ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆಯು ತನ್ನ ಉದ್ಯೋಗಿಗಳು ಮತ್ತು ಗುತ್ತಿಗೆದಾರ ಸಿಬ್ಬಂದಿಗೆ 2021 ಜುಲೈವರೆಗೂ ಮನೆಯಿಂದಲೇ ಕೆಲಸ ಮಾಡಬೇಕೆಂದು ತಿಳಿಸಿದೆ.

ಕೊರೊನಾವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಸಂಸ್ಥೆಯು ತನ್ನ 2 ಲಕ್ಷ ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದುವರೆಗೂ ಅನೇಕ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಿವೆ. ಆದರೆ 2021ರ ವರ್ಷಕ್ಕೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿರುವ ಏಕೈಕ ಕಂಪನಿ ಗೂಗಲ್ ಆಗಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಪಿಚೈ ಸೋಮವಾರ ಹೊರಡಿಸಿದ ರಿಮೋಟ್-ವರ್ಕ್ ಆದೇಶವು ಗೂಗಲ್‌ನ ಕಾರ್ಪೊರೇಟ್ ಪೋಷಕ ಆಲ್ಫಾಬೆಟ್ ಇಂಕ್ ಒಡೆತನದ ಇತರ ಕಂಪನಿಗಳಿಗೂ ಅನ್ವಯಿಸಲಿದೆ. ಈ ವರ್ಷ ಉಳಿದ ದಿನಗಳಲ್ಲಿ ತನ್ನ ಹೆಚ್ಚಿನ ಕಚೇರಿಗಳನ್ನು ಮುಚ್ಚುವ ಗೂಗಲ್‌ನ ಹಿಂದಿನ ಯೋಜನೆಗೆ ಆರು ತಿಂಗಳ ವಿಸ್ತರಣೆ ಮಾಡಲಾಗಿದೆ.
ಗೂಗಲ್ ಈ ಮೊದಲು ಜುಲೈ 6, 2020 ರೊಳಗೆ ತನ್ನ ಕೆಲವು ಕಚೇರಿಗಳನ್ನು ಮತ್ತೆ ತೆರೆಯುವ ಯೋಜನೆಯನ್ನು ಹೊಂದಿತ್ತು. ಆದರೆ ಈಗ ಸೇರ್ಪಡೆ ದಿನಾಂಕವನ್ನು ಜುಲೈ 2021 ರವರೆಗೆ ವಿಸ್ತರಿಸಿದೆ.


Click it and Unblock the Notifications











