ಸಾರ್ವಜನಿಕ ಶಿಕ್ಷಣ ಇಲಾಖೆ ಹೈದರಾಬಾದ್-ಕರ್ನಾಟಕ ಪ್ರದೇಶದ 6 ಜಿಲ್ಲೆಗಳೂ ಸೇರಿದಂತೆ 34 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ತರಗತಿಗಳ) ವೃಂದ'ದ ಒಟ್ಟು 10,611 ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಏಪ್ರಿಲ್ 25,2019 ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಮಾಡಲಿದ್ದು ಮಾಡಲಿದ್ದು ಇದೀಗ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗಿದೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ನೇಮಕಾತಿಗಾಗಿ ದಿನಾಂಕ 18-05-2019 ಹಾಗೂ 19-05-2019 ರಂದು ಹೈದಾರಾಬಾದ್ ಕರ್ನಾಟಕ ಶೇ 80 ಸ್ಥಳೀಯ ವೃಂದದ ಹುದ್ದೆಗಳಿಗೆ ಮತ್ತು ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಹೈದರಾಬಾದ್ ಕರ್ನಾಟಕ ರಾಜ್ಯಮಟ್ಟದ ಸ್ಥಳೀಯ ವೃಂದದ ಶೇ.8 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ -1 ನ್ನು ದಿನಾಂಕ 1-06-2019 ಹಾಗೂ 2-06-2019 ಮತ್ತು ಹೈದರಾಬಾದ್ ಕರ್ನಾಟಕ ಶೇ.20 ಮಿಕ್ಕುಳಿದ ಹುದ್ದೆಗಳಿಗೆ ಮತ್ತು ಬೆಂಗಳೂರು ಬಿ.ಬಿ.ಎಂ.ಪಿ ವ್ಯಾಪ್ತಿಯ ಹೈದರಾಬಾದ್ - ಕರ್ನಾಟಕ ರಾಜ್ಯ ಮಟ್ಟದ ಸ್ಥಳೀಯ ವೃಂದದ ಶೇ.8 ಹೊರತು ಶೇ.92 ಹುದ್ದೆಗಳಿಗೆ ಮತ್ತು ಇತರೆ ಜಿಲ್ಲೆಗಳ ಶೇ.100 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ -2ನ್ನು ದಿನಾಂಕ 25-05-2019 ಹಾಗೂ 26-05-2019 ಕ್ಕೆ ಸದರಿ ಪರೀಕ್ಷೆಯ ದಿನಾಂಕವನ್ನು ನಿಗದಿ ಪಡಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸುತ್ತಿರತಕ್ಕದ್ದು.


Click it and Unblock the Notifications











