ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇಲಾಖೆಯು 10,611 ಹುದ್ದೆಗಳ ನೇಮಕಾತಿಗೆ ಏಪ್ರಿಲ್ 10,2019 ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೇ 25 ಮತ್ತು ಮೇ 26,2019 ರಂದು ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಪರೀಕ್ಷಾ ಕೀ-ಉತ್ತರವನ್ನು ಈಗ ವೀಕ್ಷಿಸಬಹುದು.

ಅಭ್ಯರ್ಥಿಗಳು ತಮ್ಮ ಬಳಿಯಿರುವ ಓ.ಎಂ.ಆರ್ ಪ್ರತಿಯೊಂದಿಗೆ ಕೀ ಉತ್ತರಗಳನ್ನು ತಾಳೆ ನೋಡಿ. ಆಕ್ಷೇಪಣೆಗಳಿದ್ದಲ್ಲಿ ನಿಗದಿತ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬುದು.ಆಕ್ಷೇಪಣೆಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬಹುದು. ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಕೀ ಉತ್ತರಗಳನ್ನು ಪಡೆಯುವ ವಿಧಾನ:
* ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ http://www.schooleducation.kar.nic.in/ ಗೆ ಭೇಟಿ ನೀಡಿ
* ನಂತರ ಅಲ್ಲಿ "key answers of graduate primary teacher recruitment for classes 6 to 8-2019-20" ಮೇಲೆ ಕ್ಲಿಕ್ ಮಾಡಿ ಕೀ ಉತ್ತರಗಳನ್ನು ವೀಕ್ಷಿಸಬಹುದು.
* ಅಭ್ಯರ್ಥಿಗಳು ಕೀ -ಉತ್ತರದ ಬಗೆಗೆ ಆಕ್ಷೇಪಣೆ ಇದ್ದಲ್ಲಿ ಮತ್ತೆ ಹೋಂ ಪೇಜ್‌ಗೆ ಹೋಗಿ
* ಅಲ್ಲಿ "Online Objection form for the key answers of GPSTR-2019" ಮೇಲೆ ಕ್ಲಿಕ್ ಮಾಡಿ
* ನಿಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ನೀಡಿ ಲಾಗಿನ್ ಆಗಿ
* ಅಭ್ಯರ್ಥಿಗಳು ನಿಮ್ಮ ಆಕ್ಷೇಪಣೆಯನ್ನು ಸಲ್ಲಿಸಿ
ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಸಲ್ಲಿಸಲು ಜೂನ್ 25,2019 ಕೊನೆಯ ದಿನವಾಗಿರುತ್ತದೆ.ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ನೇರವಾಗಿ ಕೀ ಉತ್ತರವನ್ನು ವೀಕ್ಷಿಸಲು ಮುಂದೆ ನೋಡಿ ಮತ್ತು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











