ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಈಗ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲಯವು ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಲ ಮುಂದಾಗಿವೆ. 'ಇಂಡಿಯನ್ ರಿಲಿಜಿಯನ್ಸ್ ಥ್ರೂ ದೇರ್ ನರೇಟಿವ್ ಲಿಟ್ರೇಚರ್ ' (Indian Religions Through Their Narrative Literatures)ಕೋರ್ಸ್ ಮೂಲಕ ಈ ಮಹಾಕಾವ್ಯಗಳನ್ನು ಪಠ್ಯದಲ್ಲಿ ಪರಿಚಯಿಸಲಾಗುತ್ತಿದೆ.

ಈ ವರ್ಷದ ಆರಂಭಕ್ಕೆ ಕೋರ್ಸ್ ಆರಂಭವಾಗಲಿದ್ದು, ಭಾರತೀಯ ಧರ್ಮ, ಕವಿ ವ್ಯಾಸ ಮತ್ತು ವಾಲ್ಮೀಕಿಯ ದೃಷ್ಟಿಕೋನ, ಸಿನಿಮಾ ಮತ್ತು ಧಾರವಾಹಿಗಳಲ್ಲಿ ಮಹಾಕಾವ್ಯಗಳನ್ನು ಬಳಸಿಕೊಂಡ ಬಗೆಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಸೌತ್ ಏಷಿಯನ್ ರಿಲೀಜಿಯನ್ಸ್‌ನ ಪ್ರೊಫೆಸರ್ ಅಣ್ಣೆ ಈ ಮೋನಿಸ್ ತಿಳಿಸಿದ್ದಾರೆ.
ಇದರ ಜೊತೆಗೆ ದಕ್ಷಿಣ ಏಷ್ಯಾದ ಧಾರ್ಮಿಕ ಸಂಪ್ರದಾಯಗಳು ಮತ್ತು ಸಮುದಾಯಗಳು ಕುರಿತ ಕೋರ್ಸ್‌ಗಳನ್ನು ಆರಂಭಿಸಲಿದ್ದು, ಇಲ್ಲಿನ ನೃತ್ಯ ಪ್ರಕಾರಗಳು, ತೊಗಲು ಗೊಂಬೆ, ಬೀದಿ ನಾಟಕ, ಆಧುನಿಕ ಕಾಲಘಟ್ಟದಲ್ಲಿ ಮಹಾಕಾವ್ಯಗಳ ಬಳಕೆ ಕುರಿತಾದ ವಿಷಯಗಳನ್ನು ಇತಿಹಾಸ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ.
ಭಾರತೀಯ ಮಹಾಕಾವ್ಯಗಳು ದೀರ್ಘ ಮತ್ತು ಸಂಕೀರ್ಣ ನಿರೂಪಣೆಯನ್ನು ಹೊಂದಿವೆ. ಇದರಲ್ಲಿ ಬರುವ ಪ್ರತಿಯೊಂದು ಅಂಶವೂ ಮಾನವನ ಅನುಭವಕ್ಕೆ ತಲುಪುವಂತಹುವೇ ಆಗಿವೆ. ಮಹಾಭಾರತವು ಯುದ್ಧದ ದುರಂತ ಅಂತ್ಯ ಮತ್ತು ಅವುಗಳಿಂದ ಉಂಟಾಗುವ ಸಾವು ನೋವುಗಳನ್ನು ಅತ್ಯಂತ ಸೂಕ್ಷ್ಮವಾಗಿ ಹೇಳಿದೆ. ರಾಮಾಯಣ ಕೂಡ ಒಂದು ಅದ್ಭುತ ಪ್ರೇಮಕಾವ್ಯವಾಗಿದೆ ಎಂದು ವಿಶ್ವವಿದ್ಯಾಲಯದ ಪ್ರೊಫೆಸರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಈ ಕೋರ್ಸ್ ಅನ್ನು ಯಾವ ಮಟ್ಟಿಗೆ ಸ್ವೀಕರಿಸುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ ಕೋರ್ಸ್‌ನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳೇ ಆನಂತರ ಇದನ್ನು ಕೊಂಡಾಡಲಿದ್ದಾರೆ. ಆ ಮೂಲಕ ಮಹಾಕಾವ್ಯಗಳ ಅಧ್ಯಯನ ಮತ್ತು ಹಿಂದೂ ಧರ್ಮದ ವಿವಿಧ ಆಯಾಮಗಳನ್ನು, ಸಂಪ್ರದಾಯಗಳನ್ನು ಶೋಧಿಸಲು ನೆರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


Click it and Unblock the Notifications











