ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ ಗೇಟ್ 2020 ಪರೀಕ್ಷೆಯ ಅರ್ಜಿ ಸಲ್ಲಿಕೆಯ ಅವಧಿಯನ್ನು ಅಕ್ಟೋಬರ್ 07, 2020 ರವರೆಗೆ ವಿಸ್ತರಿಸಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಇದೀಗ ಅರ್ಜಿಯನ್ನು ಸಲ್ಲಿಸಬಹುದು.
ಈ ಹಿಂದೆ ಸೆಪ್ಟೆಂಬರ್ 14,2020 ರಿಂದ ಸೆಪ್ಟೆಂಬರ್ 30,2020ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಅಕ್ಟೋಬರ್ 7,2020ರವರೆಗೆ ಈ ಮುಂಚೆ ನಿಗದಿಯಾಗಿರುವಂತೆ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು.
GATE Exam 2021: ಫೆಬ್ರವರಿ 5ರಿಂದ ಪರೀಕ್ಷೆ ಪ್ರಾರಂಭ
ಗೇಟ್ 2021 ಪರೀಕ್ಷೆಯನ್ನು ಫೆಬ್ರವರಿ 5 ರಿಂದ 7,2021 ರವರೆಗೆ, ಫೆಬ್ರವರಿ 12 ರಿಂದ 14, 2021 ರವರೆಗೆ ಒಟ್ಟು 6 ದಿನಗಳ ಕಾಲ 12 ಸೆಷನ್ನಲ್ಲಿ ನಡೆಸಲಾಗುವುದು. ಒಟ್ಟು 27 ಸಬ್ಜೆಕ್ಟ್ಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಗೇಟ್ 2021 ಪರೀಕ್ಷೆಯ ಫಲಿತಾಂಶ ದಿನಾಂಕದಿಂದ 3 ವರ್ಷಗಳ ಕಾಲ ಸ್ಕೋರ್ಗೆ ಮಾನ್ಯತೆ ಇರಲಿದೆ.
ಗೇಟ್ 2021 ಪರೀಕ್ಷೆಯ ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 14,2020
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 07,2020
ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 07,2020
ಪರೀಕ್ಷೆ ಪತ್ರಿಕೆ, ಕೇಂದ್ರ ತಿದ್ದುಪಡಿಗೆ ಕೊನೆಯ ದಿನಾಂಕ: ಅಕ್ಟೋಬರ್ 17, 2020
ಪ್ರವೇಶ ಪತ್ರ ಬಿಡುಗಡೆಯ ದಿನಾಂಕ: ಜನವರಿ 8,2021
ಗೇಟ್ 2021 ಪರೀಕ್ಷೆ ದಿನಾಂಕ: ಫೆಬ್ರವರಿ 5,2021 ರಿಂದ ಫೆಬ್ರವರಿ 14,2021
GATE 2021 ಫಲಿತಾಂಶ ದಿನಾಂಕ: ಮಾರ್ಚ್ 22,2021
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ