ಇದುವರೆಗೂ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್, ಗ್ರಾಜ್ಯುಯೆಟ್ ಫಾರ್ಮಾಸಿ ಅಪ್ಟಿಟ್ಯುಡ್ ಟೆಸ್ಟ್ ಆಯೋಜನೆ ಮಾಡುತ್ತಿತ್ತು. ಇನ್ನು ಮುಂದಿನ ವರ್ಷದಿಂದ ನ್ಯಾಷನಲ್ ಟೆಸ್ಟ್ ಏಜೆನ್ಸಿಯು ಈ ಪರೀಕ್ಷೆಯನ್ನ ಆಯೋಜಿಸಲಿದೆ. ಮಾಸ್ಟರ್ ಇನ್ ಫಾರ್ಮಸಿ ಪ್ರೋಗ್ರಾಂಗೆ ಅಭ್ಯರ್ಥಿಗಳನ್ನ ಅಡ್ಮಿಶನ್ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ. ನವಂಬರ್ 1, 2018 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇದು ಮೂರು ಗಂಟೆಗಳ ಕಾಲ ನಡೆಯುವ ಪರೀಕ್ಷೆಯಾಗಿದ್ದು, ಪ್ರತೀ ವರ್ಷ ಈ ಪರೀಕ್ಷೆಯನ್ನ ಆಯೋಜಿಸಲಾಗುತ್ತದೆ. ಸ್ನಾತಕೋತ್ತರ ಪದವಿಗೆ ತಮಗೆ ಬೇಕಾದಂತಹ ಕಾಲೇಜಿನಲ್ಲಿ ಸೀಟು ಪಡೆಯಬೇಕಾದ್ರೆ ಫಾರ್ಮಾ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಬರೆಯಬೇಕು.
ಜಿಪಿಎಟಿ 2019: ಪ್ರಮುಖ ದಿನಾಂಕಗಳು
- ಅರ್ಜಿ ಪ್ರಕ್ರಿಯೆ ಆರಂಭ ದಿನಾಂಕ: ನವಂಬರ್ 1, 2018
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 30, 2018
- ಪರೀಕ್ಷೆ ದಿನಾಂಕ: ಜನವರಿ 28, 2018
- ಪರೀಕ್ಷೆ ಅವಧಿ : 3 ಗಂಟೆ
- ಪರೀಕ್ಷೆ ಮಾದರಿ: ಆನ್‌ಲೈನ್
ಜಿಪಿಎಟಿ 2019 ಅರ್ಜಿ ಸಲ್ಲಿಕೆ ಹೇಗೆ?
- ಸ್ಟೆಪ್ 1: ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಮೊದಲಿಗೆ ಅರ್ಜಿಯಲ್ಲಿ ಕೇಳಿರುವ ಮೂಲಭೂತ ಮಾಹಿತಿಗಳನ್ನ ಭರ್ತಿ ಮಾಡಿ
- ಸ್ಟೆಪ್ 2: ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟ ಮಾಹಿತಿಗಳನ್ನ ಭರ್ತಿ ಮಾಡಿ, ದಾಖಲೆಗಳ ಸ್ಕ್ಯಾನ್ ಪ್ರತಿ ರೆಡಿಯಾಗಿಟ್ಟುಕೊಂಡಿರಿ
- ಸ್ಟೆಪ್ 3: ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು. ಆಫ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡ ಬಯಸುವ ಅಭ್ಯರ್ಥಿಗಳು ಚಲನ್ ಜನರೆಟ್ ಮಾಡಿಕೊಂಡು, ಬ್ಯಾಂಕ್‌ಗೆ ಹೋಗಿ ಶುಲ್ಕ ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆಗಳು:
- ಅಭ್ಯರ್ಥಿಗಳು ಫಾರ್ಮಸಿ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಪದವಿ ಪಡೆದಿರಬೇಕು
- ಯಾರು ಬಿ ಫಾರ್ಮಸಿ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ ಅವರು ಕೂಡಾ ಅರ್ಜಿ ಸಲ್ಲಿಸಬಹುದು
- ಬಿಟೆಕ್ (ಫಾರ್ಮಾಸೆಟಿಕಲ್ ಮತ್ತು ಫೈನ್ ಕೆಮಿಕಲ್ ಟೆಕ್ನಾಲಾಜಿ ಸ್ಟಡಿ ಮಾಡಿರುವ ಅಭ್ಯರ್ಥಿಗಳು ಈ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಹತೆ ಹೊಂದಿಲ್ಲ.
For Quick Alerts
For Daily Alerts
English summary
The registration process for the Graduate Pharmacy Aptitude Test (GPAT) has started. All India Council for Technical Education (AICTE) until now conducted this exams. From next year, the test will be organised by the NTA (National Test Agency).All India Council for Technical Education (AICTE) has announced commencement of GPAT 2018 registration and its dates.
Story first published: Saturday, November 3, 2018, 13:04 [IST]


Click it and Unblock the Notifications











