GATE 2022 Scorecard : ಗೇಟ್ ಸ್ಕೋರ್‌ಕಾರ್ಡ್ ಪ್ರಕಟ, ಡೌನ್‌ಲೋಡ್ ಮಾಡುವುದು ಹೇಗೆ ?

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಖರಗ್‌ಪುರ) ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ (ಗೇಟ್) 2022 ರ ಸ್ಕೋರ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಗೇಟ್ ಸ್ಕೋರ್‌ಕಾರ್ಡ್‌ಗಳನ್ನು ಐಐಟಿ ಖರಗ್‌ಪುರದ ಅಧಿಕೃತ ವೆಬ್‌ಸೈಟ್ gate.iitkgp.ac.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಗೇಟ್ ಸ್ಕೋರ್ ಕಾರ್ಡ್ ರಿಲೀಸ್

ಮಾರ್ಚ್ 22ರ ರಾತ್ರಿ ಗೇಟ್ ಸ್ಕೋರ್ ಕಾರ್ಡ್ ಡೌನ್‌ಲೋಡ್ ಲಿಂಕ್ ಅನ್ನು ಸಕ್ರಿಯಗೊಳಿಸಲಾಗಿದೆ. ಗೇಟ್ ಅಕಾಡೆಮಿ ನಿರ್ದೇಶಕ ಉಮೇಶ್ ದಾಂಡೆ, "ಅಂಕದ ಕಾರ್ಡ್ ಅನ್ನು ನಿನ್ನೆ ರಾತ್ರಿ 9 ಗಂಟೆಗೆ ಬಿಡುಗಡೆ ಮಾಡಲಾಗಿದೆ, ಅಧಿಕೃತ ವೆಬ್‌ಸೈಟ್ gate.iitkgp.ac.in ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ." ಎಂದು ಹೇಳಿದ್ದಾರೆ.

ಇಂಜಿನಿಯರಿಂಗ್ ಪದವೀಧರರ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಯನ್ನು ಫೆಬ್ರವರಿ 5 ರಿಂದ ಫೆಬ್ರವರಿ 13ರ ನಡುವೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಫೆಬ್ರವರಿ 21 ರಂದು ಗೇಟ್ 2022 ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಯಿತು, ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಹ ಆಹ್ವಾನಿಸಲಾಗಿತ್ತು. ತದನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಮಾರ್ಚ್ 17ರಂದು ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ದೇಶದ 7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಗೇಟ್ 2022 ಗೆ ಹಾಜರಾಗಿದ್ದರು, ಅವರಲ್ಲಿ 1,26,813 ಜನರು ಪರೀಕ್ಷೆಯಲ್ಲಿ ಅರ್ಹರಾಗಿದ್ದಾರೆ. ಅಭ್ಯರ್ಥಿಗಳ ಸ್ಕೋರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ನೋಡಿ.

ಗೇಟ್ 2022 ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ?:

ಸ್ಟೆಪ್ 1 : ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://gate.iitkgp.ac.in/ ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ 'ಲಾಗಿನ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3 : ಅಭ್ಯರ್ಥಿಗಳು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4 : ಗೇಟ್ ಸ್ಕೋರ್ ಕಾರ್ಡ್ ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ

GATE 2022ರ ಅಂಕಪಟ್ಟಿಯು PG ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ ಬಹಳ ಮುಖ್ಯವಾದ ದಾಖಲೆಯಾಗಿದೆ. ಸ್ಕೋರ್‌ಕಾರ್ಡ್ ಅಭ್ಯರ್ಥಿಯು ಪಡೆದುಕೊಂಡ ಅಂಕಗಳ ಜೊತೆಗೆ ಗೇಟ್ 2022 ರ ರ್ಯಾಂಕ್ ಅನ್ನು ಒಳಗೊಂಡಿದೆ.

ಪರೀಕ್ಷಾ ಅಧಿಕಾರಿಗಳು ಹಂಚಿಕೊಂಡ ವಿವರಗಳ ಪ್ರಕಾರ, GATE 2022 ಸ್ಕೋರ್‌ಕಾರ್ಡ್ ಅನ್ನು ಅಭ್ಯರ್ಥಿಗಳಿಗೆ ಡೌನ್‌ಲೋಡ್ ಮಾಡಲು ಇಂದಿನಿಂದ ಅಂದರೆ 22ನೇ ಮಾರ್ಚ್ 2022 ರಿಂದ 31ನೇ ಮೇ 2022 ರವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ GOAPS ಪೋರ್ಟಲ್‌ನಿಂದ ಅವರ GATE 2022 ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ಯಾವುದೇ ಶುಲ್ಕಗಳು ಅಥವಾ ವಿಳಂಬ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ತದನಂತರ 1ನೇ ಜೂನ್‌ನಿಂದ 31ನೇ ಡಿಸೆಂಬರ್ 2022 ರವರೆಗೆ ಅಭ್ಯರ್ಥಿಗಳು ತಮ್ಮ GATE 2022 ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ವಿಳಂಬ ಶುಲ್ಕವಾಗಿ Rs 500/- ಅನ್ನು ವಿಧಿಸಲಾಗುತ್ತದೆ. ಮತ್ತು 1ನೇ ಜನವರಿ 2023 ರ ನಂತರ ಈ ಗೇಟ್ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವ ಸೌಲಭ್ಯವು ಲಭ್ಯವಿರುವುದಿಲ್ಲ.

GATE 2022 ಸ್ಕೋರ್‌ಕಾರ್ಡ್ ಬಗ್ಗೆ ಅಭ್ಯರ್ಥಿಗಳು ತಿಳಿದಿರಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಮಾನ್ಯತೆಯ ಅವಧಿ. ಇಂದು ಪ್ರಕಟಿಸಲಾಗುವ GATE 2022 ಅಂಕಪಟ್ಟಿಯು GATE 2022 ಫಲಿತಾಂಶವನ್ನು ಪ್ರಕಟಿಸಿದ ದಿನಾಂಕದಿಂದ 3 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಈ ಸೀಮಿತ ಅವಧಿಯಲ್ಲಿ ಮಾತ್ರ PSU ಗಳಲ್ಲಿ ಪ್ರವೇಶ ಅಥವಾ ನೇಮಕಾತಿಯನ್ನು ಪಡೆಯಲು ಮಾತ್ರ ಬಳಸಬಹುದು ಮತ್ತು ನಂತರದಲ್ಲಿ ಬಳಸಲು ಅವಕಾಶವಿರುವುದಿಲ್ಲ.

More News  

For Quick Alerts
ALLOW NOTIFICATIONS  
For Daily Alerts

English summary
GATE scorecard released, here it the validity of gate scorecard and how to download it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+