ಕೆಎಸ್‌ಒಯು: ತಾಂತ್ರಿಕೇತರ ಕೋರ್ಸ್‌ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡಲು ಹೈಕೋರ್ಟ್ ಆದೇಶ

ಯುಜಿಸಿ ನಿಯಮ ಉಲ್ಲಂಘನೆಯಿಂದ ಮುಕ್ತ ವಿವಿಯ ಮಾನ್ಯತೆ ರದ್ದಾಗಿದ್ದು, ಈ ಕುರಿತು 2015ರ ಜೂನ್ 16ರಂದು ಯುಜಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಯುಜಿಸಿ 2013ನೇ ಸಾಲಿನಿಂದ ರದ್ದುಪಡಿಸಿತ್ತು.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) 2017-18ನೇ ಸಾಲಿನ ತಾಂತ್ರಿಕೇತರ ಕೋರ್ಸ್‌ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡಲು ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್ ನ ಈ ಆದೇಶದಿಂದಾಗಿ ಕೆಎಸ್‌ಒಯು ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳಲ್ಲಿ ಕೊಂಚ ಆಶಾಭಾವ ಮೂಡಿದೆ.

ಯುಜಿಸಿ ನಿಯಮ ಉಲ್ಲಂಘನೆಯಿಂದ ಮುಕ್ತ ವಿವಿಯ ಮಾನ್ಯತೆ ರದ್ದಾಗಿದ್ದು, ಈ ಕುರಿತು 2015ರ ಜೂನ್ 16ರಂದು ಯುಜಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಯುಜಿಸಿ 2013ನೇ ಸಾಲಿನಿಂದ ರದ್ದುಪಡಿಸಿತ್ತು. ಅಲ್ಲಿಂದ ಇಲ್ಲಿವರೆಗೂ ವಿ.ವಿಗೆ ಮಾನ್ಯತೆ ಸಿಕ್ಕಿಲ್ಲ.

ಕೆಎಸ್‌ಒಯು ಮಾನ್ಯತೆಗೆ ಹೈಕೋರ್ಟ್ ಆದೇಶ

ಕೆಎಸ್‌ಒಯುನ ವಿವಿಧ ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಯುಜಿಸಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

'ದೇಶದ ಬೇರೆ ಬೇರೆ ವಿವಿಗಳಿಗೆ ಅವಧಿ ಮೀರಿದ ಬಳಿಕವೂ ಮಾನ್ಯತೆ ನೀಡಬಹುದಾದರೆ ಕೆಎಸ್‌ಒಯುಗೆ ಏಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ' ಎಂದು ಪ್ರಶ್ನಿಸಿದ ನ್ಯಾಯಪೀಠ, ಬೇರೆ ವಿವಿಗಳಂತೆ ಕರ್ನಾಟಕ ಮುಕ್ತ ವಿವಿಗಳ ಕೋರ್ಸಿಗೂ ಮಾನ್ಯತೆ ನೀಡಿ ಎಂದು ಆದೇಶಿಸಿದೆ.

ಕೆಎಸ್‌ಒಯು ಮನವಿ ತಿರಸ್ಕರಿಸಲು ಯುಜಿಸಿ ಅಧಿಕಾರಿಗಳು ನೀಡಿರುವ ಕಾರಣ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ ವಿದ್ಯಾರ್ಥಿಗಳ ಹಿತ ಕಾಯಲು ಆಯೋಗ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿತು

ಯಾವುದೇ ಅಧ್ಯಯನ ಕೇಂದ್ರಗಳಲ್ಲದೇ ನೇರವಾಗಿ ವಿಶ್ವವಿದ್ಯಾಲಯದಲ್ಲಿ ದಾಖಲಾಗಿರುವ ತಾಂತ್ರಿಕೇತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ 2017-18ನೇ ಸಾಲಿಗೆ ಮಾನ್ಯತೆ ನೀಡಬೇಕು ಎಂದು ಯುಜಿಸಿಗೆ ನಿರ್ದೇಶಿಸಿತು.

2017-18ನೇ ಸಾಲಿಗೆ ಮುಕ್ತ ವಿವಿ ಮಾನ್ಯತೆ ನವೀಕರಣ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಯುಜಿಸಿ ಫ್ಯಾಕ್ಸ್ ಮೂಲಕ ಡಿ.11ರಂದು ಸಂಜೆ ರವಾನೆ ಮಾಡಿದೆ. ಇದನ್ನು ಹೈಕೋರ್ಟ್​ಗೆ ಸಲ್ಲಿಸಲಾಯಿತು. ಈ ಕುರಿತು ವಿಚಾರಣೆ ನಡೆದ ಬಳಿಕ ಅದು ಈ ತೀರ್ಪು ನೀಡಿದೆ. ಯುಜಿಸಿಯಿಂದ ಈ ಕುರಿತು ಅಧಿಕೃತ ಮಾಹಿತಿ ಬಂದ ತಕ್ಷಣವೇ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅಧಿಸೂಚನೆ ಹೊರಡಿಸಲಾಗುವುದು. ಇದಕ್ಕಾಗಿ ಮುಕ್ತ ವಿವಿ ಸಕಲ ರೀತಿಯಲ್ಲಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಶಿವಲಿಂಗಯ್ಯ ಹೇಳಿದ್ದಾರೆ.

ಈಗಾಗಲೇ ಪಾಸಾಗಿರುವ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗ, ಅನ್ಯಕೋರ್ಸ್ ಪ್ರವೇಶಕ್ಕೂ ಈ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತಿಲ್ಲ. ಈ ತೀರ್ಪಿನ ಅನ್ವಯ ಮಾನ್ಯತೆ ನವೀಕರಣವಾದರೆ, ಹೊಸ ವಿದ್ಯಾರ್ಥಿಗಳ ಪ್ರವೇಶಾತಿಗೆ ಮುಕ್ತ ವಿವಿಗೆ ಅವಕಾಶ ದೊರೆಯಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
The Karnataka high court on Tuesday directed the University Grants Commission (UGC) to give recognition to the Mysuru-based Karnataka State Open University (KSOU) for 2017-18 in two weeks.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+