Children’s Day 2019: ಮಕ್ಕಳ ದಿನಾಚರಣೆಗಾಗಿ ವಿಶೇಷ ಡೂಡಲ್ ನೀಡಿದ ಗೂಗಲ್

ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಇದೀಗ ಗೂಗಲ್ ಸರ್ಚ್ ಇಂಜಿನ್. ಹೌದು ಇಂದು ದೇಶದೆಲ್ಲೆಡೆ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಮಕ್ಕಳ ದಿನಾಚರಣೆಗೆ ಸಂಬಂಧಪಟ್ಟಂತೆ ವಿಶೇಷವಾಗಿ ಪರಿಸರದ ಕಾಳಜಿಯುಳ್ಳ ಡೂಡಲ್ ಅನ್ನು ನೀವು ನೋಡಬಹುದಾಗಿದೆ.

ಮಕ್ಕಳ ದಿನಾಚರಣೆಗೆ ವಿಶೇ‍ಷ ಡೂಡಲ್ ರಚಿಸಿದ ಗೂಗಲ್

 

ಪ್ರತೀ ವರ್ಷ ನವಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಜನ್ಮದಿನದ ಸವಿನೆನಪಿಗಾಗಿ ಈ ಮಕ್ಕಳ ದಿನಾಚರಣೆಯನ್ನ ಆಚರಿಸಲಾಗುತ್ತದೆ.

ನವಂಬರ್ 14 ರಂದು ಜನಿಸಿರುವ ದೇಶದ ಮೊದಲ ಪ್ರಧಾನಿ ನೆಹರೂ ಅವರಿಗೆ ಮಕ್ಕಳೆಂದ್ರೆ ಅಚ್ಚುಮೆಚ್ಚು. ಹಾಗಾಗಿ ತಮ್ಮ ಜನ್ಮ ದಿನವನ್ನ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಕರೆ ನೀಡಿದ್ದರು ನೆಹರೂ. ಈ ದಿನವನ್ನ ಹಿಂದಿಯಲ್ಲಿ ಬಾಲ್ ದಿವಸ್ ಎಂದು ಕರೆಯುತ್ತಾರೆ.

ಇನ್ನು ಈ ಬಾರಿಯ ಡೂಡಲ್ ಡಿಸೈನ್ ಬಗ್ಗೆ ಹೇಳುವುದಾದ್ರೆ ಗುರಗಾಂನ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ದಿವ್ಯಾಂಶಿ ಈ ಡೂಡಲ್ ಅನ್ನು ರಚಿಸಿದ್ದಾರೆ. ನವಂಬರ್ 14 ಮಕ್ಕಳ ದಿನಾಚರಣೆ ಪ್ರಯುಕ್ತ "ನಾನು ದೊಡ್ಡವಳಾಗಿ ಬೆಳೆದ ಸಮಯಕ್ಕೆ, ಮರಗಳು ನಡೆಯಬಹುದು ಅಥವಾ ಹಾರಬಲ್ಲವು ಎಂದು ನಾನು ಭಾವಿಸುತ್ತೇನೆ. ಇದರಿಂದ ಮಾನವರು ಮರಗಳನ್ನು ಒಂದೆಡೆಯಿಂದ ಇನ್ನೊಂದೆಗೆ ಸಾಗಿಸಲು ಸುಲಭವಾಗುವುದು. ಅಗತ್ಯವಿದ್ದರೆ ಮರಗಳಿಗೆ ತಮ್ಮ ಸ್ನೇಹಿತರ ಜೊತೆ ಇನ್ನೊಂದು ಕಡೆಗೆ ಚಲಿಸಲು ಹೇಳಬಹುದು. ಹಾಗೆಯೇ ಆಮ್ಲಜನಕ ಉತ್ಪಾದಕಗಳು ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲು ಸಾಧ್ಯವಾದೀತು. ಇದರಿಂದ ಪರಿಸರ ನಾಶ ಕಡಿಮೆಯಾಗುತ್ತದೆ. ಇದರಿಂದ ಹೊಸ ಯುಗದ ಆರಂಭವಾಗಲಿದೆ "ಎಂದು ದಿವ್ಯಾಂಶಿ ಬರೆದಿದ್ದಾರೆ.

ಈ ಭಾರಿ ಡೂಡಲ್ ಫಾರ್ ಗೂಗಲ್ 2019ರ ಸ್ಪರ್ಧೆಯನ್ನ ದೇಶದಾದ್ಯಂತ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದೇಶದಾದ್ಯಂತ ಅಧಿಕ ಮಕ್ಕಳು ಭಾಗವಹಿಸಿದ್ದರು. ಈ ಮಕ್ಕಳನ್ನೆಲ್ಲಾ ಹಿಂದಿಕ್ಕಿ ವಿದ್ಯಾರ್ಥಿ ದಿವ್ಯಾಂಶಿ ಜಯಗಳಿಸಿದ್ದಾರೆ.

ವಿದ್ಯಾರ್ಥಿ ದಿವ್ಯಾಂಶಿ ಬಿಡಿಸಿರುವ ಡೂಡಲ್ ಪರಿಸರಕ್ಕೆ ಸಂಬಂಧಪಟ್ಟದ್ದಾಗಿದೆ. ಆಕಾಶ, ಬೆಟ್ಟ, ಮರಗಿಡಗಳು ಚಪ್ಪಲಿ ಹಾಕಿಕೊಂಡು ಒಂದೆಡೆಯಿಂದ ಇನ್ನೊಂದೆಡೆ ಚಲಿಸುತ್ತಿರುವ ದೃಶ್ಯಗಳನ್ನು ಕ್ರೆಯಾನ್ಸ್‌ನಲ್ಲಿ ಬಿಡಿಸಿ ಬಣ್ಣ ಹಚ್ಚಲಾಗಿದೆ. ಇನ್ನು ಮರ, ಸೈಕಲ್ ಮತ್ತು ಹಸಿರಿನ ಎಲೆಗಳಿಂದ ಗೂಗಲ್ ಪದಗಳನ್ನ ಚಿತ್ರಿಸಲಾಗಿದೆ. ಈ ಚಿತ್ರಕಲೆ ನಿಜಕ್ಕೂ ಆಕರ್ಷಕವಾಗಿದ್ದು, ಅಷ್ಟೇ ಅಲ್ಲದೇ ಸುಂದರವಾಗಿಯೂ ಇದೆ.

For Quick Alerts
ALLOW NOTIFICATIONS  
For Daily Alerts

English summary
Jawaharlal Nehru was born on 14 November 1889, in a wealthy Kashmiri Brahmin family in Allahabad, Uttar Pradesh. His father, Motilal Nehru appointed English and Scottish teachers to supervise his children’s education at home. For higher education, young Nehru was sent to Harrow school, then later to Cambridge University in England to obtain a degree in natural sciences
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more