಕ್ಕದ್ದು ಇಲ್ಲವಾದಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ. ಈ ಪರೀಕ್ಷೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Food Corporation of India has released the admit cards 2019 for junior engineer and assistant grade posts on official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+