ದಿನಕ್ಕೆ 3.52 ಕೋಟಿ ಪಡೆಯುವ ಸುಂದರ್ ಪಿಚೈ ಸಾಧನೆ ಹಾದಿ

ಗೂಗಲ್ ಕಂಪನಿ ಸಿಇಒ ಆಗಿ ಸುದ್ದಿ ಮಾಡಿದ್ದ ಭಾರತದ ಸುಂದರ್ ಪಿಚೈ ಈಗ ಅತ್ಯಂತ ಗರಿಷ್ಠ ವೇತನ ಪಡೆಯುವ ಸಿಇಒ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಗೂಗಲ್ ಕಂಪನಿ ಸಿಇಒ ಆಗಿ ಸುದ್ದಿ ಮಾಡಿದ್ದ ಭಾರತದ ಸುಂದರ್ ಪಿಚೈ ಈಗ ಅತ್ಯಂತ ಗರಿಷ್ಠ ವೇತನ ಪಡೆಯುವ ವಿಶ್ವದ ಐದನೇ ಸಿಇಒ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಸುಂದರ್‌ ಪಿಚೈ ಅವರ ವೇತನದಲ್ಲಿ ಭಾರೀ ಏರಿಕೆಯಾಗಿದ್ದು, 2015ಕ್ಕೆ ಹೋಲಿಸಿದರೆ 2016ರ ವೇತನ ದುಪ್ಪಟ್ಟಾಗಿದೆ. 2016ಕ್ಕೆ ಅವರು 200 ಮಿಲಿಯನ್‌ ಡಾಲರ್‌(ಸುಮಾರು 1285.5 ಕೋಟಿ ರು) ವೇತನ ಪಡೆದಿದ್ದಾರೆ. ದಿನದ ಲೆಕ್ಕದಲ್ಲಿ ಹೇಳುವುದಾದರೆ ಅವರ ವೇತನ 3.52 ಕೋಟಿಗೂ ಅಧಿಕ.

2015ರಲ್ಲಿ ಅವರು 99.8 ಮಿಲಿಯನ್‌ ಡಾಲರ್‌ ವೇತನವನ್ನು ಪಡೆದಿದ್ದರು. ಪಿಚೈ ನೇತೃತ್ವದಲ್ಲಿ ಬಿಡುಗಡೆಯಾದ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾದವು ಪಿಚೈ ಮುಖ್ಯಸ್ಥರಾದ ಬಳಿಕ ಯೂಟ್ಯೂಬ್‌ ವ್ಯವಹಾರ ಹಾಗೂ ಜಾಹೀರಾತು ಆದಾಯದಲ್ಲಿ ದೊಡ್ಡ ಮಟ್ಟಿನ ಏರಿಕೆ ದಾಖಲಿಸಿತು. ಮೆಷಿನ್‌ ಲರ್ನಿಂಗ್‌ ಮೇಲೆ ಹೂಡಿಕೆ ಹಾಗೂ ಹಾರ್ಡ್‌ವೇರ್‌, ಕ್ಲೌಡ್‌ ಕಂಪ್ಯೂಟಿಂಗ್‌ ವ್ಯವಹಾರದಲ್ಲೂ ಏರಿಕೆ ದಾಖಲಿಸಿತು.

ಗೂಗಲ್‌ ಕಂಪೆನಿಯು 2016ರಲ್ಲಿ ತನ್ನದೇ ಹೊಸ ಸ್ಮಾರ್ಟ್‌ಫೋನ್‌, ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ ಇತ್ಯಾದಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು. ಪಿಚೈ ನೇತೃತ್ವದಲ್ಲಿ ಬಿಡುಗಡೆಯಾದ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದನ್ನು ಪರಿಗಣಿಸಿ, ಕಂಪೆನಿಯ ವೇತನ ಸಮಿತಿಯು ಭರ್ಜರಿ ವೇತನ ನಿಗದಿಪಡಿಸಲಾಗಿದೆ.

ಸುಂದರ್ ಪಿಚೈ ಸಾಧನೆ ಹಾದಿ

ಪಿಚೈ ಶೈಕ್ಷಣಿಕ ಸಾಧನೆ

ಪಿಚೈ ಮದ್ರಾಸಿನಲ್ಲಿ ತನ್ನ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು. ಅಲ್ಲಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು ಅಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ಎಮ್.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು. ಅಲ್ಲಿ ಅವರು ಸಿಬೆಲ್ ಸ್ಕಾಲರ್ ಹಾಗೂ ಪಾಲ್ಮರ್ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು.

ಪಿಚೈ ವೃತ್ತಿ ಬದುಕು

ಶಿಕ್ಷಣ ಮುಗಿಸಿದ ತಕ್ಷಣ ಪಿಚೈ ಮೆಕಿನ್ಸೆ ಅಂಡ್ ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು.

2004 ಗೂಗಲ್ ಕಂಪನಿಯಿಂದ ಆಫರ್ ಬಂದಿತು. ಅಲ್ಲಿಂದ ಜೀವನ ತಿರುವು ಪಡೆಯಿತು.ಆರಂಭದಲ್ಲಿ ಗೂಗಲ್ ಕ್ರೋಮ್ ನಲ್ಲಿ ಮಹತ್ವದ ಪಾತ್ರ ವಹಿಸಿದರು. ಗೂಗಲ್ ಕ್ರೋಮ್ ಇಂದು ಪ್ರತಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿ ಇನ್ ಸ್ಟಾಲ್ ಆಗಿದ್ದರೆ ಅದರಲ್ಲಿ ಸುಂದರ್ ಪಾತ್ರ ಮುಖ್ಯವಾದುದು.

ನಂತರದಲ್ಲಿ ಗೂಗಲ್ ಡ್ರೈವ್ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದ ಬಳಿಕ ಜಿ ಮೇಲ್, ಗೂಗಲ್ ಮ್ಯಾಪ್ ಡೆವಲಪ್ ಕೂಡ ಮಾಡುವಲ್ಲಿ ಶ್ರಮ ವಹಿಸಿದರು. ಇಂದು ಜಗತ್ತಿನ ಮೂಲೆಮೂಲೆಯಲ್ಲಿ ಗೂಗಲ್ ವ್ಯಾಪಿಸುವಂತೆ ಕೆಲಸ ಮಾಡಿ ಅದರಲ್ಲಿ ಯಶಸ್ವಿಯಾದರು. ಹೀಗೆ ಗೂಗಲ್ ಕಂಪನಿಯ ವಿವಿಧ ಪ್ರಾಡೆಕ್ಟ್ ಗಳನ್ನು ಶ್ರಮಿಸಿದ ಫಲ ಅವರೀಗ ಅದೇ ಕಂಪನಿಯ ಸಿಇಓ. ಸದಾ ಭಿನ್ನವಾಗಿ ಯೋಚಿಸುತ್ತ ಹೊಸತನವನ್ನು ಹುಡುಕುವ ಪಿಚೈ ಇಂದು ಜಗತ್ತೇ ತನ್ನತ್ತ ತಿರುಗುವಂತೆ ಮಾಡಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
Google's 44-year-old India-born CEO Sundar Pichai received nearly USD 200 million in compensation last year, double the amount he got in 2015.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+