ರಾಜ್ಯದ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದ್ದು ಕಡಲ ತೀರದ ನಗರಗಳು ಮುಂಚೂಣಿಯಲ್ಲಿವೆ. ಪಿಯುಸಿಯಲ್ಲಿ ಫ್ರಥಮ ಸ್ಥಾನ ಪಡೆದಿದ್ದ ಉಡುಪಿ ಎಸ್ ಎಸ್ ಎಲ್ ಸಿ ಯಲ್ಲೂ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ. ವಿಶೇಷ ಎಂಬಂತೆ ಬೀದರ್ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಕೊನೆಯ ಸ್ಥಾನ ಪಡೆದು ಅಚ್ಚರಿಯನ್ನುಂಟು ಮಾಡಿದೆ.
ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಭಾರೀ ಏರಿಳಿತಗಳು ಕಂಡುಬಂದಿದ್ದು, ಕಳೆದ ಸಾಲಿಗೆ ಹೋಲಿಸಿದರೆ ರಾಜ್ಯವು ಶೇ.8 ರಷ್ಟು ಕುಸಿತ ಕಂಡಿದೆ. 2016 ರಲ್ಲಿ 75.11 ಇದ್ದ ಫಲಿತಾಂಶವು ಈ ಬಾರಿ 67.87 ಕ್ಕೆ ಕುಸಿದಿದೆ.

ಅತ್ಯಂತ ಬಿಗಿ ಭದ್ರತೆಯಿಂದ ನಡೆದ ಪರೀಕ್ಷೆ ಮತ್ತು ಮೌಲ್ಯಮಾಪನವೇ ಈ ರೀತಿಯ ಫಲಿತಾಂಶಕ್ಕೆ ಕಾರಣ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್ ಸೇಠ್ ತಿಳಿಸಿದ್ದಾರೆ. "ಈ ಬಾರಿಯ ಫಲಿತಾಂಶವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಶ್ರಮಕ್ಕೆ ಸಂದ ಫಲಿತಾಂಶವಾಗಿದೆ" ಎಂದು ಅವರು ಹೇಳಿದ್ದಾರೆ.
ಜಿಲ್ಲಾವಾರು ಫಲಿತಾಂಶ
| ಜಿಲ್ಲೆ | ಶೇಕಡ | ಸ್ಥಾನ |
| ಉಡುಪಿ | 84023 | 1 |
| ದಕ್ಷಿಣ ಕನ್ನಡ | 82.39 | 2 |
| ಚಿಕ್ಕೋಡಿ | 80.47 | 3 |
| ಶಿರಸಿ | 80.09 | 4 |
| ಉತ್ತರಕನ್ನಡ | 79.82 | 5 |
| ರಾಮನಗರ | 78.55 | 6 |
| ಕೋಲಾರ | 78.51 | 7 |
| ಧಾರವಾಡ | 77.29 | 8 |
| ಕೊಡಗು | 77.09 | 9 |
| ಬೆಂಗಳೂರ ಗ್ರಾಮಾಂತರ | 77.03 | 10 |
| ಕೊಪ್ಪಳ | 76.05 | 11 |
| ಚಾಮರಾಜನಗರ | 75.66 | 12 |
| ಗದಗ | 75.62 | 13 |
| ದಾವಣಗೆರೆ | 75.33 | 14 |
| ಶಿವಮೊಗ್ಗ | 75.07 | 15 |
| ಯಾದಗಿರಿ | 74.84 | 16 |
| ಬಳ್ಳಾರಿ | 74.65 | 17 |
| ಚಿಕ್ಕಮಗಳೂರು | 74.4 | 18 |
| ಚಿತ್ರದುರ್ಗ | 72.64 | 19 |
| ವಿಜಯಪುರ | 72.23 | 20 |
| ಮೈಸೂರು | 72.03 | 21 |
| ಮಧುಗಿರಿ | 71.84 | 22 |
| ಮಂಡ್ಯ | 71.73 | 23 |
| ಬೆಂಗಳೂರು ಉತ್ತರ | 71.44 | 24 |
| ಬೆಳಗಾವಿ | 71.2 | 25 |
| ಹಾವೇರಿ | 70.46 | 26 |
| ಕಲಬುರಗಿ | 70.24 | 27 |
| ಚಿಕ್ಕಬಳ್ಳಾಪುರ | 70.13 | 28 |
| ಬೆಂಗಳೂರು ದಕ್ಷಿಣ | 69.92 | 29 |
| ರಾಯಚೂರು | 69.69 | 30 |
| ಹಾಸನ | 69.58 | 31 |
| ತುಮಕೂರು | 98.15 | 32 |
| ಬಾಗಲಕೋಟೆ | 64.53 | 33 |
| ಬೀದರ್ | 62.2 | 34 |
ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಉಡುಪಿ ನಂಬರ್ ಒನ್
For Quick Alerts
For Daily Alerts


Click it and Unblock the Notifications











